ಕರಾವಳಿ

ಕೋವಿಡ್ ಕರ್ಫ್ಯೂ ಉಲ್ಲಂಘಿಸಿ ರೆಸಾರ್ಟ್‌ನಲ್ಲಿ ಭರ್ಜರಿ ಪಾರ್ಟಿ : ಪೊಲೀಸರಿಂದ ಪ್ರಕರಣ ದಾಖಲು

Pinterest LinkedIn Tumblr

ಮಂಗಳೂರು, ಮೇ.05 : ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಮದುವೆ ಪಾರ್ಟಿ ಆಯೋಜಿಸಿದ ನಗರ ಹೊರವಲಯದ ಕುಳಾಯಿ ಶೋರ್ ಬೀಚ್ ರೆಸಾರ್ಟ್‌ಗೆ ಮಂಗಳವಾರ ರಾತ್ರಿ ಮನಪಾ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಶೋರ್ ರೆಸಾರ್ಟ್‌ನಲ್ಲಿ ಮಂಗಳವಾರ ಸಂಜೆ ಮದುವೆ ಪಾರ್ಟಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿಸಲಾಗಿತ್ತು. ಅಲ್ಲದೆ ಡಿಜೆ, ಮದ್ಯಪಾನದ ವ್ಯವಸ್ಥೆ ಮಾಡಲಾಗಿತ್ತು‌ ಎನ್ನಲಾಗಿದೆ.

ಕೋವಿಡ್ ಕಟ್ಟುನಿಟ್ಟಿನ ನಿಯಮವನ್ನು ಲೆಕ್ಕಿಸದೆ ಕುಳಾಯಿ ಬೀಚ್ ನ ರೆಸಾರ್ಟ್ ನಲ್ಲಿ ಭರ್ಜರಿ ಪಾರ್ಟಿ ನಡೆಸುತ್ತಿದ್ದ ಮಾಹಿತಿ ಪಡೆದ ಎಸಿ ಮದನ್ ಮೋಹನ್,ಎಸಿಪಿ ಅವರ ಜಂಟಿ ತಂಡ ಸ್ಥಳಕ್ಕೆ ದಾಳಿ ನಡೆಸಿ ಸಂಬಂಧ ಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗಳೂರು ನಗರ ವ್ಯಾಪ್ತಿಯ ಸುರತ್ಕಲ್ ಪೊಲೀಸ್ ಠಾಣೆಗೆ ಸೇರಿದ ಕುಳಾಯಿ ಶೋರ್ಸ್ ಬೀಚ್ ಹೌಸ್ ನಲ್ಲಿ ನಿನ್ನೆ ಸಂಜೆ ಮದುವೆಯ ಆರತಕ್ಷತೆಯ ಸಂಬಂಧ ಮಹಾನಗರ ಪಾಲಿಕೆ ಯ ವತಿಯಿಂದ ಅನುಮತಿ ಪಡೆದುಕೊಂದಿದ್ದು,ಅನುಮತಿ ಪಡೆದ್ದಕ್ಕಿಂತ ಹೆಚ್ಚು ಜನರು ಸೇರಿದ್ದರು ಎನ್ನಲಾಗಿದೆ.

ಈ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿಸಲಾಗಿತ್ತು. ಇದು ಮಾತ್ರವಲ್ಲದೆ ಡಿಜೆ, ಮದ್ಯಪಾನ ವ್ಯವಸ್ಥೆ ಮಾಡಲಾಗಿತ್ತು‌. ಈ ಬಗ್ಗೆ ಸ್ಥಳೀಯ ನಾಗರೀಕರು ದೂರಿದ ಮೇರೆಗೆ,ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್ ರವರು ಸ್ಥಳಕ್ಕೆ ಮಹಾನಗರಪಾಲಿಕೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅನುಮತಿಯ ನಿಬಂಧನೆಗಳನ್ನು ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅವರು ಕಾರ್ಯಕ್ರಮ ಆಯೋಜಕರ ವಿರುದ್ಧ ಹಾಗೂ ರೆಸಾರ್ಟ್ ಮಾಲಕರ ವಿರುದ್ಧ ಕೇಸು ದಾಖಲಿಸಲು ಸುರತ್ಕಲ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಪಾಲಿಕೆ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಮದುವೆ ಆಯೋಜಕರು ಮತ್ತು ಬೀಚ್ ಹೌಸ್ ನ ಮಾಲೀಕರ ಮೇಲೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Comments are closed.