ಕರಾವಳಿ

ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಜನಸಂದಣಿ ನಿಷೇಧ : ಜಿಲ್ಲಾಧಿಕಾರಿ ಆದೇಶ

Pinterest LinkedIn Tumblr

ಮಂಗಳೂರು, ಮೇ. 04 : ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಸರಣದ ಸರಪಳಿಯನ್ನು ತುಂಡರಿಸುವ ಸಲುವಾಗಿ ಸರ್ಕಾರದ ನಿರ್ದೇಶನದಂತೆ, ಜಿಲ್ಲಾಡಳಿತದ ವತಿಯಿಂದ ಕಾಲಕಾಲಕ್ಕೆ ಮುಂಜಾಗೃತಾ ಕ್ರಮಗಳನ್ನು ಕೈಕೊಂಡಿದೆ.

ಸಾರ್ವಜನಿಕರಆರೋಗ್ಯದ ಹಿತದೃಷ್ಟಿಯಿಂದಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯತೆಯನ್ನು ಮನಗಂಡು ವಿಪತ್ತು ನಿರ್ವಹಣಾಕಾಯ್ದೆ 2005 ರ ಕಲಂ 34, ಕರ್ನಾಟಕ ಸಾಂಕ್ರಾಮಿಕ ರೋಗಅಧಿನಿಯಮ, 2020 ರ ಕಲಂ 4 ರಲ್ಲಿ ಪ್ರದತ್ತವಾದಅಧಿಕಾರವನ್ನು ಚಲಾಯಿಸಿ, ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ಸಾರ್ವಜನಿಕರಅನಾವಶ್ಯಕಓಡಾಟವನ್ನು ಹಾಗೂ ಬಂದರಿನಲ್ಲಿ ರಿಟೇಲ್‍ ಅಥವಾ ಮೀನು ಚಿಲ್ಲರೆ ವ್ಯಾಪಾರ ಹಾಗೂ ಸಾರ್ವಜನಿಕರು ಮೀನು ಖರೀದಿಸುವುದನ್ನು ಮತ್ತು ಕತ್ತರಿಸುವಿಕೆ ಹಾಗೂ ಶುಚಿಗೊಳಿಸುವಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಅಧ್ಯಕ್ಷಡಾ. ರಾಜೆಂದ್ರ ಕೆ.ವಿ ಆದೇಶಿಸಿದ್ದಾರೆ.

ಸಾರ್ವಜನಿಕರು ಮೀನುಗಳನ್ನು ಅವರವರ ವ್ಯಾಪ್ತಿಯ ಸ್ಥಳೀಯ ಮಾರುಕಟ್ಟೆಯಲ್ಲಿಖರೀದಿಸಬೇಕು ಹಾಗೂ ಖರೀದಿಸಿದ ಮೀನುಗಳನ್ನು ತಮ್ಮ ಸ್ಥಳೀಯ ಮೀನು ಮಾರುಕಟ್ಟೆಯಲ್ಲಿ ಕತ್ತರಿಸಿ ಶುಚಿಗೊಳಿಸಿಕೊಳ್ಳ ಬಹುದಾಗಿದೆ.

Comments are closed.