ಕ್ರೀಡೆ

ಹಲವಾರು ಆಟಗಾರರು, ಸಿಬ್ಬಂದಿಗಳಿಗೆ ಕೊರೋನಾ ದೃಢಪಟ್ಟ ಹಿನ್ನೆಲೆ; ಐಪಿಎಲ್ ಸರಣಿ ರದ್ದು

Pinterest LinkedIn Tumblr

ನವದೆಹಲಿ: ಹಲವಾರು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಕಾರಣ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಅನ್ನು ರದ್ದು ಮಾಡಿದೆ.

ದೆಹಲಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯಕ್ಕೆ ಮುಂಚಿತವಾಗಿ ಎಸ್‌ಆರ್‌ಹೆಚ್ ಆಟಗಾರನೊಬ್ಬನಿಗೆ ಕೊರೋನಾ ಸೋಂಕು ದೃಢವಾದ ಹಿನ್ನೆಲೆ ಐಪಿಎಲ್ 2021ಅನ್ನು ರದ್ದು ಮಾಡಲಾಗಿದೆ.

ಈ ಸೀಸನ್ ನ ಐಪಿಎಲ್ ಸರಣಿಯನ್ನು ಅಮಾನತುಗೊಳಿಸಲಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಎಎನ್‌ಐಗೆ ತಿಳಿಸಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್‌ನ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ಬೌಲರ್ ಸಂದೀಪ್ ವಾರಿಯರ್ ಅವರಿಗೆ ಕೋವಿಡ್ -19 ಸೋಂಕು ದೃಢಪಟ್ಟ ನಂತರ ನಿನ್ನೆ ನಡೆಯಬೇಕಿದ್ದ ನೈಟ್ ರೈಡರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯಮುಂದೂಡಲಾಗಿತ್ತು.

Comments are closed.