ಕರಾವಳಿ

ಎಸ್ ಸಿಡಿಸಿಸಿ ಬ್ಯಾಂಕಿನ ಮಾಜಿ ವ್ಯವಸ್ಥಾಪನಾ ನಿರ್ದೇಶಕರಾದ ಶ್ರೀ ಮಾಧವ ಬಿ. ನಿಧನ

Pinterest LinkedIn Tumblr

ಮಂಗಳೂರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ( ಎಸ್ ಸಿಡಿಸಿಸಿ ಬ್ಯಾಂಕ್ ) ಇದರ ಮಾಜಿ ವ್ಯವಸ್ಥಾಪನಾ ನಿರ್ದೇಶಕರು ಹಾಗೂ ಸಹಕಾರ ಇಲಾಖೆಯ ನಿವೃತ್ತ ಜಂಟಿ ನಿಬಂಧಕರಾದ ಮಂಗಳಾದೇವಿ ನಿವಾಸಿ ಶ್ರೀ ಮಾಧವ ಬಿ . (91ವರ್ಷ) ಇವರು ಮಂಗಳವಾರ ( ಏಪ್ರಿಲ್-27ರಂದು) ಅಲ್ಪ ಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ ನಿಧನ ಹೊಂದಿದರು.

ಸಹಕಾರ ಇಲಾಖೆಯಲ್ಲಿ ಸುಮಾರು 36 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ನಿವೃತ್ತರಾಗುವಾಗ ಸಹಕಾರ ಸಂಘಗಳ ಜಂಟಿ ನಿಬಂಧಕರಾಗಿದ್ದರು. ಇವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ 1982 ರಿಂದ 1988 ರವರೆಗೆ ವ್ಯವಸ್ಥಾಪನಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಅಲ್ಲದೆ ಇವರು ಬ್ಯಾಂಕಿನ ಆಡಳಿತ ಮಂಡಳಿಯ ಮಾಜಿ ನಿರ್ದೇಶಕರು ಕೂಡ ಆಗಿದ್ದಾರೆ. ಮಂಗಳೂರು ಬಿಲ್ಡಿಂಗ್ ಸೊಸೈಟಿ ಸೇರಿದಂತೆ ಹಲವು ಸಹಕಾರ ಸಂಘಗಳಲ್ಲಿ ಅವರು ನಿರ್ದೇಶಕರಾಗಿದ್ದರು.

ಇವರು ಪತ್ನಿ ಹಾಗೂ ಎಸ್ ಸಿಡಿಸಿಸಿ ಬ್ಯಾಂಕಿನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀ ರವೀಂದ್ರ ಬಿ. ಸೇರಿ ಇಬ್ಬರು ಪುತ್ರರು , ಮೂವರು ಪುತ್ರಿಯರು ಮತ್ತು ಅಪಾರ ಬಂಧುಮಿತ್ರರನ್ನು ಆಗಲಿದ್ದಾರೆ.

ಡಾ.ಎಂಎನ್ ಆರ್.ಸಂತಾಪ :

ಎಸ್ ಸಿಡಿಸಿಸಿ ಬ್ಯಾಂಕಿನ ಮಾಜಿ ವ್ಯವಸ್ಥಾಪನಾ ನಿರ್ದೇಶಕರಾದ ಶ್ರೀ ಮಾಧವ ಬಿ. ನಿಧನಕ್ಕೆ ಬ್ಯಾಂಕಿನ ಅಧ್ಯಕ್ಷರಾದ ಡಾ ಎಂ ಎನ್ ರಾಜೇಂದ್ರ ಕುಮಾರ್ ಸಂತಾಪ ಸೂಚಿಸಿದ್ದಾರೆ.

ಸುಮಾರು ಆರು ವರ್ಷಗಳ ಕಾಲ ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕರಾಗಿ ಶ್ರೀ ಮಾಧವ ಬಿ. ಅವರು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದರು ಎಂದು ರಾಜೇಂದ್ರ ಕುಮಾರ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ. ಬ್ಯಾಂಕಿನ ನಿರ್ದೇಶಕರೆಲ್ಲರೂ ಕೂಡ ಸಂತಾಪವನ್ನು ಸೂಚಿಸಿದ್ದಾರೆ .

Comments are closed.