
ಮಂಗಳೂರು, ಎಪ್ರಿಲ್ 28: ರಾಜ್ಯದಲ್ಲಿ ಇಂದಿನಿಂದ ಮತ್ತೆ ಲಾಕ್ ಡೌನ್ ಜಾರಿಗೆ ಬಂದಿದೆ. ಮಂಗಳವಾರ ರಾತ್ರಿ 9ರಿಂದ ಮೇ 12ರ ತನಕ ಲಾಕ್ ಡೌನ್ ಆದೇಶ ಜಾರಿಯಲ್ಲಿರಲಿದೆ. ಈ ಸಂದರ್ಭದಲ್ಲಿ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗಿರಲಿದೆ.
ಲಾಕ್ ಡೌನ್ ಆದೇಶವನ್ನು ದ.ಕ. ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ನಡೆಸಿದೆ. ಲಾಕ್ ಡೌನ್ ಮಧ್ಯೆ ಪ್ರತೀ ದಿನ ಬೆಳಿಗ್ಗೆ 6ಗಂಟೆಯಿಂದ 10 ಗಂಟೆಯವರೆಗೆ ಅವಶ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಲಾಕ್ ಡೌನ್ ಸಂದರ್ಭ ಕರ್ನಾಟಕ ಸರಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಲಾಕ್ ಡೌನ್ ಸಂದರ್ಭ ಏನಿರುತ್ತೆ? ಏನಿರುವುದಿಲ್ಲ?- ಇಲ್ಲಿದೆ ವಿವರ
ಶಾಲಾ ಕಾಲೇಜುಗಳನ್ನು ಮೇ 12ರ ತನಕ ತೆರೆಯುವಂತಿಲ್ಲ
ಹೋಟೆಲ್ ಗಳಲ್ಲಿ ಪಾರ್ಸೆಲ್ ಮಾತ್ರ ಅವಕಾಶ .ಕೇವಲ ಆನ್ ಲೈನ್ ಗಾಗಿ ಅಡುಗೆ ಕೋಣೆ ತೆರೆಯಬಹುದು
ಲಾಕ್ ಡೌನ್ ಸಂದರ್ಭ ಇತಿಮಿತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ಅವಕಾಶ
ಮದುವೆ ಸಮಾರಂಭಕ್ಕೆ 50 ಜನ, ಅಂತ್ಯ ಸಂಸ್ಕಾರಕ್ಕೆ ಕೇವಲ 5 ಜನ
ಸಲೂನ್, ಬ್ಯೂಟಿಪಾರ್ಲರ್ ಗಳಿಗೆ ಈ ಬಾರಿ ಅವಕಾಶವಿಲ್ಲ
ಆಸ್ಪತ್ರೆಗಳು, ಮೆಡಿಕಲ್ ಗಳು, ತುರ್ತು ಸೇವೆಗಳಿಗೆ ಅವಕಾಶ
ಅನಗತ್ಯ ಸಂಚಾರಕ್ಕೆ ಯಾವುದೇ ಅವಕಾಶವಿಲ್ಲ
ಗೂಡ್ಸ್ ವಾಹನಗಳಿಗೆ ಅವಕಾಶ ಇದೆ
ಪ್ರತೀ ಬಾರ್ಡರ್ಗಳಲ್ಲಿ ಚೆಕ್ಪೋಸ್ಟ್ ನಿರ್ಮಾಣ
ಅಗತ್ಯ ಕಾರಣಗಳಿಗಾಗಿ ಸಂಚರಿಸುವವರಿಗೆ ಮಾತ್ರ ಅವಕಾಶ
ಬೆ.6-10ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
ಜನ ಮನೆಯಲ್ಲೇ ಇರುವಂತೆ ಮಾಡಲು ಹೋಂ ಡೆಲಿವರಿ ವ್ಯವಸ್ಥೆ
ಹೋಂ ಡೆಲಿವೆರಿ ಬಗ್ಗೆ ಮನಪಾ ಅಧಿಕಾರಿಗಳೊಂದಿಗೆ ಚರ್ಚೆ
ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಮಾಹಿತಿ ನೀಡಲಾಗುವುದು
ಎರ್ಮಜೆನ್ಸಿ ಅಂತರ್ರಾಜ್ಯ ಪ್ರಯಾಣಕ್ಕೆ ಅವಕಾಶ ಇದೆ
ಆಸ್ಪತ್ರೆ, ಚಿಕಿತ್ಸೆ ಇನ್ನಿತರ ಅವಶ್ಯಕತೆಗಳಿಗಾಗಿ ಪ್ರಯಾಣಿಸಬಹುದು
ಇನ್ನುಳಿದಂತೆ ಇತರೆ ಸಂಚಾರಕ್ಕೆ ಅವಕಾಶ ಇಲ್ಲ.
Comments are closed.