ಕರಾವಳಿ

ನಾಳೆ ಸಂಜೆಯಿಂದ ಮತ್ತೆ 14 ದಿನ ಲಾಕ್‍ಡೌನ್ : ಏನಿರುತ್ತೆ? ಏನಿರುವುದಿಲ್ಲ?- ಇಲ್ಲಿದೆ ವಿವರ

Pinterest LinkedIn Tumblr

ಮಂಗಳೂರು. ಎಪ್ರಿಲ್. 26: ಕರ್ನಾಟಕ ರಾಜ್ಯದಲ್ಲಿ ಕೋವಿಡ್ 19 ಸೋಂಕು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಪ್ರಿಲ್ .27ರ ರಾತ್ರಿಯಿಂದ ರಾಜ್ಯದಲ್ಲಿ ಮತ್ತೆ 14 ದಿನಗಳ ಕಾಲ ಲಾಕ್‍ಡೌನ್ ಮಾಡಲು ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.

14ದಿನಗಳ ಲಾಕ್‍ಡೌನ್ ಬಳಿಕವೂ ಪರಿಸ್ಥಿತಿ ಸುಧಾರಿಸದೇ ಇದ್ದರೆ ಮತ್ತೆ ಅವಲೋಕನ ನಡೆಸಿ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಚಿವ ಸಂಪುಟ ಸಭೆ ಬಳಿಕ ಮುಖ್ಯಮಂತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಲಾಕ್ ಡೌನ್ ಅವಧಿ ಸಂದರ್ಭ ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಅಗತ್ಯ ಸೇವೆಗಳಿಗೆ ವಿನಾಯಿತಿ ನಿಡಲಾಗಿದೆ. ಕೃಷಿ, ಮೆಡಿಕಲ್ ಸೇರಿ ಅಗತ್ಯ ಸೇವೆಗಳು ಎಂದಿನಂತೆ ಇರುತ್ತದೆ. ಬಹುತೇಕ ಈಗಿರುವ ರೀತಿಯಲ್ಲೇ ಕಪ್ರ್ಯೂ ಇರುತ್ತದೆ. ಯಾವುದೇ ವಾಹನ ಸಂಚಾರ ಇರುವುದಿಲ್ಲ.

ಆಮ್ಲಕನಕದ ಕೊರತೆ ಇಲ್ಲ : ಸಿ ಎಂ

ಕೋವಿಡ್ ಪೀಡಿತರಿಗೆ ಆಮ್ಲಕನಕದ ಕೊರತೆ ಇಲ್ಲ. ಯಾರೂ ಚಿಂತಿಸುವುದು ಬೇಡ. ಅಂಗಡಿ ಮುಂಗಟ್ಟುಕಾರರು ಎಲ್ಲಾ ನಿಯಮಗಳನ್ನು ಪಾಲಿಸಿ, ಪೊಲೀಸ್ ಬಲ ಪ್ರಯೋಗಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿದ್ದಾರೆ.

ಏನಿರುತ್ತೆ? ಏನಿರುವುದಿಲ್ಲ?- ಇಲ್ಲಿದೆ ವಿವರ

ಏನಿರುತ್ತೆ?

ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ.

ಹಾಲು, ತರಕಾರಿ, ಹಣ್ಣು ಹಂಪಲು, ಗ್ರೋಸರಿ ಮುಂತಾದ ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಮದ್ಯ ಖರೀದಿಗೂ ಬೆಳಿಗ್ಗೆ 6 ರಿಂದ 10 ಗಂಟೆಯವರಗೆ ಅವಕಾಶ ನೀಡಲಾಗಿದೆ.

ಹೊಟೇಲ್, ಬಾರ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಮಾತ್ರ ಅವಕಾಶ ನೀಡಲಾಗಿದೆ.

ಮುದ್ರಣ ಮಾಧ್ಯಮ, ಎಲೆಕ್ಟ್ರೀನಿಕ್ ಮಾಧ್ಯಮ, ಮೆಡಿಕಲ್‌ ಶಾಪ್‌, ಬ್ಯಾಂಕ್‌, ಎಟಿಎಂ ಸೇವೆ, ರಕ್ತನಿಧಿ ಕೇಂದ್ರ, ಆಸ್ಪತ್ರೆ, ಕ್ಲಿನಿಕ್‌ಗಳು ಲಾಕ್ ಡೌನ್ ಅವಧಿಯಲ್ಲೂ ತೆರೆದಿರುತ್ತದೆ.

ಎಲ್ಲ ಉತ್ಪಾದನಾ ವಲಯ, ಕನ್ಸಟ್ರಕ್ಸನ್ ವಲಯಕ್ಕೆ ಅವಕಾಶ ನೀಡಲಾಗಿದೆ.

ಸರಕು ಸಾಗಾಣೆ ವಾಹನಗಳಿಗೆ ಅವಕಾಶ ಇರುತ್ತದೆ

ಏನಿರುವುದಿಲ್ಲ?

ಬಿಎಂಟಿಸಿ, ಕೆಎಸ್ ಆರ್ ಟಿಸಿ ಸೇರಿದಂತೆ ಯಾವುದೇ ಸಾರಿಗೆ ಸಂಚಾರಕ್ಕೆ ಅವಕಾಶ ಇರುವುದಿಲ್ಲ

ಅಂತಾರಾಜ್ಯ ಮತ್ತು ಅಂತರ್ ಜಿಲ್ಲಾ ಸಂಚಾರಕ್ಕೆ ಅವಕಾಶ ಇರುವುದಿಲ್ಲ

ಗಾರ್ಮೆಂಟ್ ವಲಯ ಉತ್ಪಾದನೆ ಬಂದ್.

ಬಟ್ಟೆ ಮಳಿಗೆ, ಸ್ವರ್ಣಾಭರಣ ಮಳಿಗೆ, ಫ್ಯಾನ್ಸಿ ಮಳಿಗೆ, ಫೂಟ್ ವೇರ್ ಮಳಿಗೆ, ಹೂವಿನಂಗಡಿಗಳನ್ನು ತೆರೆಯಲು ಅವಕಾಶವಿಲ್ಲ.

ಫೋಟೋ ಸ್ಟುಡಿಯೋಗಳಿಗೂ ಅವಕಾಶವಿಲ್ಲ.

ರಾಜ್ಯದಲ್ಲಿ ನಡೆಯಲಿದ್ದ ಎಲ್ಲ ಬಗೆಯ ಚುನಾವಣೆಗಳನ್ನೂ ಮುಂದೂಡಲಾಗಿದೆ.

Comments are closed.