ಕರಾವಳಿ

ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ: ರಾಜ್ಯದಲ್ಲಿ ಭಾಗಶಃ ಲಾಕ್ ಡೌನ್ ಘೋಷಣೆ : ಏನಿರುತ್ತೆ -ಏನಿರಲ್ಲ -ಇಲ್ಲಿದೆ ವಿವರ

Pinterest LinkedIn Tumblr

ಬೆಂಗಳೂರು, ಎಪ್ರಿಲ್.22 : ರಾಜ್ಯ ಸರ್ಕಾರದಿಂದ ಹೊಸ ಪರಿಷ್ಕೃತ ಮಾರ್ಗಸೂಚಿ ಪ್ರಕಟಗೊಂಡಿದೆ. ರಾಜ್ಯ ಸರಕಾರ 24 ಗಂಟೆಯಲ್ಲಿ ಕೋವಿಡ್ ಪರಿಷ್ಕೃತ ಮಾರ್ಗಚೂಚಿ ಬಿಡುಗಡೆ ಮಾಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ ಭಾಗಶಃ ಲಾಕ್ ಡೌನ್ ಘೋಷಿಸಿದೆ.

ಕೊರೋನಾ ನಿಯಂತ್ರಣಕ್ಕಾಗಿ ರಾತ್ರಿ ಕಫ್ರ್ಯೂ ಮತ್ತು ವೀಕೆಂಡ್ ಕಫ್ರ್ಯೂ ಜಾರಿ ಮಾಡಲಾಗಿದೆ. ಈ ಹಿಂದಿನ ಮಾರ್ಗಸೂಚಿಯಲ್ಲಿ ಮನರಂಜನಾ ತಾಣಗಳು, ಶಾಲಾ ಕಾಲೇಜು ಬಂದ್ ಮಾಡಿ, ಅಗತ್ಯ ಸೇವೆಗಳ ಜೊತೆಗೆ ಇತರ ಸೇವೆಗಳಿಗೂ ಅವಕಾಶ ನೀಡಲಾಗಿತ್ತು. ಆದರೆ, ಇದೀಗ ಅಗತ್ಯ ಸೇವೆಗಳ ಹೊರತಾಗಿ ಎಲ್ಲಾ ಶಾಪ್ ಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ರಾತ್ರಿ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ವಿಧಿಸಿ ರಾಜ್ಯ ಸರಕಾರ ಬುಧವಾರ ರಾತ್ರಿ ಮಾರ್ಗಸೂಚಿ ಹೊರಡಿಸಿತ್ತು. ಆದರೆ ರಾಜ್ಯದಲ್ಲಿ ಎಂದಿನಂತೆ ಜನರು ಓಡಾಟ ನಡೆಸಿದ್ದು, ಮಾರ್ಗಸೂಚಿ ಪಾಲಿಸದ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ವ್ಯಾಪಾರ-ವಹಿವಾಟು ನಿಷೇಧಿಸಿದೆ. ಹೊಸ ಮಾರ್ಗಸೂಚಿ ಜಾರಿಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಪೊಲೀಸರು ರಸ್ತೆಬದಿ ಅಂಗಡಿ ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ಬ್ರೇಕ್ ಹಾಕುತ್ತಿದ್ದಾರೆ.

ಮೇ4ರವರೆಗೆ ರಾಜ್ಯದ ಎಲ್ಲಾ ಅಂಗಡಿಗಳನ್ನ ಮುಚ್ಚಲು ಆದೇಶಿಸಲಾಗಿದ್ದು, ದಿನಸಿ, ತರಕಾರಿ, ಹಾಲು, ಮೆಡಿಕಲ್ ಗಳಿಗಷ್ಟೇ ಅವಕಾಶ ನೀಡಲಾಗಿದೆ. ದಿನಸಿ ಅಂಗಡಿ, ಹಾಲು ತರಕಾರಿ, ಹಣ್ಣುಗಳ ಅಂಗಡಿ, ಮನೆ ಕಟ್ಟುವ ಸಾಮಾಗ್ರಿ ಅಂಗಡಿ, ಎಲೆಕ್ಟ್ರಾನಿಕ್ ಶಾಪ್ ಗಳು, ಪಿವಿಸಿ ಪೈಪ್ ಗಳ ಅಂಗಡಿ, ಹೋಟೆಲ್, ಟೀ ಕಾರ್ನರ್ ಗಳು ಪಾರ್ಸಲ್ ಮಾತ್ರ, ಎಂಎಸ್ ಐಎಲ್, ಔಟ್ ಲೆಟ್ ಪಾರ್ಸಲ್ ಮಾತ್ರ ಅವಕಾಶ ನೀಡಲಾಗಿದೆ.,

ಚಪ್ಪಲಿ, ಬಟ್ಟೆ, ಟೈರ್ ಮಾರಾಟ, ಶೂ, ಟಿವಿ ಶೋರೂಂಗಳು, ಗಡಿಯಾರದ ಅಂಗಡಿ, ಕನ್ನಡಕದ ಅಂಗಡಿ ಮುಚ್ಚಲು ಆದೇಶ ಹೊರಡಿಸಿದೆ.

 ಏನಿರುತ್ತೆ -ಏನಿರಲ್ಲ -ಇಲ್ಲಿದೆ ವಿವರ

Comments are closed.