
ಮಂಗಳೂರು / ಸುರತ್ಕಲ್ : ಕಾನ-ಕಟ್ಲ ಬಳಿಯ ಆಶ್ರಯ ಕಾಲನಿಯಲ್ಲಿ ವಿದ್ಯುತ್ ದೀಪ ಇಲ್ಲದೆ ಕತ್ತಲೆಯಲ್ಲಿದ್ದ ಬಡ ಕುಟುಂಬದ ಮನೆಗೆ ವಿದ್ಯುತ್ ದೀಪವನ್ನು ಅಳವಡಿಸಿ ಆ ಮನೆಗೆ ಬೆಳಕು ನೀಡಲಾಗಿದೆ.
ಕಟ್ಲ ಆಶ್ರಯ ಕಾಲನಿಯ ನಿವಾಸಿ ಮಂಜುನಾಥ ಮತ್ತು ದಿವ್ಯಾ ದಂಪತಿಗಳು ಆರ್ಥಿಕವಾಗಿ ಬಲಾಡ್ಯರಾಗಿಲ್ಲ, ತೀರಾ ಬಡವರಾಗಿದ್ದ ಅವರ ಮನೆಗೆ ವಿದ್ಯುತ್ ದೀಪ ಇರಲಿಲ್ಲ. ಇದನ್ನು ಮನಗಂಡ ಸಮಾಜ ಸೇವಕಿ ಶೈಲಾ ಮಾಬೆನ್ ಈ ವಿಚಾರವನ್ನು ಬಿಜೆಪಿ ಮುಖಂಡ ಪ್ರಶಾಂತ್ ನ್ಯಾಕ್ ಮುಡಾಯಿಕೊಡಿ ಮತ್ತು ಸ್ಥಳೀಯ ಕಾರ್ಪೋರೇಟರ್ ಸರಿತಾ ಅವರ ಗಮನಕ್ಕೆ ತಂದರು.
ಬಳಿಕ ಅವರೆಲ್ಲರೂ ಮುತುವರ್ಜಿ ವಹಿಸಿ ಮಂಜುನಾಥ-ದಿವ್ಯಾ ದಂಪತಿಯ ಮನೆಗೆ ವಿದ್ಯುತ್ ದೀಪವನ್ನು ಅಳವಡಿಸಲು ನೆರವಾದರು. ಇದೀಗ ಮನೆಗೆ ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದ್ದು, ಇದರಿಂದ ಕತ್ತಲೆಯಲ್ಲಿದ್ದ ಒಂದು ಬಡ ಕುಟುಂಬಕ್ಕೆ ಬೆಳಕಿನ ಭಾಗ್ಯ ಸಿಕ್ಕಿದಂತಾಗಿದೆ.
ಈ ಸಂದರ್ಭದಲ್ಲಿ ಕಾರ್ಪೋರೇಟರ್ ಸರಿತಾ, ಪ್ರಶಾಂತ್ ನಾಕ್ ಮುಡಾಯಿ ಕೊಡಿ, ಉರ್ಬನ್, ಶೈಲಾ ಮಾಬೆನ್, ನಾರಾಯಣ ಪಾಟಾಳಿ, ಲೋಕಯ್ಯ ಪೂಜಾರಿ, ಪದ್ಮನಾಭ, ವಿಘ್ನೇಶ್, ಪುರುಷೋತ್ತಮ, ಕೃಷ್ಣ, ನವೀನ್ಚಂದ್ರ, ಮೊದಲಾದವರು ಉಪಸ್ಥಿತರಿದ್ದರು.
Comments are closed.