ಕರಾವಳಿ

ಹಲವು ವರ್ಷಗಳಿಂದ ಕೊಲ್ಲೂರಿನಲ್ಲಿ ಚಂಡಿಕಾ ಹೋಮ ಸೇವೆ ಸಲ್ಲಿಸುತ್ತಿರುವ ಮುಸ್ಲೀಂ‌ ಕುಟುಂಬ..!

Pinterest LinkedIn Tumblr

ಉಡುಪಿ : ಕಳೆದ ಹಲವು ವರ್ಷಗಳಿಂದ ಬಳ್ಳಾರಿಯ ಮುಸ್ಲಿಂ ಕುಟುಂಬವೊಂದು ಇಲ್ಲಿನ ಮೂಕಾಂಬಿಕಾ ಸನ್ನಿಧಿಯಲ್ಲಿ ವರ್ಷಕ್ಕೊಮ್ಮೆ ಚಂಡಿಕಾ ಹೋಮ ನೆರೆವೇರಿಸುತ್ತಿದ್ದು ಈ ಮೂಲಕ ಧಾರ್ಮಿಕ ಸೌಹಾರ್ಧತೆಗೆ ಸಾಕ್ಷಿಯಾಗಿದ್ದಾರೆ.

ಬಳ್ಳಾರಿಯ ಹಳ್ಳಿಯೊಂದರಲ್ಲಿ ನೆಲೆಸಿರುವ, ಗುತ್ತಿಗೆದಾರರಾಗಿರುವ ಎಚ್‌. ಇಬ್ರಾಹಿಂ, ಸಾಜುದ್ದೀನ್‌ ಹಾಗೂ ಜರೀನಾ ಅವರ ಕುಟುಂಬಸ್ಥರು ಕಳೆದ ಹಲವು ವರ್ಷಗಳಿಂದ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಬಂದು ತಾಯಿ ಮೂಕಾಂಬಿಕೆಯ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ಚಂಡಿಕಾಹೋಮ ನಡೆಸುತ್ತಿದ್ದಾರೆ. ಈಗ ಈ ಕುಟುಂಬದ ಕಿರಿಯ ಪುತ್ರ ಮನ್ಸೂರ್‌ ಹಾಗೂ ಪತ್ನಿ ವರ್ಷಕ್ಕೊಮ್ಮೆ ಚಂಡಿಕಾಹೋಮ ಮಾಡಿಸುತ್ತಿದ್ದು, ಎಲ್ಲಾ ದೇವರು ಒಂದೇ ಎನ್ನುತ್ತಾರೆ ಮನ್ಸೂರ್‌.

ತನ್ನ ಹಿರಿಯರುಗೈದ ಈ ಸೇವೆ ಹಾಗೂ ತಾಯಿ ಮೂಕಾಂಬಿಕೆಯ ಅನುಗ್ರಹದಿಂದ ಜೀವನದಲ್ಲಿ ಏಳಿಕೆ ಲಭಿಸಿದೆ ಎಂಬ ನಂಬಿಕೆ ಹೊಂದಿರುವ ಮನ್ಸೂರ್‌ ಹಾಗೂ ಅವರ ಪತ್ನಿ, ಮಕ್ಕಳು ಕಳೆದ ಐದು ವರ್ಷಗಳಿಂದ ವರ್ಷಕ್ಕೊಮ್ಮೆ ಕೊಲ್ಲೂರಿಗೆ ಬಂದು ದೇವಿಯ ದರ್ಶನ ಪಡೆದು ಚಂಡಿಕಾಹೋಮ ನಡೆಸುತ್ತಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೇವಾಕರ್ತರು, ಮೂಕಾಂಬಿಕೆಯ ಸನ್ನಿಧಿಯಲ್ಲಿ ಪೂಜೆ, ಚಂಡಿಕಾಹೋಮ ನಡೆಸುವುದರಿಂದ ನಮಗೆ ಸಂತೃಪ್ತಿ ಲಭಿಸಿದೆ. ಅಮ್ಮನ ಅನುಗ್ರಹದಿಂದ ನಾವು ಸಂತೃಪ್ತಿಯ ಜೀವನ ನಡೆಸುತ್ತಿದ್ದೇವೆ. ಈ ಕ್ಷೇತ್ರದಲ್ಲಿ ವಿಶೇಷವಾದ ಶಕ್ತಿಯಿದೆ ಎಂದು ಹೇಳಿದ್ದಾರೆ.

 

Comments are closed.