ಕರಾವಳಿ

ವಕೀಲರ ಸಂಘದ ವಾರ್ಷಿಕ ಕ್ರೀಡಾಕೂಟ : ಡರ್ಬಿ ಸೂಪರ್ ಕಿಂಗ್ಸ್‌ಗೆ ಪ್ರಥಮ ಬಹುಮಾನ

Pinterest LinkedIn Tumblr

ಮಂಗಳೂರು: ಮಂಗಳೂರು ವಕೀಲರ ಸಂಘದ ವಾರ್ಷಿಕ ಕ್ರೀಡಾಕೂಟ ದಿನಾಂಕ ಭಾನುವಾರ ಮಧ್ಯಾಹ್ನ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆಯಿತು.

ಕ್ರೀಡಾಕೂಟದ ಉದ್ಘಾಟನೆಯನ್ನು ಗೌರವಾನ್ವಿತ ಪ್ರಧಾನ ಹಾಗೂ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಮುರಳೀಧರ ಪೈ ಯವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಮಾಜಿ ರಾಜ್ಯ ಸಭಾ ಸದಸ್ಯರು ಹಾಗೂ ವಕೀಲರಾರ ಇಬ್ರಾಹಿಂ, ಹಿರಿಯ ವಕೀಲರಾದ ಅಶೋಕ ಅರಿಗ, ಪೃಥ್ವಿರಾಜ್ ರೈ, ಗೌರವಾನ್ವಿತ ಎರಡನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ರಾದ ಶ್ರೀಮತಿ ಪಲ್ಲವಿ, ಗೌರವಾನ್ವಿತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶ್ರೀಮತಿ ಶಿಲ್ಪಾ ಉಪಸ್ಥಿತರಿದ್ದರು.

ಉದ್ಘಾಟನಾ ಪಂದ್ಯಾಟವು ನ್ಯಾಯಾಧೀಶರ ಹಾಗೂ ವಕೀಲರ ನಡುವೆ ನಡೆಯಿತು. ಈ ಪಂದ್ಯಾಟದಲ್ಲಿ ನ್ಯಾಯಾಧೀಶರ ತಂಡ ಜಯ ಗಳಿಸಿರುತ್ತದೆ.

ವಕೀಲರ ನಡುವೆ ನಡೆದಂತಹ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ರಾಘವೇಂದ್ರ ಎಚ್.ವಿ, ಇಸ್ಮಾಯಿಲ್ ಎಸ್, ಹಾಗು ದೇವಿ ಪ್ರಕಾಶ್ ಹೆಗಡೆ ಇವರ ಜಂಟಿ ಮಾಲೀಕತ್ವದ DURBI SUPER KINGS ತಂಡವು ಪಡೆದುಕೊಂಡಿರುತ್ತದೆ.

ದಿನಕರ್ ಶೆಟ್ಟಿ ಹಾಗೂ ಪ್ರವೀಣ್ ಅದ್ಯಪಾಡಿ ಅವರ ಜಂಟಿ ಮಾಲೀಕತ್ವದ BAR DEVILS ತಂಡವು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿರುತ್ತದೆ, ಅಲ್ಲದೆ ಈ ಸಂದರ್ಭದಲ್ಲಿ ಮಹಿಳಾ ವಕೀಲರಿಗಾಗಿ ತ್ರೋಬಾಲ್ ಪಂದ್ಯಾಟವನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ಎಲಿಜಬೆತ್ ನಿಲಿಯಾರ ತಂಡವು ಪ್ರಥಮ ಬಹುಮಾನ ಪಡೆದುಕೊಂಡಿರುತ್ತದೆ.

ಅಲ್ಲದೆ ಈ ಸಂದರ್ಭದಲ್ಲಿ ವಕೀಲರಿಗಾಗಿ ಹಗ್ಗಜಗ್ಗಾಟ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿಜಯೀ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎನ್ಎನ್ ಹೆಗಡೆ, ಉಪಾಧ್ಯಕ್ಷರಾದ ಬಿ. ಜಿನೇಂದ್ರ ಕುಮಾರ್, ಕೋಶಾಧಿಕಾರಿ ಅರುಣಾ ಬಿ. ಪಿ, ಜೊತೆ ಕಾರ್ಯದರ್ಶಿ ಶರ್ಮಿಳಾ, ವಕೀಲರಾದ ಪದ್ಮರಾಜ. ಆರ್, ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ರಾಘವೇಂದ್ರ ಎಚ್.ವಿ. ನಿರ್ವಹಿಸಿದರು.

ವಕೀಲರಾದ ಹರೀಶ್ ಕುಮಾರ್, ಪ್ರಮೋದ್ ಕೆರ್ವಾಶೆ, ರವಿರಾಜ್, ಶ್ರೀಮತಿ ಟೀನಾಶ್ರೀ ಕ್ರೀಡಾಕೂಟವನ್ನು ಸಂಘಟಿಸಿದರು.

Comments are closed.