ಕರಾವಳಿ

ಸರಕಾರದ ಸವಲತ್ತುಗಳನ್ನ ಬಡ ಫಲನುಭವಿಗಳಿಗೆ ತಲುಪಿಸುವ ಜವಾಬ್ದಾರಿ ವೈದ್ಯರದ್ದು : ಡಾ.ರಾಮಚಂದ್ರ ಬಾಯಾರಿ

Pinterest LinkedIn Tumblr

ಕುಟುಂಬ ವೈದ್ಯರ ಸಂಘಟನೆಗೆ ಹದಿನೆಂಟರ ಸಂಭ್ರಮ :ಪದಗ್ರಹಣ, ಸನ್ಮಾನ ಮತ್ತು ವೈದ್ಯಕೀಯ ಕಾರ್ಯಾಗಾರ

ಮಂಗಳೂರು : 2003ರಲ್ಲಿ ದಿವಂಗತ ಡಾ ಮೋಹನ ದಾಸ್ ಭಂಡಾರಿಯವರ ನೇತೃತ್ವದಲ್ಲಿ ಆರಂಭವಾದ ಮಂಗಳೂರಿನ ಕುಟುಂಬ ವೈದ್ಯರ ಸಂಘಟನೆಗೆ 18 ನೇ ವರ್ಷದ ಸಂಭ್ರಮ.

ಆ ದಿಸೆಯಲ್ಲಿ ನಗರದಲ್ಲಿ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ, ನಿವೃತ್ತ ದಕ ಜಿಲ್ಲಾ ಅರೋಗ್ಯಧಿಕಾರಿ ಡಾ ರಾಮಚಂದ್ರ ಬಾಯಾರಿ ಅವರಿಗೆ ಸನ್ಮಾನ ಹಾಗೂ ಯೆನೆಪೋಯ ಆಸ್ಪತ್ರೆಯ ಖ್ಯಾತ ಎಲುಬು ಮತ್ತು ಕೀಲು ತಜ್ಞ ಡಾ ದೀಪಕ್ ರೈ, ಮತ್ತು ಹೃದಯ ರೋಗ ತಜ್ಞ ಡಾ ಕೃಷ್ಣಶೆಟ್ಟಿ ಯವರಿಂದ ಆಯಾಯ ವಿಭಾಗದ ನೂತನ ಚಿಕಿತ್ಸಾ ಕ್ರಮಗಳ ಬಗ್ಗೆ ಕುಟುಂಬ ವೈದ್ಯರಿಗೆ ವೈದ್ಯಕೀಯ ಕಾರ್ಯಾಗಾರದ ಮೂಲಕ ಮಾಹಿತಿ ಒದಗಿಸಿಕೊಟ್ಟರು.

ಯೆನೆಪೋಯ ಆಸ್ಪತ್ರೆಯ ಡಾ ಮೊಹಮ್ಮದ್ ತಾಹಿರ್ ಸಹಿತ ನರೆದ ನೂರಾರು ಕುಟುಂಬ ವೈದ್ಯರು, ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಿವೃತ್ತ ದಕ್ಷ ಆರೋಗ್ಯಾಧಿಕಾರಿ ಡಾ ರಾಮಚಂದ್ರ ಬಾಯಿರಿ ಅವರನ್ನ ಸನ್ಮಾನಿಸಲಾಯಿತು.

ಸನ್ಮಾನಕ್ಕೆ ಉತ್ತರಿಸಿದ ಡಾ ಬಾಯಾರಿಯವರು ಕುಟುಂಬ ವೈದ್ಯ ಪದ್ಧತಿ ಉಳಿಯಬೇಕಾದ ಅನಿವಾರ್ಯತೆಯನ್ನ ವಿವರಿಸುತ್ತಾ, ಸರಕಾರದ ಸವಲತ್ತುಗಳನ್ನ ಬಡವರಿಗೆ ಫಲನುಭವಿಗಳಿಗೆ ತಲುಪಿಸುವ ದೊಡ್ಡ ಜವಾಬ್ದಾರಿ ಕುಟುಂಬ ವೈದ್ಯರಿಗಿದ್ದು, ಅಂತಹ ವೈದ್ಯರುಗಳಿಗೆ ಸರಕಾರ ಸಾಕಷ್ಟು ಉತ್ತೇಜನ ನೀಡಬೇಕು, ಕೆಪಿಎಂಇ ಕಾನೂನಿನಲ್ಲಿ ಕುಟುಂಬ ವೈದ್ಯರಿಗೆ ತೊಂದರೆ ಆಗುತ್ತಿರುವ ವಿಚಾರಗಳನ್ನ ಕೈ ಬಿಟ್ಟು, ಕ್ಲಿನಿಕ್ ನಡೆಸಲು, ಯಂತ್ರೋಪಕರಣ ಖರೀದಿಸಲು ಆರ್ಥಿಕವಾಗಿ ಸಹಾಯ ಸಹಕಾರ ಕೊಟ್ಟು, ಹಳ್ಳಿಗಳಲ್ಲಿ ಸೇವೆ ಮಾಡಲು ಉತ್ತೇಜನ ಕೊಡಬೇಕು ಅಂದರು.

ನಿರ್ಗಮನ ಅಧ್ಯಕ್ಷ ಡಾ ಎಂ ಏ ಆರ್ ಕುಡ್ವ, ಆಗಮನ ಅಧ್ಯಕ್ಷ ಡಾ ಜಿ ಕೆ ಭಟ್, ಸಂಘಟನೆ ನಡೆದು ಬಂದ ಬಗೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ತೆರೆದಿಟ್ಟರು. ಸ್ಥಾಪಕ ಕಾರ್ಯದರ್ಶಿ ಡಾ ಅಣ್ಣಯ್ಯ ಕುಲಾಲ್, ಪ್ರಸ್ತಾಪಿಸಿ ಸ್ವಾಗತಿಸಿ, ಕಾರ್ಯಕ್ರಮ ವನ್ನ ನಿರ್ವಹಿಸಿ ವಂದಿಸಿದರು. ಆರಂಭದಲ್ಲಿ ನಿರ್ಗಮನ ಕಾರ್ಯದರ್ಶಿ ಡಾ ಶೇಖರ್ ಪೂಜಾರುಯವರು ಪ್ರಾರ್ಥನೆ ನೆರವೇರಿಸಿದರು.

Comments are closed.