ಕರಾವಳಿ

ಬಾಲಕ ಆಕೀಫ್ ಕೊಲೆ ಪ್ರಕರಣದ ಸಮಗ್ರ ತನಿಖೆಗೆ ಹಾಗೂ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ದುಷ್ಕರ್ಮಿಗಳ ಬಂಧನಕ್ಕೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಆಗ್ರಹ

Pinterest LinkedIn Tumblr

ಮಂಗಳೂರು/ ಉಳ್ಳಾಲ: ಪಬ್ ಜಿ ರೀತಿಯ ಗೇಮ್ ವಿಚಾರದಲ್ಲಿ ಹತ್ಯೆಗೀಡಾದ ಕೆ.ಸಿ.ರೋಡ್ ನಿವಾಸಿ ಬಾಲಕ ಆಕೀಫ್ ಕೊಲೆ ಬಗ್ಗೆ ಸಮಗ್ರ ತನಿಖೆ ಮಾಡುವಂತೆ ಮತ್ತು ಮಂಗಳೂರು ಪೋಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮತ್ತು ಉಳ್ಳಾಲ ಮತ್ತು ಕೊಣಾಜೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮತ್ತು ಗಾಂಜಾ ಪ್ರಕರಣಗಳ ಅಪರಾಧಿಗಳ ಮಟ್ಟಹಾಕುವಂತೆ ಮತ್ತು ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿ ಸಾಮಾಜವನ್ನು ಹಾಳು ಮಾಡುವ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹಾಗೂ ನೈತಿಕ ಪೋಲೀಸ್ ಗಿರಿಯನ್ನು ಮಟ್ಟಹಾಕುವಂತೆ ಆಗ್ರಹಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳೂರು ಪೋಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಅವರಿಗೆ ಮನವಿ ನೀಡಲಾಯಿತು.

ದಿನಾಂಕ 3.4.21 ನೇ ಶನಿವಾರ ಕೋಟೆಕಾರ್ ಕೆ.ಸಿ.ರೋಡ್ ನಿವಾಸಿ ಹನೀಫ್ ಎಂಬುವವರ ಮಗ ಆಕೀಫ್ ಎಂಬ ಬಾಲಕನ ಕೊಲೆಗೈಯ್ಯಲಾಗಿದ್ದು, ಮೇಲ್ನೋಟಕ್ಕೆ ಇದು ಪಬ್ ಜಿ ರೀತಿಯ ಮೊಬೈಲ್ ಗೇಮ್ ಆಟಕ್ಕೆ ಸಂಬಂಧಿಸಿದ ಕೋಪದಲ್ಲಿ ನಡೆದ ಕೊಲೆ ಎಂಬುದಾಗಿ ವರದಿಯಾಗಿದ್ದು, ಕೊಲೆ ಮಾಡಿದ ವಿದ್ಯಾ ನಗರದ ನಿವಾಸಿ ದೀಪಕ್ ಎಂಬಾತನನ್ನು ಬಂಧಿಸಲಾಗಿದೆ.

ಆದರೆ ಬಾಲಕನ ತಂದೆಯವರಾದ ಹನೀಫ್ ಅವರು ಇದೊಂದು ಪೂರ್ವಯೋಜಿತ ಕೊಲೆಯಾಗಿರುತ್ತದೆ ಎಂಬುದಾಗಿ ಸಂಶಯ ವ್ಯಕ್ತಪಡಿಸಿದ್ದು, ಕೊಲೆ ಆರೋಪಿ ಬಾಲಕ ಈ ಹಿಂದೆ ಕಳವು ಕೃತ್ಯಗಳಲ್ಲಿ ಭಾಗಿಯಾದ ಆರೋಪಿ ಕೂಡಾ ಆಗಿರುತ್ತಾನೆ ಎಂಬುದಾಗಿ ತಿಳಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ, ಊರಿನವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

ಆದ್ದರಿಂದ ಈ ಕೊಲೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬೇಧಿಸಿ, ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಿ, *ಕೊಲೆಯಾದ ಬಾಲಕನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮಂಗಳೂರು ಪೋಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮುಖ್ಯವಾಗಿ *ಉಳ್ಳಾಲ ಮತ್ತು ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ರಾತ್ರಿ ಮನೆ ಅಂಗಡಿಗಳಿಗೆ ಕಳ್ಳರು ನುಗ್ಗಿ ಅಪಾರ ಪ್ರಮಾಣದಲ್ಲಿ ನಗ-ನಗದು ಕಳವು ಮಾಡಿ ಪರಾರಿಯಾಗುತ್ತಿದ್ದು,* ಇಷ್ಟರವರೆಗೆ ಒಂದೇ ಒಂದು ಪ್ರಕರಣದಲ್ಲಿ ಕೂಡ ಕಳ್ಳರ ಬಂಧನವಾಗಿಲ್ಲ,ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿರುತ್ತದೆ.

ಅದೇ ರೀತಿ ಉಳ್ಳಾಲ ನಗರ, ಸೋಮೇಶ್ವರ,ಕುಂಪಲ, ಕೆ.ಸಿ.ರೋಡ್,ತಲಪಾಡಿ ಹಾಗೂ ಗ್ರಾಮಾಂತರ ಭಾಗದಲ್ಲಿ ಕೆಲವು ಪ್ರದೇಶಗಳಲ್ಲಿ ಗಾಂಜಾ ಮಾರಾಟ ಮತ್ತು ವ್ಯಸನಿಗಳ ಅಪರಾಧ ಪ್ರಕರಣಗಳು ನಡೆಯುತ್ತಿವೆ, ಗಾಂಜಾ ವ್ಯಸನಿಗಳಿಂದ ಸಾರ್ವಜನಿಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ತುಂಬಾ ತೊಂದರೆ ಒಳಗಾಗುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಹೆಚ್ಚಿನ ಆತಂಕದಿಂದ ಜೀವಿಸುವ ಪರಿಸ್ಥಿತಿ ನಿರ್ಮಾಣ ವಾಗಿರುತ್ತದೆ.

ಅಲ್ಲದೇ ಸಂಬಂಧ ಪಟ್ಟ ಠಾಣೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ತಾವು ಕ್ರಿಯಾಶೀಲ, ದಕ್ಷ ಪೋಲೀಸ್ ಅಧಿಕಾರಿಯಾಗಿ ತಮ್ಮ ಕಾರ್ಯವೈಖರಿಯಿಂದ ಪ್ರಶಂಸೆಗೆ ಪಾತ್ರರಾಗಿದ್ದೀರಿ, ಈ ಬಗ್ಗೆ ಗಂಬೀರವಾಗಿ ಪರಿಗಣಿಸಿ ಕಳ್ಳರನ್ನು ಗಾಂಜಾ ಅಪರಾಧಿಗಳನ್ನು ಮಟ್ಟಹಾಕಲು ಕ್ರಮಗೈಗೊಳ್ಳುವಂತೆ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಎಂದು ನಿಯೋಗ ಮನವಿ ಮಾಡಿದೆ.

ರಾತ್ರಿ 12.00 ಗಂಟೆಯಿಂದ ಬೆಳಗ್ಗಿನ ಜಾವ 3.00 ಗಂಟೆಯ ಅವಧಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳ ತಪಾಸಣೆ ಮಾಡುವಂತೆ ರಾತ್ರಿ ಗಸ್ತುಪಡೆಗೆ ಸೂಚಿಸಬೇಕಾಗಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ,

ಅದೇ ರೀತಿ ಮುಖ್ಯ ರಸ್ತೆ ಬಿಟ್ಟು ಒಳರಸ್ತೆಯನ್ನು ಬಳಸಿ ಅಪರಾಧಿಗಳು ಪರಾರಿಯಾಗುವ ಬಗ್ಗೆ ಸಿ.ಸಿ. ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳಿಂದ ಗೊತ್ತಾಗುತ್ತದೆ,

ಆದ್ದರಿಂದ ರಾತ್ರಿ ಗಸ್ತುಪಡೆಯನ್ನು ಹೆಚ್ಚಿಸಿ ಅವರಿಗೆ ಸೂಕ್ತ ನಿರ್ದೇಶನ ನೀಡಿ ಸಾರ್ವಜನಿಕರು ನೆಮ್ಮದಿಯಿಂದ ಜೀವಿಸುವ ವಾತಾವರಣ ನಿರ್ಮಾಣಗೊಳಿಸುವಂತೆ ಮತ್ತು *ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರವನ್ನು ಅಪವಿತ್ರಗೊಳಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಲು ಮಾಡಲು ಪ್ರಯತ್ನಿಸುತ್ತಿರುವ ಕಿಡಿಗೇಡಿಗಳ ನ್ನು  ಮತ್ತು *ನೈತಿಕ ಪೋಲೀಸ್ ಗಿರಿ ಮಾಡುವವರನ್ನು ತಕ್ಷಣವೇ ಬಂಧಿಸಬೇಕೆಂದು  ಒತ್ತಾಯಿಸಿ
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ನೇತೃತ್ವದಲ್ಲಿ   ಮಂಗಳೂರು ಪೋಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರಿಗೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಕೋಶಾಧಿಕಾರಿ ಪುರುಷೋತ್ತಮ್ ಅಂಚನ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜ, ಮಂಗಳೂರು ವಿಧಾನ ಸಭಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಫಿರೋಝ್ ಮಲಾರ್, ಮಂಗಳೂರು ವಿಧಾನ ಸಭಾ ಇಂಟಕ್ ಅಧ್ಯಕ್ಷ ಹರೀಶ್ ರಾವ್, ಕೋಟೆಕಾರ್ ಗ್ರಾಮ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಹ್ಮದ್ ಅಜ್ಜಿನಡ್ಕ, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾದ ಮೊಯಿದಿನ್ ಬಾವ , ಪುಷ್ಠಿ ಮೊಹಮ್ಮದ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಬಾತೀಶ್ ಅಜ್ಜಿನಡ್ಕ, ಕೋಟೆಕಾರ್ ಗ್ರಾಮ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಜಮಾಲ್ ಅಜ್ಜಿನಡ್ಕ, ಪಾವೂರು ಗ್ರಾಮ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇರ್ಫಾನ್.ಡಿ. ಮೊದಲಾದವರು ಉಪಸ್ಥಿತರಿದ್ದರು.

Comments are closed.