
ಮಂಗಳೂರು ವಿಧಾನ ಸಭಾ ಕ್ಷೇತ್ರದ ಜಾತ್ಯಾತೀತ ಜನಾತಾದಳದ ವತಿಯಿಂದ ಉಳ್ಳಾಲ ನಗರಸಭೆಯಲ್ಲಿ ಆಸ್ತಿ ತೆರಿಗೆ ಏರಿಸಿರುವುದನ್ನು ವಿರೋಧಿಸಿ ಮತ್ತು ಏರಿಕೆಯನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಹಕ್ಕೋತ್ತಾಯ ಮಂಡಿಸಲಾಯಿತು.
ಉಳ್ಳಾಲ ನಗರಸಭೆಯು ಇತ್ತಿಚೆಗೆ ವಾಸ್ತಾವ್ಯದ ಮತ್ತು ವಾಣಿಜ್ಯ ಕಟ್ಟಡಗಳಿಗೆ ವಿಪರೀತವಾಗಿ ಆಸ್ತಿ ತೆರಿಗೆಯನ್ನು ಏರಿಕೆ ಮಾಡಿ ಪ್ರಕಟನೆಯನ್ನು ಹೊರಡಿಸಿತ್ತು.ಆಸ್ತಿ ತೆರಿಗೆ ಏರಿಕೆಯನ್ನು ಹಿಂತೆಗೆದುಕೊಳ್ಳಲ್ಲು ಆಗ್ರಹಿಸಿ ಉಳ್ಳಾಲ ನಗರಸಭೆಯ ಪೌರಾಯುಕ್ತರಾದ ಶ್ರೀ ರಾಯಪ್ಪರಿಗೆ ಹಾಗೂ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಚಿತ್ರಕಲಾ ಚಂದ್ರಕಾಂತ್ ರಿಗೆ ಮನವಿ ಸಲ್ಲಿಸಲಾಯಿತು.

ಇದು ಆರ್ಥಿಕವಾಗಿ ಕಂಗೆಟ್ಟಿರುವ ಇಂದಿನ ಪರಿಸ್ಥಿತಿಯಲ್ಲಿ ಜನಸಾಮಾನ್ಯರ ಮೇಲೆ ನೀಡಿದ ಹೊಡೆತವಾಗಿದೆ. ಮತ್ತು ಖಾಲಿ ಭೂಮಿಗೂ ತೆರಿಗೆ ವಿಧಿಸುವ ಉಳ್ಳಾಲ ನಗರಸಭೆಯ ತೀರ್ಮಾನ ಸರಿಯಾದುದಲ್ಲ ಇದನ್ನು ಜವಾಬ್ದಾರಿಯುತ ಪಕ್ಷವಾಗಿ ಜ್ಯಾತ್ಯತೀತ ಜನಾತದಳ ತೀವ್ರವಾಗಿ ವಿರೋಧಿಸುತ್ತದೆ ಎಂದು ತಿಳಿಸಿದರು.
ಮಾದ್ಯಮದೊಂದಿಗೆ ಮಾತನಾಡಿದ ಮಂಗಳೂರು ವಿಧಾನ ಸಭಾ ಕ್ಷೇತ್ರ ಜನತಾದಳದ ಅಧ್ಯಕ್ಷ ಶ್ರೀ ಮೋಹನ್ ದಾಸ್ ಶೆಟ್ಟಿಯವರು ದಿನಾಂಕ 30/03/2021ರ ಉಳ್ಳಾಲ ನಗರಸಭೆಯ ತೀರ್ಮಾನದಂತೆ ಏರಿಸಿರುವ ಆಸ್ತಿ ತೆರಿಗೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ನಮ್ಮ ಅಗ್ರಹವಾಗಿದೆ ಇದು ಮುಂದುವರೆದರೆ ಜಾತ್ಯತೀತ ಜನಾತಾದಳವು ಉಳ್ಳಾಲದ ನಾಗರಿಕರನ್ನು ಒಟ್ಟು ಸೇರಿಸಿ ಬೃಹತ್ ಪ್ರತಿಭಟನೆಯನ್ನು ನಡೆಸುತ್ತೆವೆ ಎಂದು ಎಚ್ಚರಿಕೆ ನೀಡಿದರು.
ಜಾತ್ಯತೀತ ಜನಾತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ನಝೀರ್ ಉಳ್ಳಾಲ್ ಮಾತಾನಾಡಿ ಕಳೆದ ಸಾಮಾನ್ಯ ಸಭೆಯಲ್ಲಿ ಬಹುಮತ ಸಿಗದಿದ್ದರೂ ಈ ಆಸ್ತಿ ತೆರಿಗೆ ತೀರ್ಮಾನವನ್ನು ಕೈಗೆತ್ತಿಕೊಂಡಿರುವುದು ಸಂಕಷ್ಟದಲ್ಲಿರು ಜನರ ಜೀವನಕ್ಕೆ ಬರೆ ಎಳೆದಂತಾಗಿದೆ ಅದ್ದರಿಂದ ಉಳ್ಳಾಲ ನಗರಸಭೆಯು ಈ ತೀರ್ಮಾನವನ್ನು ಹಿಂತೆಗೆದುಕೊಳ್ಳಬೇಕೆಂದು ತಿಳಿಸಿದರು.
ನಗರಸಭೆಯ ಕೌನ್ಸಿಲರುಗಳಾದ ಬಸೀರ್,ಇಬ್ರಾಹಿಂ ಖಲೀಲ್ , ಯು.ಎಂ ಜಬ್ಬಾರ್, ಹಾಗೂ ಜಾತ್ಯತೀತ ಜನಾತಾದಳದ ಪ್ರಮುಖರಾದ ಯು. ಎಚ್ ಫಾರೂಕ್ , ಸ್ವಾಲಿಹ್ಹ್ ಹರೆಕಳ, ಯು.ಎಂ ಇಕ್ಬಾಲ್, ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಹಮೀದ್ ಉಳ್ಳಾಲ, ಬಸೀರ್ ಗುಂಡಿಹಿತ್ಲು, ಅಲ್ಫ್ರೆಡ್ ಡಿ.ಸೋಜ, ಇಬ್ರಾಹಿಂ ತವಕ್ಕಲ್, ಮುರುಗೇಶ್ ಉಳ್ಳಾಲ್ ಉಪಸ್ಥಿತರಿದ್ದರು.
Comments are closed.