ಕರಾವಳಿ

ಕಲೆಗಳು ಉಳಿದರೆ ದೇಶ ಸಾಂಸ್ಕೃತಿಕ ದೇಶವಾಗಿ ಉಳಿಯುತ್ತೆ: ಕೊಲ್ತಿಗೆ ನಾರಾಯಣ ಗೌಡ

Pinterest LinkedIn Tumblr

ಬೋಂದೆಲ್: ಜಿ.ಕೆ ಶ್ರೀನಿವಾಸ್ ಸಾಲ್ಯಾನ್ ರವರ 13ನೇ ಕಲಾ ಕೃತಿಯ ಶ್ರೀ ದೇವಿಪಂಚಾಮೃತ ಯಕ್ಷಗಾನ ಬಯಲಾಟ – ಸಾಧಕರಿಗೆ ಸನ್ಮಾನ

ಮಂಗಳೂರು. ಭಾರತ ದೇಶ ಭಾರತವಾಗಿ ಉಳಿಯಬೇಕಾದರೆ ಯಕ್ಷಗಾನದಂತಹ ಕಲೆಗಳನ್ನು ಉಳಿಸಿ ಬೆಳಸಿದ್ದರೆ ಮಾತ್ರ ಉತ್ತಮ ಸಂಸ್ಕ್ರತಿ ಇರುವ ದೇಶವಾಗಿ ಉಳಿಯಲು ಸಾಧ್ಯ ಎಂದು ಹಿರಿಯ ಯಕ್ಷಗಾನ ಕಲಾವಿದ ಕೊಲ್ತಿಗೆ ನಾರಾಯಣ ಗೌಡ ಅಭಿಪ್ರಾಯಪಟ್ಟರು

ಅವರು ಬೋಂದೆಲ್ ಕೃಷ್ಣನಗರದ ಸಮಸ್ತ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಭಕ್ತರು ಇದರ 15ನೇ ವಾರ್ಷಿಕದ‌ ಪ್ರಯುಕ್ತ ಜಿ.ಕೆ ಶ್ರೀನಿವಾಸ್ ಸಾಲ್ಯಾನ್ ರವರ 13ನೇ ಕಲಾ ಕೃತಿಯ ಶ್ರೀ ದೇವಿಪಂಚಾಮೃತ ಯಕ್ಷಗಾನ ಬಯಲಾಟದ ಸಭಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.

ಭಾರತ ದೇಶ ಹಲವು ಭಾಷೆ, ಕಲೆ,ಸಂಸ್ಕ್ರತಿಯ ದೇಶವಾಗಿದ್ದು ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಈ ಸಂದರ್ಭ ಯಕ್ಷಗಾಣ ಕಲಾವಿದರಾದ ರಾಜಾರಾಂ ಬಂದಾರು,ಪ್ರಜ್ವಲ್ ಕುಮಾರ್ ಗುರುವಾಯನಕೆರೆ,, ಸಮಾಜ ಸೇವಕಿ ಡಾ. ಸಂಸಾದ್ ಕುಂಜತ್ತಬೈಲ್, ನಮ್ಮ ಕುಡ್ಲ ವಾಹಿನಿಯ ನಿರೂಪಕಿ ಡಾ.ಪ್ರೀಯಾ ಹರೀಶ್, ಸಮಾಜ ಸೇವಕ ರಹ್ಮಾನ್ ರವರನ್ನು ಸನ್ಮಾನಿಸಲಾಯಿತು.

ಮಾಜಿ ಮೇಯರ್ ಹರಿನಾಥ್ ಬೋಂದೆಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬೋಂದೆಲ್ ನ ಕೃಷ್ಣನಗರ ನಾಗರಿಕರು ಕಲೆ ಮತ್ತು ಸಾಹಿತ್ಯದ ಅಭಿಮಾನಿಗಳಾಗಿದ್ದಾರೆ. ಈ ಪ್ರದೇಶದಲ್ಲಿ ನಿರಂತರವಾಗಿ ಜಿ.ಕೆ ಶ್ರೀನಿವಾಸ್ ಸಾಲ್ಯಾನ್ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಮುಂದಿನ ದಿನಗಳಲ್ಲಿ ಇದೆ ರೀತಿ ಮುಂದುವರಿಯಲಿ ಎಂದರು.

ಶ್ರೀ ಕ್ಷೇತ್ರ ಸುಂಕದಕಟ್ಟೆಯ ಧರ್ಮದರ್ಶಿ ನಾರಾಯಣ ಎನ್.ಪೂಜಾರಿ, ಎಂ.ಕೆ ರಮೇಶ್ ಆಚಾರ್ಯ, ಬಂದರ್ ಠಾಣಾ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ವಿಜಯರಾಜ್, ಎನ್.ನಾರಾಯಣ ರೈ, ಉದ್ಯಮಿ ದಿವಾಕರ್ .ಎನ್‌, ಸುಂಕದಕಟ್ಟೆ ಮೇಳದ ಪ್ರಬಂಧಕ ರಮೇಶ್ ಕುಲಶೇಕರ, ಅನಿಲ್ ಬೋಂದೆಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಈ ಸಂದರ್ಭ ಇತ್ತೀಚೆಗೆ ಮಳೆಹಾನಿಯಿಂದ ತೊಂದರೆಗೊಳಗಾದ ಕುಟುಂಬಕ್ಕೆ ರೇಶನ್ ಕಿಟ್ ವಿತರಿಸಲಾಯಿತು.

ಸ್ಥಾಪಕಾಧ್ಯಕ್ಷ ಜಿ.ಕೆ ಶ್ರೀನಿವಾಸ್ ಸಾಲ್ಯಾನ್ ಸ್ವಾಗತಿಸಿದರು. ಸದಸ್ಯ ವಿಶ್ವಾಸ್ ಸಲ್ಯಾನ್ ವಂದಿಸಿದರು.

Comments are closed.