ಕರಾವಳಿ

ಸಿನಿಪ್ರಿಯರಿಗೆ ಸಿಹಿಸುದ್ದಿ ಕೊಟ್ಟ ಸರ್ಕಾರ : ಏ. 7ರವರೆಗೆ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ

Pinterest LinkedIn Tumblr

ಬೆಂಗಳೂರು: ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲಿ ಕೇವಲ ಶೇಖಡಾ 50 ರಷ್ಟು ಮಾತ್ರವೆ ಅವಕಾಶ ಎನ್ನುವ ಸರಕಾರದ ಆದೇಶವನ್ನು ಸರಿಯಲ್ಲ ಎಂದು ಸ್ಯಾಂಡಲ್ ವುಡ್ ಒಗ್ಗಟ್ಟಿನ ಹೋರಾಟ ನಡೆಸಿದ್ದು ಇದಕ್ಕೆ ಕೋಸ್ಟಲ್ ವುಡ್ ಕೂಡ ಧ್ವನಿ ಮಾಡಿತ್ತು. ಈ ಕೂಗಿಗೆ ಪೂರಕವಾಗಿ ಸ್ಪಂದಿಸಿದ ರಾಜ್ಯ ಸರ್ಕಾರ ಏಪ್ರಿಲ್ 7ರವರೆಗೆ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ಸೂಚಿಸಿದೆ.

ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರನ್ನು ಭೇಟಿ ಮಾಡಿದ್ದ ‘ಯುವರತ್ನ’ ಸಿನೆಮಾದ ನಿರ್ಮಾಪಕರು, ನಟ ಪುನೀತ್ ಸಹಿತ ಚಿತ್ರತಂಡ ಅವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿತ್ತು. ಅಲ್ಲದೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಸಹ ಈ ಸಂಬಂಧ ಆಗ್ರಹಿಸಿದ್ದರು.

ಏಪ್ರಿಲ್ 7ರವರೆಗೆ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

ನಿನ್ನೆ (ಶುಕ್ರವಾರ) ರಾಜ್ಯ ಸರ್ಕಾರ ನೂತನ ಕೊರೋನಾ ಮಾರ್ಗಸೂಚಿಯನ್ನು ಹೊರಡಿಸಿತ್ತು. ಇದರಲ್ಲಿ ಬೆಂಗಳೂರು ನಗರ ಸೇರಿ ಎಂಟು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶವಿತ್ತು. ಇದಕ್ಕೆ ಕೋಸ್ಟಲ್ ವುಡ್ ಸಹಿತ ಸ್ಯಾಂಡಲ್ ವುಡ್ ಮಂದಿ ವಿರೋಧಿಸಿದ್ದರು.

 

Comments are closed.