ಕರಾವಳಿ

ಸಿನಿಮಾ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಶುಭಸುದ್ಧಿ: ಸಿನಿಮಾ ಮಂದಿರಗಳಲ್ಲಿ ಶೇ 100ರಷ್ಟು ಸೀಟುಗಳ ಭರ್ತಿಗೆ ಅವಕಾಶ

Pinterest LinkedIn Tumblr

ಬೆಂಗಳೂರು, ಏಪ್ರಿಲ್.03 : ಸಿನಿಮಾ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಶುಭಸುದ್ಧಿಯೊಂದು  ಹೊರಬಿದ್ದಿದ್ದೆ.

ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಹೊರಡಿಸಲಾಗಿದ್ದ ಮಾರ್ಗಸೂಚಿಯನ್ನು ಬದಲಾಯಿಸಿರುವ ರಾಜ್ಯ ಸರ್ಕಾರ ಚಿತ್ರಮಂದಿರ ಶೇ.50ರಷ್ಟು ಮಿತಿ ಆದೇಶವನ್ನು ಸದ್ಯಕ್ಕೆ ವಾಪಾಸ್‌ ಪಡೆದಿದ್ದು ಏಪ್ರಿಲ್‌ 7ರವರೆಗೆ ಶೇ 100ರಷ್ಟು ಸೀಟುಗಳ ಭರ್ತಿಗೆ ಅವಕಾಶ ನೀಡಿದೆ.

ಕೊರೋನಾ ಎರಡನೇಯ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಸೋಂಕು ಹೆಚ್ಚುತ್ತಿರುವ ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಕಲಬುರ್ಗಿ, ಮಂಗಳೂರು, ಉಡುಪಿ ಸೇರಿದಂತೆ ೮ ಜಿಲ್ಲೆಗಳಲ್ಲಿ ಸಿನಿಮಾ ವೀಕ್ಷರಿಗೆ ಶೇ. 50ರಷ್ಟು ಸೀಟುಗಳ ನಿರ್ಬಂಧ ಹೇರಿತ್ತು. ಇದೀಗ ಅ ಆದೇಶವನ್ನು ವಾಪಸ್ಸು ಪಡೆದಿದ್ದು, ಏಪ್ರಿಲ್‌ 7ರವರೆಗೆ ಶೇ 100ರಷ್ಟು ಸೀಟುಗಳ ಭರ್ತಿಗೆ ಅವಕಾಶ ನೀಡಿದೆ.

ನಿನ್ನೆ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದ ಎಂಟು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಗರಿಷ್ಠ ಶೇ 50 ಪ್ರೇಕ್ಷಕರಿಗಷ್ಟೇ ಅವಕಾಶ ನೀಡಲು ಆದೇಶಿಸಿತ್ತು. ಆದರೆ ಸರ್ಕಾರದ ಮೊದಲಿನ ಆದೇಶದ ಬಗ್ಗೆ ಸ್ಯಾಂಡಲ್ ವುಡ್ ಚಿತ್ರರಂಗದ ಗಣ್ಯರು ಆಕ್ರೋಷ ವ್ಯಕ್ತ ಪಡಿಸಿದ್ದು, ಇದೀಗ ಸ್ಯಾಂಡಲ್ ವುಡ್ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಶುಕ್ರವಾರ ಹೊಸ ಮಾರ್ಗಸೂಚಿ ಹೊರಡಿಸಿತ್ತು.

ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರನ್ನು ಭೇಟಿ ಮಾಡಿದ್ದ ಪುನಿತ್ ರಾಜ್ ಕುಮಾರ್ ಅವರ “ಯುವರತ್ನ” ಚಿತ್ರತಂಡ ಅವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿತ್ತು. ಅಲ್ಲದೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಸಹ ಈ ಸಂಬಂಧ ಆಗ್ರಹಿಸಿದ್ದರು.

ಈಗಾಗಲೇ ಸಿನಿ ವೀಕ್ಷಕರು ಸೀಟುಗಳನ್ನು ಆನ್ ಲೈನ್ ಮೂಲಕ ಭರ್ತಿ ಮಾಡಿದ್ದಾರೆ. ಇದೀಗ ಶೇ 50ರಷ್ಟು ಸೀಟುಗಳ ಭರ್ತಿಯಿಂದ ಅಂತಹ ವೀಕ್ಷಕರಿಗೆ ತೊಂದರೆ ಆಗಲಿದೆ. ಹಿಗಾಗಿ ಶೇ 50ರಷ್ಟು ಸೀಟುಗಳ ಭರ್ತಿಯ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಚಿತ್ರರಂಗದ ಬೇಡಿಕೆಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸುವ ಮೂಲಕ ಸಿನಿಮಾ ಪ್ರಿಯರಿಗೆ ಶುಭಸುದ್ಧಿ ನೀಡಿದೆ.

Comments are closed.