ಕರಾವಳಿ

ಕ್ಷೇತ್ರ ಅಪವಿತ್ರಗೊಳಿಸಿದ ದುಷ್ಕರ್ಮಿಗಳಲ್ಲಿ ನಡುಕ ಹುಟ್ಟಿಸಿದ ತುಳುನಾಡಿನ ದೈವಗಳು : ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ

Pinterest LinkedIn Tumblr

ಮಂಗಳೂರು, ಏಪ್ರಿಲ್.01: ನಗರದ ಹಲವಾರು ದೈವಸ್ಥಾನಗಳು ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಘಟನೆ ಇತ್ತೀಚಿಗೆ ನಗರದಲ್ಲಿ ನಡೆದಿದ್ದು, ಇದೀಗ ಈ ಪ್ರಕರಣ ದಲ್ಲಿ ಪಾಲ್ಗೊಂಡ ಆರೋಪಿಗಳಿಗೆ ದೈವರಾಜ ಶ್ರೀ ಬಬ್ಬುಸ್ವಾಮಿ ಹಾಗೂ ಸಹ ಪರಿವಾರ ದೈವಗಳು ತಕ್ಕ ಶಾಸ್ತಿ ಮಾಡುವ ಮೂಲಕ ದುಷ್ಕರ್ಮಿಗಳಲ್ಲಿ ನಡುಕ ಹುಟ್ಟಿಸಿದೆ.

ನಗರದ ಪಾಂಡೇಶ್ವರ ಸಮೀಪದ ಎಮ್ಮೆಕೆರೆಯಲ್ಲಿರುವ ದೈವರಾಜ ಶ್ರೀ ಬಬ್ಬುಸ್ವಾಮಿ ಕ್ಷೇತ್ರದ ಕಾಣಿಕೆ ಡಬ್ಬಿಗೆ ಅಸಹ್ಯ ವಸ್ತುಗಳನ್ನು ಹಾಕಿದ್ದಲ್ಲದೇ ಕ್ಷೇತ್ರದಲ್ಲಿ ಗಲೀಜು ಮಾಡುವ ಮೂಲಕ ಅಪವಿತ್ರಗೊಳಿಸಿದ ದುಷ್ಕರ್ಮಿಗಳಿಗೆ ಕಾರಣಿಕ ಶಕ್ತಿ ಬಬ್ಬುಸ್ವಾಮಿಯ ಮಹಿಮೆಯ ಅರಿವಾಗಿದ್ದು, ದುಷ್ಕರ್ಮಿಗಳಲ್ಲಿ ಇಬ್ಬರು ತಪ್ಪು ಕೇಳಲು ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಘಟನೆ ಬುಧವಾರ ನಡೆದಿದೆ.

ದುಷ್ಕರ್ಮಿಗಳಲ್ಲಿ ಓರ್ವ ಸಾವು:

ಆರೋಪಿಗಳಲ್ಲಿ ಓರ್ವ ವ್ಯಕ್ತಿ ಈಗಾಗಲೇ ದೈವಗಳ ಶಾಪಕ್ಕೆ ಗುರಿಯಾಗಿ ರಕ್ತ ಕಾರಿ, ಹುಚ್ಚು ಹಿಡಿದು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಉಳಿದಿಬ್ಬರು ಪ್ರಾಣ ಭೀತಿಯಿಂದ ಕ್ಷೇತ್ರದಲ್ಲಿ ಕೋಲ ನಡೆಯುವ ವೇಳೆ ಕ್ಷೇತ್ರಕ್ಕೆ ಆಗಮಿಸಿ ಕೊರಗಜ್ಜನ ಮುಂದೆ ತಪ್ಪು ಕೇಳಿದ್ದಾರೆ.

ಕ್ಷೇತ್ರಕ್ಕೆ ಆಗಮಿಸಿ ಶರಣಾದ ಇಬ್ಬರು ಆರೋಪಿಗಳು:

ಇತ್ತೀಚೆಗೆ 3/4ದಿನಗಳ ಹಿಂದೆ ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ, ಬಸ ಕೌಪಂಡ್ ಆಚಾರಿಹಿತ್ಲು ಎಮ್ಮೆಕೆರೆ ಮಂಗಳೂರು ಇಲ್ಲಿಗೆ ಅನ್ಯ ಸಮುದಾಯದ ವೆಕ್ತಿಯು ಬಂದು ತನ್ನ ಅನಾರೋಗ್ಯ ಕುರಿತು ಕೆಲವು ದಿನಗಳ ಹಿಂದೆ ಪ್ರಶ್ನೆ ಕೇಳಿದಾಗ ನೀವುಗಳು ದೈವರಾಜನ ಶಾಪಕ್ಕೆ ಗುರಿಯಾಗಿರುವಿರಿ ಎಮ್ಮೆಕೆರೆಯ ದೈವರಾಜನ ಸನ್ನಿದಾನಕ್ಕೆ ಶರಣಾಗಿರಿ ಅಲ್ಲದೆ ಗುಳಿಗ ದೈವಕ್ಕೆ ಕೋಳಿ ಹರಕೆ ನೀಡಬೇಕು ಎಂದು ತಿಳಿದುಬಂದಿದೆ ಎಂದು ತಿಳಿಸಿರುತ್ತಾನೆ.

ಅಲ್ಲದೇ ಆತನಲ್ಲಿ ನಡೆದ ಸತ್ಯ ಘಟನೆಯನ್ನು ತಿಳಿಸು ಎಂದಾಗ ತನ್ನ ಜೊತೆಯಿದ್ದ ಗೆಳೆಯ ಇತ್ತೀಚಿಗೆ ಹಲವಾರು ದೈವಸ್ಥಾನಕ್ಕೆ ಕರೆದು ಹೋಗುತ್ತಿದ್ದ ಆತ ಅಲ್ಲಿ ಏನೋ ಮಾಡುತ್ತಿದ ಎಂದು ನನಗೆ ತಿಳಿದಿಲ್ಲ. ಅವನ ಜೊತೆ ನನ್ನನು ಕರೆದುಕೊಂಡು ಹೋಗಿದ್ದು ನಿಜ ಆದರೆ ಕೆಲದಿನಗಳಲ್ಲೆ ಆತ ರೋಗದಿಂದ ನಿಧನ ಹೊಂದಿದ. ಬಳಿಕ ನನಗೂ ಆರೋಗ್ಯದಲ್ಲಿ ವೆತ್ಯಾಸ ಕಂಡು ಬಂತು. ಜೊತೆಗೆ ನಾನು ಅನೇಕ ನೋವು ನಷ್ಟ ಅನುಭವಿಸಿದೆ ಎಂದು ಯುವಕ ಸಮಿತಿಯಲ್ಲಿ ತಿಳಿಸಿದ್ದಾನೆ.

ದುಷ್ಟರನ್ನು ಶೀಘ್ರದಲ್ಲೇ ಶಿಕ್ಷಿಸಿ ಯಾರೆಂದು ತೋರಿಸಿ ಕೊಡುವೆ : ಅಭಯ ನೀಡಿದ ಅಜ್ಜ

ದೈವರಾಜನ ಸನ್ನಿದಿಯಲ್ಲಿ ಇತ್ತೀಚೆಗೆ ನಡೆದ ಕೊರಗಜ್ಜನ ನೇಮದಲ್ಲಿ ಕಾಣಿಕೆ ಹುಂಡಿಯ ಮಲೀನದ ಬಗ್ಗೆ ದೂರು ನೀಡಿದ್ದು, ತಪ್ಪು ಮಾಡಿದ ದುಷ್ಟರನ್ನು ಅತೀ ಶೀಘ್ರದಲ್ಲೇ ಶಿಕ್ಷಿಸಿ ಯಾರೆಂದು ತೋರಿಸಿ ಕೊಡುವೆ ಎಂದು ಅಜ್ಜನ ಆಭಯಾಗಿತ್ತು.

ಅದರಂತೆ ಇದೀಗ ಆರೋಪಿಗಳಲ್ಲಿ ಇಬ್ಬರು ಕ್ಷೇತ್ರಕ್ಕೆ ಆಗಮಿಸಿ ಕೊರಗಜ್ಜನ ಮುಂದೆ ಕ್ಷಮಾಪಣೆ ಕೇಳಿದ್ದಾರೆ. ಉಪಯೋಗಿಸಿದ ಕೋಂಡಮ್,ಬರಹಗಳನ್ನು ಹಾಕಿದ ದುಷ್ಟರಿಗೆ ಬರಿಸಿ ತಪ್ಪಿತಸ್ಥರನ್ನು ತಪ್ಪನ್ನು ಒಪ್ಪುವಂತೆ ಮಾಡಿ ಅನೇಕ ಭಕ್ತರ ಕಣ್ಣೀರು ಹಾಕಿದ್ದ ಭಕ್ತರ ಪಾಲಿಗೆ ಕಾರ್ಣೀಕ ಮೇರೆದ ಘಟನೆ ಎಮ್ಮೆಕೆರೆಯ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆದಿದೆ.

ದೈವರಾಜನ ಆಜ್ಞೆಯಂತೆ ಕೊರಗಜ್ಜ ದೈವ ಸಾರಬಳಿಕೆ ಸಂಕೊಳಿಗುಳಿಗೆವು ಪಾಪಿಗಳನ್ನು ಎಳೆದಂದು ನಿಲ್ಲಿಸಿದ್ದೇವೆ ಎಂದು ಅಜ್ಜನ ಆಭಯ ಆಗಿದೆ. ಅಲ್ಲದೆ ದೈವರಾಜ ಬಬ್ಬುಸ್ವಾಮಿ ಅಪ್ಪಣೆಯಿಲ್ಲದೆ ಈವಿಚಾರಕ್ಕೆ ಮುಕ್ತಿಯಿಲ್ಲ ಅಧಿಕಾರ ಪೀಠದ ಮಾಮ್ಮಾಯಿ ದೂತ ಬಬ್ಬುಸ್ವಾಮಿ ಈ ವಿಚಾರದ ಎಳೆ ಎಳೆಯನ್ನು ತಿಳಿಸಿಕೊಡುವುದಾಗಿ ಕೊರಗಜ್ಜ ಆಭಯ ಆಗಿರುತ್ತದೆ.

ಅನ್ಯ ಕೋಮಿನ ತಂಡದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಉದ್ದೇಶ!

ಅಂದಾಜು 25ರಿಂದ 35ರ ಹರೆಯದ ಯುವಕರು ಗಲಭೆ ಸೃಷ್ಟಿಸುವ ಉದ್ದೇಶ ಇಲ್ಲವೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಬೇರೆ ಕೋಮಿನ ಒಟ್ಟು ಹದಿಮೂರು ಜನರ ತಂಡ ನಗರದ ದೈವಸ್ಥಾನಗಳನ್ನು ಮಲೀನಗೊಳಿಸಿ ಅಪವಿತ್ರಗೊಳಿಸುವ ಕೃತ್ಯ ಎಸಗಿರುವುದು ಕಂಡು ಬಂದಿದೆ.

ಇದೀಗ ಕ್ಷಮಾಪಣೆ ಮುಗಿದ ಕೂಡಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

Comments are closed.