ಕರಾವಳಿ

ಕ್ರಿಕೆಟ್ ಪಂದ್ಯಾಟದಿಂದ ಒಟ್ಟಾದ 4 ಲಕ್ಷ ಹಣವನ್ನು ಬಾಲಕನ ಚಿಕಿತ್ಸೆಗೆ ನೀಡಿ ಮಾನವೀಯತೆ

Pinterest LinkedIn Tumblr

ಕುಂದಾಪುರ: ಕ್ರಿಕೆಟ್ ಪಂದ್ಯಾವಳಿ ನಡೆಸಿ ಅದರಲ್ಲಿ ಒಟ್ಟುಗೂಡಿದ ಬರೋಬ್ಬರಿ ನಾಲ್ಕು ಲಕ್ಷ ಹಣವನ್ನು ಅನಾರೋಗ್ಯದಿಂದ ಬಳಲುತ್ತಿರುವ ಬಾಲಕನ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿ ಇಲ್ಲೊಂದು ಸಂಘಟನೆ ಮಾನವೀಯತೆ ತೋರಿದೆ.

ರಾಮನಗರ ಫ್ರೆಂಡ್ಸ್ ನಾಡ- ಸೇನಾಪುರ ಆಶ್ರಯದಲ್ಲಿ ಥಲಸ್ಸೇಮಿಯಾ ಕಾಯಿಲೆಯಿಂದ  ಬಳಲುತ್ತಿರುವ ಪುಟಾಣಿ ಬಾಲಕ ರಿಷಿಕ್ ಆಚಾರ್ಯ ಪಡುಕೋಣೆ ಇವನ ಚಿಕಿತ್ಸಾ ವೆಚ್ಚದ ಸಹಾಯಾರ್ಥ ನಾಡ- ಸೇನಾಪುರದ ರಾಮನಗರದಲ್ಲಿ ಏರ್ಪಡಿಸಿದ ಎರಡು ದಿನಗಳ ಫ್ರೆಂಡ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 4,04,444 ರೂ. ಒಟ್ಟಾಗಿದ್ದು, ಅದನ್ನು ಆ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.ರಿಷಿಕ್ ಆಚಾರ್ಯ ಹಾಗೂ ಆತನ ತಾಯಿ ಸುಮಂಗಲಾ ಅವರಿಗೆ ಈ ಹಣವನ್ನು ಹಸ್ತಾಂತರಿಸಲಾಯಿತು.

ಸತೀಶ್ ಕೆ. ರಾಮನಗರ ಅಧ್ಯಕ್ಷತೆ ವಹಿಸಿದ್ದರು. ಕೀರ್ತಿ ಕಿರಣ್ ಡಿಸೋಜಾ, ಕೆನಡಿ ಪಿರೇರಾ, ಶಾಲೆಯ ಮುಖ್ಯ ಶಿಕ್ಷಕಿ ಸರಿತಾ ಪಾಯಸ್, ಗ್ರಾ.ಪಂ. ಸದಸ್ಯರಾದ ಸುಧಾಕರ ಶೆಟ್ಟಿ, ಜಯ ಪೂಜಾರಿ, ಉದ್ಯಮಿಗಳಾದ ಅಶೋಕ್ ಶೆಟ್ಟಿ ಸಂಸಾಡಿ, ಕೆನಡಿ ಪಿರೇರಾ, ಜೋಸೆಫ್ ಬ್ಯಾರೋಸ್, ಡೇಜಿ ಬ್ಯಾರೋಸ್, ಸಂತೋಷ್ ಡಿ’ಸೋಜಾ, ಸತೀಶ ಬಡಾಬೈಲು, ರಾಮಚಂದ್ರ, ಕೊಲ್ಲೂರು ದೇಗುಲದ ಟ್ರಸ್ಟಿ ಗೋಪಾಲಕೃಷ್ಣ ನಾಡ, ಗ್ರಾ.ಪಂ. ಮಾಜಿ ಸಂದೀಪ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.

ಶಂಭು ಗುಡ್ಡಮ್ಮಾಡಿ ಕಾರ್‍ಯಕ್ರಮ ನಿರೂಪಿಸಿ, ರಾಮ ಕೆ. ವಂದಿಸಿದರು.

Comments are closed.