ರಾಷ್ಟ್ರೀಯ

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಕೊಂಚ ಇಳಿಕೆ!

Pinterest LinkedIn Tumblr

ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಕೊಂಚ ಇಳಿಕೆಯಾಗಿದ್ದು ವಾಹನ ಸವಾರರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ.

ಪೆಟ್ರೋಲ್ ಪ್ರತಿ ಲೀಟರ್ ಗೆ ಬೆಲೆ 19 ರಿಂದ 22 ಪೈಸೆ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 21 ರಿಂದ 23 ಪೈಸೆ ಇಳಿಕೆಯಾಗಿದೆ. ದೇಶಾದ್ಯಂತ ಈ ಇಳಿಕೆ ದರ ಅನ್ವಯವಾಗುತ್ತಿದ್ದು, ಸ್ಥಳೀಯ ತೆರಿಗೆ ಪದ್ಧತಿಯ ಲೆಕ್ಕಾಚಾರದಿಂದ ರಾಜ್ಯದಿಂದ ರಾಜ್ಯಕ್ಕೆ ಇಂಧನ ದರ ವ್ಯತ್ಯಾಸವಿರುತ್ತದೆ.

ಫೆಬ್ರವರಿ 27ರ ಬಳಿಕ ಮತ್ತೆ ಇಂಧನ ದರ ಪರಿಷ್ಕರಣೆಗೊಂಡಿರಲಿಲ್ಲ. ನಂತರ ಸತತ ಎರಡು ದಿನ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಬೆಲೆ ಇಳಿಕೆ ಮಾಡಿ, ಪರಿಷ್ಕೃತ ದರ ಪ್ರಕಟಿಸಿದ್ದರೂ ಕಳೆದ 4 ದಿನಗಳಿಂದ ಯಾವುದೇ ಬದಲಾವಣೆಯಾಗಿರಲಿಲ್ಲ.

ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮೂರು ವಾರಗಳ ಕಾಲ ತೈಲ ಬೆಲೆ ಏರಿಕೆಯನ್ನು ತಡೆ ಹಿಡಿಯಲಾಗಿತ್ತು. ಕಚ್ಚಾತೈಲ ಬೆಲೆ ಏರುಪೇರಾದರೂ ತೈಲ ಕಂಪನಿಗಳು ಇಂಧನ ಬೆಲೆ ಪರಿಷ್ಕರಿಸಿರಲಿಲ್ಲ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಇಂದು 90.56, ಕೋಲ್ಕತ್ತಾದಲ್ಲಿ ಪೆಟ್ರೋಲ್ ಇಂದಿನ ದರ 90.77 ರೂ. ಮುಂಬೈ 96.98 ರೂ. ಚೆನ್ನೈ 92.58 ರೂ. ಇನ್ನು ಬೆಂಗಳೂರಿನಲ್ಲಿ 93.59 ರೂಪಾಯಿ ಇದೆ.

ದೆಹಲಿಯಲ್ಲಿ ಡೀಸೆಲ್ ಬೆಲೆ 80.87, ಕೋಲ್ಕತ್ತಾದಲ್ಲಿ 83.75 ರೂ. ಮುಂಬೈನಲ್ಲಿ 87.96 ರೂ. ಚೆನ್ನೈನಲ್ಲಿ 85.88 ರೂ. ಇನ್ನು ಬೆಂಗಳೂರಿನಲ್ಲಿ 85.75 ರೂಪಾಯಿ ಇದೆ.

Comments are closed.