ಕರಾವಳಿ

ಪ್ರಶಾಂತ್ ಕುಮಾರ್ ನೇತೃತ್ವದ ಮುಂಡ್ಕೂರು ಜೇಸಿಸ್ ನ ಪದಗ್ರಹಣ

Pinterest LinkedIn Tumblr

ಅಂತರಾಷ್ಟ್ರೀಯ ಸಂಸ್ಥೆ ಪ್ರತಿಷ್ಠಿತ ಭಾರತೀಯ ಜೇಸಿಸ್ ನ ವಲಯ 15 ರ ಹೆಮ್ಮೆಯ ಘಟಕ ಜೇಸಿಐ ಮುಂಡ್ಕೂರು ಭಾರ್ಗವದ 2021ನೇ ಸಾಲಿನ ಪದಗ್ರಹಣ ಸಮಾರಂಭವು ಜೇಸಿ ಹೆಚ್ ಜಿ ಎಫ್ ಪ್ರಶಾಂತ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಮುಂಡ್ಕೂರಿನ ಸಪಳಿಗ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.

ಈ ಸಂದರ್ಭ ಮುಖ್ಯ ಅತಿಥಿಯಾಗಿ ಮೂಡಬಿದ್ರಿಯ ಜೈನ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀ ಮುನಿರಾಜ್ ರೆಂಜಾಳ ರವರು ಮಾತನಾಡಿ ಸಮಾಜಮುಖಿ ಕಾರ್ಯಗಳನ್ನು ಮಾಡಲು ಹಾಗೂ ವ್ಯಕ್ತಿತ್ವ ವಿಕಸನದಂತಹ ತರಬೇತಿ ನಡೆಸಲು ಜೇಸಿ ಸಂಸ್ಥೆ ಪ್ರೇರೇಪಿಸುತ್ತದೆ ಎಂದರು.

ಗೌರವಾನ್ವಿತ ಅತಿಥಿಯಾಗಿ ಜೇಸಿಐ ವಲಯ 15 ರ ವಲಯಾಧ್ಯಕ್ಷೆ ಜೇಸಿಐ ಸೆನೆಟರ್ ಸೌಜನ್ಯ ಹೆಗ್ಡೆಯವರು ಜೇಸಿ ಸಂಸ್ಥೆಯು ಭವಿಷ್ಯದ ಚಿಂತನೆಗೆ ದಾರಿಯಾಗುತ್ತದೆ ಎನ್ನುತ್ತಾ, ಜೇಸಿ ಸಂಸ್ಥೆಯ ಕಾರ್ಯವೈಖರಿಯನ್ನು ತಮ್ಮ ಮಾತಿನಲ್ಲಿ ವರ್ಣಿಸಿದರು.

ಗೌರವಾನ್ವಿತ ಅತಿಥಿಯಾಗಿ ವಲಯ 15 ರ ಪ್ರಾಂತ್ಯ – ಇ ವಿಭಾಗದ ವಲಯ ಉಪಾಧ್ಯಕ್ಷರಾದ ಜೆಎಫ್ಎಮ್ ಗಿರೀಶ್ ಎಸ್ ಪಿ ಯವರು ನೂತನ ಸದಸ್ಯರಿಗೆ ಶುಭ ಹಾರೈಸಿ, ಮುಂಡ್ಕೂರ್ ಜೇಸಿಸ್ ನ ಅಭಿವೃದ್ಧಿ ಕಾರ್ಯವನ್ನು ಶ್ಲಾಘಿಸಿದರು.

ಜೇಸಿಐ ಮುಂಡ್ಕೂರು ಭಾರ್ಗವದ ಸ್ಥಾಪಕಾಧ್ಯಕ್ಷ ಭಾಸ್ಕರ್ ಎಮ್ ಶೆಟ್ಟಿ, ನಿಕಟಪೂರ್ವಾಧ್ಯಕ್ಷ ಗಿರೀಶ್ ಆಚಾರ್ಯ, ನಿರ್ಗಮಿತ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ನಿರ್ಗಮಿತ ಜೇಸಿರೇಟ್ ಕಾರ್ಯಾಧ್ಯಕ್ಷೆ ವಿಜಯಲಕ್ಷ್ಮೀ, ನಿರ್ಗಮಿತ ಜೂನಿಯರ್ ಜೇಸಿ ವಿಭಾಗದ ಕಾರ್ಯಾಧ್ಯಕ್ಷ ಮಿಲನ್, ನಿಯೋಜಿತ ಕಾರ್ಯದರ್ಶಿ ಪ್ರತಿಮಾ ಟಿ ಶೆಟ್ಟಿ, ನಿಯೋಜಿತ ಜೇಸಿರೇಟ್ ಕಾರ್ಯಾಧ್ಯಕ್ಷೆ ಜ್ಯೋತಿ, ಜೂನಿಯರ್ ಜೇಸಿ ವಿಭಾಗದ ನಿಯೋಜಿತ ಕಾರ್ಯಾಧ್ಯಕ್ಷೆ ಕೃತಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭ ಘಟಕದ ನಿಕಟಪೂರ್ವಾಧ್ಯಕ್ಷ ಗಿರೀಶ್ ಆಚಾರ್ಯ ಹಾಗೂ ಪ್ರಸ್ತುತ ವಲಯ ಉಪಾಧ್ಯಕ್ಷರಾಗಿರುವ ಗಿರೀಶ್ ಎಸ್ ಪಿಯವರನ್ನು ಮತ್ತು ಸಾಧಕರಾದ ಭಾಸ್ಕರ್ ಎಮ್ ಶೆಟ್ಟಿ, ದೇವಪ್ಪ ಸಪಳಿಗರನ್ನು ಗೌರವಿಸಿ ಸನ್ಮಾನಿಸಲಾಯಿತು.

ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ವಿಜಯಲಕ್ಷ್ಮೀ, ತ್ರಿವೇಣಿ, ಪ್ರಕಾಶ್ ನಾಯ್ಕ್, ಪ್ರಭಾಕರ್ ಶೆಟ್ಟಿ ಇನ್ನಾ, ದಿನೇಶ್ ಎಮ್ ಎಸ್, ಸೌಮ್ಯಾ ವೆಂಕಟೇಶ್, ಅಶ್ವಿನಿ ಅಮೀನ್ ರವರಿಗೆ ನೂತನ ಅಧ್ಯಕ್ಷರು ಪ್ರತಿಜ್ಞಾ ವಿಧಿ ಬೋಧಿಸಿದರು. ನೂತನ ಸದಸ್ಯರುಗಳಾದ ವಿರಾಜ್, ಪವಿತ್ರ ನಾಯ್ಕ್, ಗಣೇಶ್, ವಸಂತ್, ಉಮೇಶ್, ನಿಹಾಲ್, ಧನುಜಾ ರವರಿಗೆ ವಲಯಾಧ್ಯಕ್ಷರು ಪ್ರಮಾಣ ವಚನ ಬೋಧಿಸಿದರು.

ವಲಯ 15 ರ ಹಿರಿಯ ಕಿರಿಯ ಜೇಸಿ ಬಂಧುಗಳು, ಘಟಕದ ಪೂರ್ವಾಧ್ಯಕ್ಷರು, ಸರ್ವ ಸದಸ್ಯರು, ಇತರ ಸಂಘ ಸಂಸ್ಥೆಗಳ ಹಾಗೂ ಜೇಸಿ ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು, ಜೇಸಿಯೇತರ ಬಂಧುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಜೂನಿಯರ್ ಜೇಸಿ ವಿಭಾಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವರದಿ: ಅರುಣಾ ಕುಲಾಲ್, ಉಳೆಪಾಡಿ

Comments are closed.