ಕರಾವಳಿ

ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ: ಮಧ್ಯವರ್ತಿಗಳ ವಿರುದ್ಧ ಕ್ರಿಮಿನಲ್ ಕೇಸ್

Pinterest LinkedIn Tumblr

ಮಂಗಳೂರು, ಮಾರ್ಚ್ 24 : ಜಿಲ್ಲೆಯಲ್ಲಿ ಪ್ರಸ್ತುತ ಆದ್ಯತಾ (ಬಿ.ಪಿ.ಎಲ್.) ಹಾಗೂ ಆದ್ಯತೇತರ (ಏ.ಪಿ.ಎಲ್) ಹೊಸ ಪಡಿತರ ಚೀಟಿಗಾಗಿ ಆನ್ ಲೈನ್ ಮೂಲಕ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಪಡಿತರ ಚೀಟಿ ಅನುಮೋದಿಸಿ ವಿತರಿಸಲು ಸರ್ಕಾರದಿಂದ ತಂತ್ರಾಂಶದಲ್ಲಿ ಅವಕಾಶ ನೀಡಿರುವುದಿಲ್ಲ.

ಪಡಿತರ ಚೀಟಿ ಮಾಡಿ ಕೊಡುವುದಾಗಿ ನಂಬಿಸಿ ದುರ್ಲಾಭ ಪಡೆಯುವ ಯಾವುದೇ ರೀತಿಯ ಮಧ್ಯವರ್ತಿಗಳಿಗೆ ಸಾರ್ವಜನಿಕರು ಅವಕಾಶ ಮಾಡಿಕೊಡದೇ ಅರ್ಜಿದಾರರು ನೇರವಾಗಿ ಆಹಾರ ಇಲಾಖಾ ಕಚೇರಿಗಳನ್ನು ಸಂಪರ್ಕಿಸಬೇಕು.

ಮಧ್ಯವರ್ತಿಗಳು ಪಡಿತರ ಚೀಟಿ ಕೊಡಿಸುವ ಬಗ್ಗೆ ದೂರು ಬಂದಲ್ಲಿ ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಪಡಿತರ ಚೀಟಿ ಬಗೆಗಿನ ಯಾವುದೇ ಸಂದೇಹಗಳನ್ನು ಸ್ಥಳೀಯ ಆಹಾರ ಶಾಖೆಗಳಲ್ಲಿ ಪರಿಹರಿಸಿಕೊಂಡು ಸೇವಾ ಸೌಲಭ್ಯ ಪಡೆಯಬಹುದಾಗಿದೆ.

ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿದವರು ಅನುಮೋದನೆಗೆ ಅವಕಾಶ ನೀಡಿದ ನಂತರ ತಮ್ಮ ತಾಲ್ಲೂಕಿನ ಆಹಾರ ಶಾಖೆಗಳಾದ ಮಂಗಳೂರು ಅ.ಪ.ಪ್ರದೇಶ ದೂ. ಸಂಖ್ಯೆ: 0824-2423622, ಮಂಗಳೂರು ತಾಲ್ಲೂಕು ದೂ. ಸಂಖ್ಯೆ: 0824-2412033, ಬಂಟ್ವಾಳ ತಾಲ್ಲೂಕು ದೂ. ಸಂಖ್ಯೆ: 08255-232125, ಪುತ್ತೂರು ತಾಲ್ಲೂಕು ದೂ. ಸಂಖ್ಯೆ: 08251-231349, ಬೆಳ್ತಂಗಡಿ ತಾಲ್ಲೂಕು ದೂ. ಸಂಖ್ಯೆ:08256-232383, ಸುಳ್ಯ ತಾಲ್ಲೂಕು ದೂ.ಸಂಖ್ಯೆ: 08257-231330ನ್ನು ಸಂಪರ್ಕಿಸಬಹುದಾಗಿದೆ ಎಂದು ಆಹಾರ , ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.