ಕರಾವಳಿ

ನೊಂದವರ ನೆರವಿಗೆ ರೆಡ್ ಕ್ರಾಸ್ ಸದಾ ಮುಂದೆ: ನಿವೃತ್ತ ಪೋಲಿಸ್ ಅಧಿಕಾರಿ ಗೋಪಾಲ್ ಬಿ ಹೊಸೂರು ಶ್ಲಾಘನೆ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜನಪರವಾಗಿ ಸೇವೆ ಸಲ್ಲಿಸುತ್ತಿರುವ ರೆಡ್ ಕ್ರಾಸ್ ನೊಂದವರ ನೆರವಿಗೆ ಸದಾ ಮುಂದಿರುತ್ತದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರು ಹೇಳಿದ್ದಾರೆ.

ರೆಡ್ ಕ್ರಾಸ್ ಸಂಸ್ಥೆ ಹಾಗೂ ಎನ್ಐಟಿಕೆ ಸುರತ್ಕಲ್ ಇವರ ಸಹಯೋಗದೊಂದಿಗೆ ಎನ್ಐಟಿಕೆ ಆವರಣದಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಜ್ಯ ಮಟ್ಟದ ವಿಪತ್ತು ಪ್ರತಿಕ್ರಿಯೆ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 1921 ರಲ್ಲಿ ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ ಪ್ರಾರಂಭವಾಗಿ ನೂರು ವರ್ಷ ಪೂರೈಸಿದೆ. ಪ್ರವಾಹ, ಬರ ಪರಿಸ್ಥಿತಿ ಮತ್ತು ವಿಪತ್ತು ಸಂದರ್ಭಗಳಲ್ಲಿ ಸಹಾಯ ಮಾಡುವ ಮೂಲಕ ರೆಡ್ ಕ್ರಾಸ್, ಕರ್ನಾಟಕ ನೊಂದವರಿಗೆ ನೆರವು ನೀಡಿದೆ. ಸಹಸ್ರಾರು ಕುಟುಂಬಗಳಿಗೆ ಆಸರೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಭಾಪತಿ ಶಾಂತಾರಾಮ್ ಶೆಟ್ಟಿ ಮಾತನಾಡಿ. ವೆನ್ ಲಾಕ್ ಆಸ್ಪತ್ರೆಯಲ್ಲಿ ರೆಡ್ ಕ್ರಾಸ್ ಮೂಲಕವಾಗಿ ಸಹಾಯ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಯುವ ರೆಡ್ ಸ್ವಯಂಸೇವಕರು ಆಸ್ಪತ್ರೆಗೆ ಬರುವ ರೋಗಿಗಳಿಗೆ ದಿನನಿತ್ಯ ಮಾರ್ಗದರ್ಶನ ಮಾಡಿ ಸಹಾಯ ಮಾಡುತ್ತಿದ್ದಾರೆ ಮತ್ತು ಜಿಲ್ಲೆಯ ಲೇಡಿ ಗೋಷನ್ ಆಸ್ಪತ್ರೆಯಲ್ಲಿ ಆಗುವಂತಹ ಎಲ್ಲಾ ಹೆರಿಗೆಗಳಿಗೆ ಉಚಿತವಾಗಿ ರೆಡ್ ಕ್ರಾಸ್ ರಕ್ತ ಕೇಂದ್ರದ ಮೂಲಕವಾಗಿ ರಕ್ತ ಪೂರೈಸಲಾಗುತ್ತಿದೆ ಎಂದರು.

ರೆಡ್ ಕ್ರಾಸ್ ರಾಜ್ಯ ಶಾಖೆಯ ಸಭಾಪತಿ ಎಸ್ ನಾಗಣ್ಣ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಗೆ ತನ್ನದೇ ಆದ ಹಿರಿಮೆಯಿದೆ. ಶತಮಾನೋತ್ಸವ ವರ್ಷದಲ್ಲಿ ಇಂತಹ ಅನೇಕಾನೇಕ ತರಬೇತಿ ಶಿಬಿರಗಳನ್ನು ರೆಡ್ ಕ್ರಾಸ್ ರಾಜ್ಯ ಶಾಖೆಯು ಹೆಚ್ಚೆಚ್ಚು ಆಯೋಜಿಸಿ ತುರ್ತು ಸಂದರ್ಭದಲ್ಲಿ ಸಹಾಯ ನೀಡಲು ಬೇಕಾದ ಕೌಶಲ್ಯಗಳನ್ನು ಜನಸಾಮಾನ್ಯರಿಗೆ ಮತ್ತು ಸ್ವಯಂಸೇವಕರಿಗೆ ತಿಳಿಸಿಕೊಡಲು ಶ್ರಮಿಸುತ್ತಿದೆ ಎಂದರು.

ಈ ಕಾರ್ಯಾಗಾರದಲ್ಲಿ ದಕ್ಷಿಣ ಕರ್ನಾಟಕದ 14 ಜಿಲ್ಲೆಗಳಿಂದ 60 ಸ್ವಯಂಸೇವಕರು ಭಾಗವಹಿಸಿದ್ದರು. ತರಬೇತಿಯಲ್ಲಿ ಎಸ್.ಡಿ.ಆರ್.ಟಿ. ತರಬೇತಿಯ ಉದ್ದೇಶಗಳು, ಪ್ರಥಮ ಚಿಕಿತ್ಸೆ, ವಿಪತ್ತು ನಿರ್ವಹಣೆ ಮತ್ತು ಪ್ರತಿಕ್ರಿಯೆ, ಸ್ವಯಂಸೇವೆ, ಆಪ್ತ ಸಮಾಲೋಚನೆ ಹಾಗೂ ವಿಪತ್ತು ಸಂದರ್ಭದಲ್ಲಿ ಸಮುದಾಯ ಆರೋಗ್ಯ ಸೇವೆಗಳು ವಿಷಯಕ್ಕೆ ಸಂಬಂಧಿಸಿದ ವಿಷಯಗಳಿಗೆ ತರಬೇತಿ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಡಾ. ಕುಮಾರ್ ವಿ.ಎಲ್.ಎಸ್. ಉಪ ಸಭಾಪತಿ, ಅನಂದ್ ಎಸ್. ಜಿಗಜಿನ್ನಿ, ಗೌರವ ಕೋಶಾಧ್ಯಕ್ಷರು ರಾಜ್ಯ ಶಾಖೆ. ಜಯಕರ ಶೆಟ್ಟಿ, ರಾಜಮೋಹನ್, ಸಚೇತ್ ಸುವರ್ಣ, ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಗೌರವ ಕಾರ್ಯದರ್ಶಿಗಳಾದ ಪ್ರಭಾಕರ ಶರ್ಮ ಮತ್ತಿತರು ಭಾಗವಹಿಸಿದ್ದರು.

Comments are closed.