ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲು ನಿಂತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಗೌತಮ್ ಮತ್ತು ವಿಜಿತ್ ಎಂದು ಗುರುತಿಸಲಾಗಿದೆ.
ಇವರಿಬ್ಬರು ಉಡುಪಿಯ ಪುತ್ತೂರು ಗ್ರಾಮದ ನಿಟ್ಟೂರು ಆಭರಣ ಷೋರೂಮಿನ ಹಿಂಭಾಗದ ಶ್ರೀ ಮೂಕಾಂಬಿಕಾ ಪಾಲಿ ಪ್ರಾಡ್ಟಕ್ಸ್ ಎದುರು ರಸ್ತೆಯ ಬಳಿ ಗಾಂಜಾ ಮಾರಾಟ ಮಾಡಲು ನಿಂತಿದ್ದರು. ಆರೋಪಿತರು ಗಾಂಜಾವನ್ನು ಮಂಗಳೂರಿನ ನವೀನ್ ಎಂಬಾತನಿಂದ ಮಾರಾಟದ ಸಲುವಾಗಿ ಖರೀದಿಸಿ ತಂದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಆರೋಪಿಗಳ ವಶದಿಂದ 4,500/- ರೂಪಾಯಿ ಮೌಲ್ಯದ 150 ಗ್ರಾಂ ಗಾಂಜಾ, ಎರಡು ಮೊಬೈಲ್ ಫೋನ್‌ಗಳು ಹಾಗೂ 720 ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ದೂರು ದಾಖಲಾಗಿದೆ.