ಕರಾವಳಿ

ಮಂಗಳೂರು ಪ್ರೆಸ್‌ಕ್ಲಬ್ ದಿನಾಚರಣೆ : ಸಾಧಕರಿಗೆ ಸನ್ಮಾನ -ಸಚಿವರಿಗೆ ಇಸ್ಪೀಟ್ ಜಾದೂ ಕೈಚಳಕ!

Pinterest LinkedIn Tumblr

ಮಂಗಳೂರು : ಸಮಾಜದಿಂದ ಪಡೆದದ್ದನ್ನು ಮರಳಿ ಸಮಾಜಕ್ಕೆ ಅರ್ಪಿಸುವ ಮನೋಭಾವ ಎಲ್ಲರಲ್ಲಿ ಬೆಳೆಯಬೇಕು. ಅಂತಹ ಸಾಧಕರನ್ನು ಗೌರವಿಸುವುದು ನಿಜವಾದ ಸಮಾಜಮುಖಿ ಕೆಲಸ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾಾನ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದ್ದಾರೆ.

ಮಂಗಳೂರಿನ ರಾಣಿ ಅಬ್ಬಕ್ಕ ಕ್ರೂಸ್‌ನಲ್ಲಿ ಭಾನುವಾರ ನಡೆದ ಪ್ರೆಸ್‌ಕ್ಲಬ್ ದಿನಾಚರಣೆಯಲ್ಲಿ ಅವರು ಶಿಕ್ಷಣ ಕ್ಷೇತ್ರದ ಸಾಧಕ ಕಿನ್ನಜೆ ನಾರಾಯಣ ನಾಯಕ್ ಅವರಿಗೆ ವರ್ಷದ ಪ್ರೆಸ್‌ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದರು.

ಮಂಗಳೂರು ಪ್ರೆಸ್ ಕ್ಲಬ್ ಆಶ್ರಯದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಿಕಾ ಭವನ ಟ್ರಸ್ಟ್‌ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮ ಅಬ್ಬಕ್ಕ ಕ್ರೂಸ್‌ನಲ್ಲಿ ಬೊಕ್ಕಪಟ್ಣದಿಂದ ಉಳ್ಳಾಲ ಸೇತುವೆ ವರೆಗೆ ಸಾಗುತ್ತಾ ನಡೆಯಿತು.

ಕಿನ್ನಜೆ ನಾರಾಯಣ ನಾಯಕ್‌ಗೆ ಪ್ರಶಸ್ತಿ: ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಾಲರ್‌ಶಿಪ್‌ಗೆ ನೆರವಾಗುವ ಸಾಧಕ ಕಿನ್ನಜೆ ನಾರಾಯಣ ನಾಯಕ್ ಅವರಿಗೆ ವರ್ಷದ ಪ್ರೆಸ್‌ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರತಿ ವರ್ಷ ನುಡಿಸಿರಿ-ವಿರಾಸತ್ ನನ್ನ ಅವಿಭಾಜ್ಯ ಅಂಗವಾಗಿತ್ತು. ಆದರೆ ಕೊರೋನಾ ಕಾಣಿಸದ ಬಳಿಕ ಎಲ್ಲವೂ ತಡೆಹಿಡಿಯಲ್ಪಟ್ಟಿತು. ಕೊರೋನಾದಿಂದ ಸೋಮಾರಿತನ ಹಾಗೂ ಹಣದ ಮೋಸದ ಕಾಲ ಬಂದಂತೆ ಆಗಿದೆ. ಜನಜೀವನವೇ ಅಸ್ತವ್ಯಸ್ತ ಆದಂತಾಗಿದೆ. ಇದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ಗೊತ್ತಾಗುತ್ತಿಲ್ಲ ಇಡೀ ಸಮಾಜದಲ್ಲಿ ಗೊಂದಲ ಏರ್ಪಟ್ಟಿದೆ, ಈಗ ಸೋಂಕಿನ ಜೊತೆಗೆ ಬದುಕಲು ಕಲಿಯುತ್ತಿದ್ದೇವೆ. ದೇಶ ಹಿಂದಿನಂತೆ ಸುಭಿಕ್ಷವಾಗಲು ಕೊರೋನಾ ಸೋಂಕು ಬೇಗನೆ ದೂರವಾಗಲಿ ಎಂದು ಡಾ.ಮೋಹನ ಆಳ್ವ ಆಶಿಸಿದರು.

ಪ್ರಶಸ್ತಿ ಮೊತ್ತ ಸೇರಿಸಿ ಸ್ಕಾಲರ್‌ಶಿಪ್‌ಗೆ:

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾರಾಯಣ ನಾಯಕ್, ಇಲ್ಲಿ ನೀಡಿದ ಪ್ರಶಸ್ತಿ ಮೊತ್ತಕ್ಕೆ ಅ್ಟಷ್ಟೇ ಮೊತ್ತ ಸೇರಿಸಿ ವಿದ್ಯಾಾರ್ಥಿಗಳ ಸ್ಕಾಲರ್‌ಶಿಪ್‌ಗೆ, ದತ್ತಿ ನಿಧಿಗೆ ವಿನಿಯೋಗಿಸುತ್ತೇನೆ. ನನ್ನ ನಿವೃತ್ತಿ ವೇತನದಲ್ಲಿ ಶೇ.50ರ ಮೊತ್ತವನ್ನು ಸ್ಕಾಲರ್‌ಶಿಪ್‌ಗೆ, ಬಡ ವಿದ್ಯಾಾರ್ಥಿಗಳ ಶಿಕ್ಷಣ ನೆರವಿಗೆ ಬಳಕೆ ಮಾಡುತ್ತೇನೆ. ಸಮಾಜದಿಂದ ಪಡೆದ ನಿಧಿಯನ್ನು ಸಮಾಜಕ್ಕೆ ಮರಳಿಸುವುದು ನನ್ನ ಕರ್ತವ್ಯ. ಸರ್ವಧರ್ಮ ಸಮಭಾವ ಎನಿಸಿರುವ ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳೇ ದೇವರು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಬಿಸಿಯೂಟಕ್ಕೆ ತಲಾ 5 ಸಾವಿರ ರು. ಮೊತ್ತ ನೀಡುವುದಾಗಿ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶಿವಾನಂದ ತಗಡೂರು ಪ್ರೆಸ್‌ಕ್ಲಬ್ ದಿನಾಚರಣೆ ಉದ್ಘಾಟಿಸಿ, ಪತ್ರಕರ್ತರಲ್ಲಿ ಪ್ರಮಾಣಿಕತೆ, ಶ್ರದ್ಧೆ, ಬದ್ಧತೆ ಈಗಲೂ ಉಳಿದುಕೊಂಡಿದೆ. ಅದನ್ನು ಉಳಿಸಿಕೊಂಡಾಗ ಮಾತ್ರ ಕ್ರಿಯಾಶೀಲ ಪತ್ರಕರ್ತರಾಗಲು ಸಾಧ್ಯ. ಕೋವಿಡ್‌ನ ಈ ಸಂದರ್ಭದಲ್ಲಿ ಪತ್ರಕರ್ತರು ಎದೆಗುಂದದೆ ಕಾರ್ಯನಿರ್ವಹಿಸುತ್ತಿದ್ದಾಾರೆ.

ರಾಜ್ಯ ಸರ್ಕಾರ ಕೂಡ ಪತ್ರಿಕೆಗಳ ಜಾಹಿರಾತು ಬಾಕಿ ಮೊತ್ತ 56 ಕೋಟಿ ರು.ಗಳನ್ನು ಏಕಕಂತಿನಲ್ಲಿ ಬಿಡುಗಡೆ ಮಾಡಿದೆ. ಸಮಾಜಮುಖಿ ಕೆಲಸ ಮಾಡುವ ಮೂಲಕ ಇಲ್ಲಿನ ಪತ್ರಕರ್ತರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭ ಹಿರಿಯ ಪತ್ರಕರ್ತರಾದ ಕೇಶವ ಕುಂದರ್, ಹಿಲರಿ ಕ್ರಾಾಸ್ತಾ(ಉದಯವಾಣಿ), ಕೆ.ಆನಂದ ಶೆಟ್ಟಿ, ಗುರುವಪ್ಪ ಎನ್.ಟಿ.ಬಾಳೆಪುಣಿ (ಹೊಸದಿಗಂತ), ಯು.ಕೆ.ಕುಮಾರನಾಥ್, ಸುಧಾಕರ ಎರ್ಮಾಳ್ (ವಿಜಯ ಕರ್ನಾಟಕ), ಜಗನ್ನಾಾಥ ಶೆಟ್ಟಿ ಬಾಳ (ಜಯಕಿರಣ), ಪಿ.ಬಿ.ಹರೀಶ್ ರೈ( ವಿಜಯವಾಣಿ)
ಇವರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾಾರ ನೆರವೇರಿಸಲಾಯಿತು.

ರಾಜ್ಯ ಪ್ರವಾಸೋದ್ಯಮ ಸಚಿವ ಯೋಗೇಶ್ವರ್, ದ.ಕ.ಜಿಲ್ಲಾಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ಆನಂದ ಶೆಟ್ಟಿ ಇದ್ದರು.ಪ್ರೆೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಸ್ವಾಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪ್ರಾಾಸ್ತಾವಿಕ ಮಾತನಾಡಿದರು.

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಪ್ರಶಸ್ತಿ ವಿಜೇತರ ವಿವರ ನೀಡಿದರು. ಜಿತೇಂದ್ರ ಕುಂದೇಶ್ವರ ಪ್ರತಿಭಾ ಪುರಸ್ಕೃತರ ವಿವರ ಓದಿದರು. ಗೌರವ ಸನ್ಮಾನಿತರ ವಿವರವನ್ನು ವಿಜಯ ಕೋಟ್ಯಾನ್ ಪಡು ನಿರೂಪಿಸಿದರು. ಪ್ರೆಸ್ ಕ್ಲಬ್ ಸದಸ್ಯ ರಾಮಕೃಷ್ಣ ಆರ್. ವಂದಿಸಿದರು. ಉಪಾಧ್ಯಕ್ಷ ಪಿ.ಬಿ.ಹರೀಶ್ ರೈ ನಿರೂಪಿಸಿದರು.

ಕುದ್ರೋಳಿ ಗಣೇಶ್ ಅವರಿಂದ ಜಾದೂ, ಮೈಮ್ ರಾಮ್‌ದಾಸ್‌ರಿಂದ ಜಾನಪದ ಹಾಡು, ಪತ್ರಕರ್ತರಿಂದ ಪ್ರತಿಭಾ ಪ್ರದರ್ಶನ ಏರ್ಪಟ್ಟಿತು.

ಸಚಿವರಿಗೆ ಇಸ್ಪೀಟ್ ಜಾದೂ ಕೈಚಳಕ!

ಕೈಯಲ್ಲಿ ಹತ್ತಾರು ಎಲೆಗಳ ಇಸ್ಪೀಟು ಹಿಡಿದ ಸಚಿವರು, ಅದರಲ್ಲಿ ಒಂದನ್ನು ಆಯ್ಕೆ ಮಾಡಿ ಇಸ್ಪೀಟ್ ಎಲೆ ಪ್ಯಾಾಕನ್ನು ಜಾದುಗಾರ್ ಕೈಗೆ ನೀಡಿದರು. ಕ್ಷಣ ಮಾತ್ರದಲ್ಲಿ ಸಚಿವರು ಆಯ್ಕೆ ಮಾಡಿದ ಇಸ್ಪೀಟನ್ನು ಜಾದೂಗಾರ ತೋರಿಸಿಕೊಟ್ಟಾಗ ಸಚಿವರಿಗೇ ಅಚ್ಚರಿ!

ಇದು ತೇಲುವ ಬೋಟ್‌ನಲ್ಲಿ ರಾಜ್ಯ ಪ್ರವಾಸೋದ್ಯಮ ಸಚಿವ ಯೋಗೇಶ್ವರ್‌ಗೆ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ತೋರಿಸಿದ ಚಮತ್ಕಾರ. ಮಂಗಳೂರಿನ ಫಲ್ಗುಣಿ ನದಿಯಲ್ಲಿ ರಾಣಿ ಅಬ್ಬಕ್ಕ ಕ್ರೂಸ್‌ನಲ್ಲಿ ಭಾನುವಾರ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಗೆ ಏರ್ಪಟ್ಟಿತು.

ಇದರ ಸಮಾರೋಪ ಹಂತದಲ್ಲಿ ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಕ್ರೂಸ್‌ಗೆ ದಿಢೀರ್ ಭೇಟಿ ನೀಡಿದ್ದರು. ಆಗ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಸಚಿವರನ್ನು ವೇದಿಕೆಗೆ ಕರೆಸಿದ ಜಾದೂಗಾರ ಕುದ್ರೋಳಿ ಗಣೇಶ್ ಇಸ್ಪೀಟ್ ಎಲೆ ಜಾದೂವಿನ ಕೈಚಳ ತೋರಿಸಿ ಸಚಿವರನ್ನು ಬೆರಗುಗೊಳಿಸಿದರು. ಕುದ್ರೋಳಿ ಗಣೇಶ್ ಅವರ ಚಮತ್ಕಾಾರಕ್ಕೆ ಸಚಿವ ಯೋಗೇಶ್ವರ್ ತಲೆದೂಗಿದರು.

ಬಳಿಕ ಮಾತನಾಡಿದ ಸಚಿವ ಯೋಗೇಶ್ವರ್, ತೇಲುವ ಬೋಟ್ ಮೂಲಕವೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಇಂತಹ ಅನೇಕ ಬೋಟ್‌ಗಳು ಬಂದಾಗ ಮಾತ್ರ ಪ್ರವಾಸೋದ್ಯಮಕ್ಕೆ ಕಳೆ ಹೆಚ್ಚುತ್ತದೆ. ಇದಕ್ಕೆ ಬೇಕಾದ ಎಲ್ಲ ರೀತಿಯ ನೆರವನ್ನು ಇಲಾಖೆ ನೀಡಲಿದೆ ಎಂದು ಭರವಸೆ ನೀಡಿದರು.

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾಾನ ಅಧ್ಯಕ್ಷ ಡಾ.ಮೋಹನ ಆಳ್ವ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶಿವಾನಂದ ತಗಡೂರು, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಇದ್ದರು.

Comments are closed.