ನವದೆಹಲಿ: 2021ನೇ ವರ್ಷದಲ್ಲಿ ಇದೇ ಮೊದಲ ಬಾರಿಗೆ ಕೋವಿಡ್-19 ಸೋಂಕಿನ ಪ್ರಕರಣ ಇಷ್ಟೊಂದು ಸಂಖ್ಯೆಯಲ್ಲಿ ಏರಿಕೆಯಾಗಿದ್ದು ಕಳೆದ 24 ಗಂಟೆಗಳಲ್ಲಿ 46 ಸಾವಿರದ 951 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.
ಈ ಮೂಲಕ ದೇಶದಲ್ಲಿ ನಿನ್ನೆ ಒಂದೇ ದಿನ ಕೋವಿಡ್-19 ಪ್ರಕರಣ 1 ಕೋಟಿಯ 16 ಲಕ್ಷದ 46 ಸಾವಿರದ 081ಕ್ಕೆ ಏರಿಕೆಯಾಗಿದೆ. ಸತತ 12ನೇ ದಿನವೂ ಕೋವಿಡ್-19 ಪ್ರಕರಣಗಳು ಏರಿಕೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳು 3 ಲಕ್ಷದ 34 ಸಾವಿರದ 646ಕ್ಕೆ ಏರಿಕೆಯಾಗುವ ಮೂಲಕ ದೇಶದಲ್ಲಿ ಪ್ರಸ್ತುತ ಶೇಕಡಾ 2.87ರಷ್ಟು ಸಕ್ರಿಯ ಸೋಂಕಿತರಿದ್ದಾರೆ. ಗುಣಮುಖ ಹೊಂದಿದವರ ಸಂಖ್ಯೆ ಶೇಕಡಾ 95.75ರಷ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಸುತ್ತದೆ.
ಕಳೆದ 130 ದಿನಗಳಲ್ಲಿ ಇತ್ತೀಚಿನ ಒಂದು ವಾರದಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮೃತಪಟ್ಟವರ ಸಂಖ್ಯೆ ದೇಶದಲ್ಲಿ 1 ಲಕ್ಷದ 59 ಸಾವಿರದ 967ಕ್ಕೆ ಏರಿಕೆಯಾಗಿದೆ. ಪ್ರತಿದಿನ ಹೊಸದಾಗಿ 210ಕ್ಕಿಂತ ಹೆಚ್ಚು ಮಂದಿ ಸಾಯುತ್ತಿದ್ದು ಕಳೆದ 72 ದಿನಗಳಲ್ಲಿಯೇ ಅಧಿಕವಾಗಿದೆ.
ಕಳೆದ ನವೆಂಬರ್ 12ರ ವೇಳೆಗೆ 47 ಸಾವಿರದ 905 ಸೋಂಕಿತ ಪ್ರಕರಣಗಳು ವರದಿಯಾಗಿವೆ.ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 1 ಕೋಟಿಯ 11 ಲಕ್ಷದ 51 ಸಾವಿರದ 468 ಕ್ಕೆ ಏರಿದರೆ, ಸಾವಿನ ಪ್ರಮಾಣ ಇನ್ನೂ ಶೇಕಡಾ 1.37 ಕ್ಕೆ ಇಳಿದಿದೆ.
ಭಾರತದ ಕೋವಿಡ್-19 ಸೋಂಕಿತರ ಸಂಖ್ಯೆ ಕಳೆದ ಆಗಸ್ಟ್ 7 ರಂದು 20 ಲಕ್ಷ ದಾಟಿದ್ದರೆ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿತ್ತು. ಇದು ಸೆಪ್ಟೆಂಬರ್ 28 ರಂದು 60 ಲಕ್ಷ, ಅಕ್ಟೋಬರ್ 11 ರಂದು 70 ಲಕ್ಷ, ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿದೆ.
ಐಸಿಎಂಆರ್ ಪ್ರಕಾರ, ಮಾರ್ಚ್ 21 ರವರೆಗೆ 23 ಕೋಟಿಯ 44 ಲಕ್ಷದ 45 ಸಾವಿರದ 774 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 8 ಲಕ್ಷದ 80 ಸಾವಿರದ 655 ಮಾದರಿಗಳನ್ನು ನಿನ್ನೆ ಪರೀಕ್ಷೆಗೊಳಪಡಿಸಲಾಗಿದೆ.