ಕರಾವಳಿ

ನಾಳೆಯಿಂದ ಮಂಗಳೂರಿನಲ್ಲಿ ತುಳುಚಿತ್ರ ಕಲಾವಿದರ ಕ್ರಿಕೆಟ್ ಪಂದ್ಯಾಟ: ಇಂದು ಸಂಜೆ ಜೆರ್ಸಿಲಾಂಚ್ ಹಾಗೂ ಟ್ರೋಫಿ ಲಾಂಚ್

Pinterest LinkedIn Tumblr

ಮಂಗಳೂರು,ಮಾ.16: ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ (ರಿ) ಮಂಗಳೂರು ಇದರ ಆಶ್ರಯದಲ್ಲಿ ನಡೆಯುವ 5ನೇ ವರ್ಷದ ಸೆಲೆಬ್ರಿಟಿ ಕ್ರಿಕೆಟ್ ಪಂದ್ಯಾಟ ಮಂಗಳೂರು ಮಹಾನಗರ ಪಾಲಿಕೆಯ ಸಹಭಾಗಿತ್ವದಲ್ಲಿ ಮಾ.17ರಿಂದ 21ರವರೆಗೆ ನಡೆಯಲಿದೆ ಎಂದು ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟದ ಅಧ್ಯಕ್ಷ ಮೊಹನ್ ಕೊಪ್ಪಲ ಕದ್ರಿ ತಿಳಿಸಿದರು.

ಕದ್ರಿ ಪಾರ್ಕ್ ಸಮೀಪದ ಲಯನ್ಸ್ ಆಶೋಕ್ ಸೇವಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ತುಳು ಚಿತ್ರರಂಗದ ಕಲಾವಿದರ ಕ್ರಿಕೆಟ್ ಪಂದ್ಯಾಟ ಮಾರ್ಚ್ 17ರಿಂದ ನಗರದ ಕೇಂದ್ರ ಮದಾನದಲ್ಲಿ ಆರಂಭಗೊಳ್ಳಲಿದೆ.

ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 7ರ ತನಕ ಮಂಗಳೂರು ನೆಹರೂ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟಗಳನ್ನು ನಡೆಯಲಿದೆ. ಮಾರ್ಚ್ 21ರಂದು ಫೈನಲ್ ಪಂದ್ಯ ಜರಗಲಿದೆ. ಮಾ.16ರಂದು ಕೇಂದ್ರ ಮದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನೊಂದಿಗೆ ಜೆರ್ಸಿಲಾಂಚ್ ಹಾಗೂ ಟ್ರೋಫಿ ಲಾಂಚ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.

ಮಾ16ರ ಕಾರ್ಯಕ್ರಮದಲ್ಲಿ ಸನ್ ಪ್ರೀಮಿಯರ್ ಆಯಿಲ್ ಎಂ.ಡಿ. ವೆಂಕಟ್, ನಂದಿನಿ ಮಂಗಳೂರು ಮಾರ್ಕೆಟಿಂಗ್ ವ್ಯವಸ್ಥಾಪಕ ಜಯದೇವಪ್ಪ, ಕಾಂಚನ ಮೋಟರ್ಸ್ ವ್ಯವಸ್ಥಾಪಕ ಪ್ರತೀಕ್, ಮಂಗಳೂರಿನ ಪೋಲಿಸ್ ಆಯುಕ್ತ ಶಶಿಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ್, ಕಾಂಗ್ರೆಸ್ ಯೂತ್ ಅಧ್ಯಕ್ಷ ಲುಕ್ಮಾನ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮೋಹನ್ ವಿವರ ನೀಡಿದರು.

ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರಿಗೆ ಇಎಸ್‌ಐ ಸೌಲಭ್ಯ ಒದಗಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಒಕ್ಕೂಟದಲ್ಲಿ ಸದಸ್ಯರಾಗಿರುವ 280 ಮಂದಿಗೆ ಈ ಸೌಲಭ್ಯ ದೊರೆಯಲಿದೆ ಎಂದು ಈ ವೇಳೆ ಮೋಹನ್ ಕೊಪ್ಪಳ ತಿಳಿಸಿದರು.

ಸ್ಥಾಪಕಾಧ್ಯಕ್ಷೆ ಅಶ್ವೀನ್ ಕೋಟ್ಯಾನ್, ಒಕ್ಕೂಟದ ಉಪಾಧ್ಯಕ್ಷರಾದ ಸುಹಾನ್ ಪ್ರಸಾದ್, ಸಚಿನ್ ಶೆಟ್ಟಿ, ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಕೋಶಾಧಿಕಾರಿ ವಿಶ್ವಾಸ್ ಗುರುಪುರ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಜ್ವಲ್ ಅತ್ತಾವರ, ಕ್ರೀಡಾ ಕಾರ್ಯದರ್ಶಿ ನಿಕಿಲ್ ಕೊಟ್ಟಾರಿ, ನಾಯಕ ನಟರಾದ ಪ್ರತೀಕ್ ಶೆಟ್ಟಿ, ಹಿತೇಶ್ ನಾಯಕ್, ವಿನಾಯಕ ಜೆಪ್ಪು, ಲಕ್ಷೀಶ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.