ಕರಾವಳಿ

ಒಂದೇ ಮನೆಯ ಐವರು ನಿಗೂಢ ನಾಪತ್ತೆ : ಆಭರಣ ಮತ್ತು 1.40 ಲಕ್ಷ ರೂ. ನಗದೂ ನಾಪತ್ತೆ- ದೂರು

Pinterest LinkedIn Tumblr

ಮಂಗಳೂರು, ಮಾರ್ಚ್14: ಒಂದೇ ಮನೆಯ ಐದು ಮಂದಿ ನಾಪತ್ತೆಯಾಗಿರುವ ಘಟನೆಯೊಂದು ಮೂಡುಬಿದಿರೆ ಠಾಣೆ ವ್ಯಾಪ್ತಿಯ ಕಾರಿಂಜೆಯ ಸುವರ್ಣನಗರದ ಮನೆಯೊಂದರಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ನಾಪತ್ತೆಯಾದವರನ್ನು ಮೂಡುಬಿದಿರೆ ತಾಲೂಕಿನ ಕಾರಿಂಜೆಯ ಸುವರ್ಣನಗರ ನಿವಾಸಿ ಜ್ಯೋತಿ ಮಣಿ (36), ದೆಬೋರ (11), ಜುಡಾ ಇಮಾನ್ವೇಲ್ (10), ಎಪ್ಸಿಬಾ (8) ಹಾಗೂ ಮನೋರಂಜಿತಂ (56)ಎಂದು ಹೇಳಲಾಗಿದೆ.

ಜಯರಾಜ್ ಶೇಖರ್ ಎಂಬವರ ಪತ್ನಿ ಜ್ಯೋತಿಮಣಿ (36) ಎಂಬವರು ಮಾ.10ರಂದು ತನ್ನ ಮಕ್ಕಳಾದ ದೆಬೋರ, ಜುಡಾ ಇಮಾನ್ವೇಲ್, ಎಪ್ಸಿಬಾ ಹಾಗೂ ಅತ್ತೆ ಮನೋರಂಜಿತಂ ಜತೆ ನಾಪತ್ತೆಯಾಗಿದ್ದಾರೆ. ಈ ಸಂದರ್ಭ ಇವರು ಗೊಡ್ರೇಜ್ ಲಾಕರಿ ನಲ್ಲಿ ಇರಿಸಿದ್ದ ಬಂಗಾರದ ಆಭರಣ ಮತ್ತು 1.40 ಲಕ್ಷ ರೂ. ನಗದನ್ನು ತೆಗೆದುಕೊಂಡು ನಾಪತ್ತೆಯಾಗಿದ್ದಾರೆ ಎಂದು ಜಯರಾಜ್ ಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.

ಈ ವೇಳೆ ಇವರು ಗೊಡ್ರೇಜ್ ಲಾಕರಿ ನಲ್ಲಿ ಇರಿಸಿದ್ದ ಬಂಗಾರದ ಆಭರಣ ಮತ್ತು 1.40 ಲಕ್ಷ ರೂ. ನಗದನ್ನು ತೆಗೆದುಕೊಂಡು ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ಈ ಮಹಿಳೆಯು ತನ್ನ ಬಂಗಾರದ ಒಡವೆಗಳನ್ನು ಫೈನಾನ್ಸ್‌ವೊಂದರಲ್ಲಿ ಅಡಮಾನ ಇಟ್ಟಿದ್ದರು. ಇದರಿಂದ ಬಂದ 1.80 ಲಕ್ಷ ರೂ.ನ್ನು ಆಕೆಯ ಸ್ನೇಹಿತನಿಗೆ ನೀಡಿದ್ದು, ಅಡಮಾನ ಇಟ್ಟ ಒಡವೆಗಳನ್ನು ಬಿಡಿಸಿಕೊಂಡು ಬರುವಂತೆ ಪತಿ ಸೂಚಿಸಿದ ಬೆನ್ನಲ್ಲೇ ಮನೆಯಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.