ಕರಾವಳಿ

ವಿದ್ಯಾರ್ಥಿನಿ ಪ್ರೇಕ್ಷ ನಿಗೂಢ ಸಾವಿನ ತನಿಖೆಗೆ ಒತ್ತಾಯಿಸಿ ಹಾಗು ಗಾಂಜಾ ಜಾಲಕ್ಕೆ ಕಡಿವಾಣ ಹಾಕಲು ಆಗ್ರಹಿಸಿ ದುರ್ಗಾವಾಹಿನಿ ಮನವಿ

Pinterest LinkedIn Tumblr

ಮಂಗಳೂರು : ಕುಂಪಲ ಆಶ್ರಯ ಕಾಲನಿ ನಿವಾಸಿ ಕುಮಾರಿ ಪ್ರೇಕ್ಷ ಅನುಮಾನಾಸ್ಪದ ಸಾವನ್ನು ಸಮಗ್ರ ತನಿಕೆಗೆ ಆಗ್ರಹಿಸಿ ಹಾಗು ಕುಂಪಲದಲ್ಲಿ ನಡೆಯುತ್ತಿರುವ ಅವ್ಯಾಹತ ಗಾಂಜಾ ಜಾಲಕ್ಕೆ ಕಡಿವಾಣಹಾಕಲು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ದುರ್ಗಾವಾಹಿನಿ ವತಿಯಿಂದ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಸೋಮೇಶ್ವರ ಗ್ರಾಮದ ಕುಂಪಲದ ಆಶ್ರಯಕಾಲನಿ ನಿವಾಸಿ ಪಿಯುಸಿ ವಿದ್ಯಾರ್ಥಿಯ ಸಾವು ಅನುಮಾನಾಸ್ಪದವಾಗಿದ್ದು ಇದು ಆತ್ಮಹತ್ಯೆಯಲ್ಲ ಕೊಲೆ ಎಂಬ ಸಂಶಯ ವ್ಯಕ್ತವಾಗುತ್ತಿದ್ದು, ಇದರ ಹಿಂದೆ 3 -4 ಯುವಕರ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದು ಈ ಘಟನೆಯ ಮೊದಲು ಇಬ್ಬರು ಯುವಕರು ಮನೆಗೆ ಬಂದುಹೋಗಿದ್ದು ಮತ್ತು ಹಿಂಬಾಗಿಲಿನ ಚಿಲಕ ಮುರಿದಿರುವುದು ಇದು ಕೊಲೆ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ನಿಗೂಢ ಸಾವಿನ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಯಿತು

ಇದೇ ವೇಳೆ ಪರಿಸರದಲ್ಲಿ ಅವ್ಯಾಹತ ಗಾಂಜಾ ಮಾರಾಟ ಜಾಲಕ್ಕೆ ಕಡಿವಾಣ ಹಾಕಲು ಮತ್ತು ಪಂಚಾಯತ್ ಸದಸ್ಯ ಮೋಹನ್ ಅವರ ಮನೆ ಮೇಲೆ ನಡೆದ ಧಾಳಿಗೆ ಸಂಬಂಧಪಟ್ಟ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ವಿಹಿಂಪ ದುರ್ಗಾವಾಹಿನಿ ಒತ್ತಾಯಿಸಿದೆ.

ಕುಂಪಲ ಆಶ್ರಯ ಕಾಲನಿಯಲ್ಲಿ ಅವ್ಯಾಹತವಾಗಿ ಗಾಂಜಾ ಮಾರಾಟ ನಡೆಯುತ್ತಿದ್ದು, ಸ್ಥಳೀಯರು ಹಲವು ಬಾರಿ ಠಾಣೆಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ವ್ಯವಸ್ಥಿತ ಗಾಂಜಾ ಮಾರಾಟ ಜಾಲವು ಈ ಪ್ರದೇಶದಲ್ಲಿ ಯಾರ ಭಯವು ಇಲ್ಲದೆ ಇಲ್ಲಿ ವ್ಯಾಪಾರ ಮಾಡುತ್ತಿರುವುದು ಮತ್ತು ಸ್ಥಳೀಯ ಯುವ ಸಮಾಜ ಈ ಗಾಂಜಾ ವ್ಯಸನಕ್ಕೆ ಬಲಿಯಾಗುತ್ತಿದೆ.

ಯಾರಾದರೂ ಮಾಹಿತಿ ದೂರು ನೀಡಿದರೆ ಅವರನ್ನು ಬೆದರಿಸುವ ಕಾರ್ಯ ನಡೆಯುತ್ತಿದ್ದು ಅಲ್ಲದೆ ಈ ಪ್ರದೇಶದಲ್ಲಿ ಯುವತಿಯರನ್ನು ವಿದ್ಯಾರ್ಥಿಗಳನ್ನು ಚುಡಾಯುಸುತ್ತಿದ್ದಾರೆ.

ಪಂಚಾಯತ್ ಸಧಸ್ಯರಾದ ಮೋಹನ್ ಎಂಬವರು ಗಾಂಜಾ ಮಾರಾಟದ ವಿರುದ್ಧ ದ್ವನಿ ಎತ್ತಿದಕ್ಕೆ ಮತ್ತು ಬಗ್ಗೆ ಮಾಹಿತಿ ನೀಡಿದಕ್ಕೆ ಅವರ ಮನೆಯ ಮೇಲೆ ಕಲ್ಲು ತೂರಾಟ ಮಾಡಿ ಭಯ ಪಡಿಸುವ ಪ್ರಯತ್ನ ಮಾಡಿದ್ದಾರೆ.
ಈ ಘಟನೆಯನ್ನು ಖಂಡಿಸುವ ಮೂಲಕ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ವ್ಯವಸ್ಥಿತ ಗಾಂಜಾ ಮಾರಾಟ ಜಾಲಕ್ಕೆ ಕಡಿವಾಣ ಹಾಕಿ ಗಾಂಜಾ ಮಾರಾಟ ಮಾಡುವರನ್ನು ಶೀಘ್ರವಾಗಿ ಬಂಧಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ವೇಳೆ ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ , ಜಿಲ್ಲಾಧ್ಯಕ್ಷರಾದ ಗೋಪಾಲ್ ಕುತ್ತಾರ್, ಜಿಲ್ಲಾ ದುರ್ಗಾವಾಹಿನಿ ಸಂಚಾಲಕಿ ಶ್ರೀಮತಿ ಸುಕನ್ಯಾ ರಾವ್ ಉಪಸ್ಥಿತರಿದ್ದರು.

Comments are closed.