ಕರಾವಳಿ

ಕ್ಷೇತ್ರಗಳ ಅಪವಿತ್ರಗೊಳಿಸುವ ಸಂಚು ಬಯಲಿಗೆಳೆಯಲು ಮಂಗಳೂರಿನಲ್ಲಿ ಹಿಂದು ಧಾರ್ಮಿಕ ಕ್ಷೇತ್ರ ಸಂರಕ್ಷಣಾ ಸಮಿತಿ ರಚನೆ

Pinterest LinkedIn Tumblr

ಮಂಗಳೂರು : ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೈವಸ್ಥಾನ ದೇವಸ್ಥಾನ ಭಜನಾಮಂದಿರಗಳನ್ನು ಅಪವಿತ್ರಗೊಳಿಸುವ ಸಂಚು ನಡೆಯುತ್ತಿದ್ದು ಹಿಂದುಗಳ ಧಾರ್ಮಿಕ ಭಾವನೆಗೆ ತೊಂದರೆಯನ್ನು ಕೊಡುವ ಕೆಲಸ ನಡೆಯುತ್ತಿದೆ.

ದೈವಸ್ಥಾನ, ದೇವಸ್ಥಾನ ಭಜನಾಮಂದಿರಗಳನ್ನು ಗುರಿಯಾಗಿಸಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿದು ಈ ದೃಷ್ಟಿಯಿಂದ ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆಗೋಸ್ಕರ ದೈವಸ್ಥಾನ ದೇವಸ್ಥಾನ ಭಜನಾಮಂದಿರಗಳ ಪ್ರಮುಖರ ಸಮಾಲೋಚನಾ ಸಭೆಯು ದಿನಾಂಕ 09 03 2021 ನೇ ಮಂಗಳವಾರ ಸಂಜೆ 3 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಬಳಿ ಇರುವ ವಿಶ್ವ ಹಿಂದು ಪರಿಷತ್ತಿನ ಕಾರ್ಯಾಲಯ ವಿಶ್ವಶ್ರೀ ಯಲ್ಲಿ ಸಭೆ ನಡೆಯಿತು.

ಸಭೆಯಲ್ಲಿ 100 ಕ್ಕೂ ಹೆಚ್ಚು ಧಾರ್ಮಿಕ ಕ್ಷೇತ್ರಗಳ ಪ್ರಮುಖರು ಪಾಲ್ಗೊಂಡರು, ಮುಂದಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರಗಳ ಸಂರಕ್ಷಣೆಗೋಸ್ಕರ ಹಿಂದು ಧಾರ್ಮಿಕ ಕ್ಷೇತ್ರಗಳ ಒಕ್ಕೂಟ ರಚನೆಯಾಯಿತು ಅದಕ್ಕೆ ಹಿಂದು ಧಾರ್ಮಿಕಕ್ಷೇತ್ರ ಸಂರಕ್ಷಣಾ ಸಮಿತಿ ಎಂದು ಹೆಸರಿಡಲಾಯಿತು. ಮತ್ತು ಬೇರೆ ಬೇರೆ ಕಾರ್ಯಕ್ರಮ ಗಳನ್ನು ನಿಶ್ಚಯ ಮಾಡಲಾಯಿತು.

ಗೌರವಾಧ್ಯಕ್ಷರಾಗಿ – ರವೀಂದ್ರನಾಥ ರೈ ಆಡಳಿತ ಮೊಕ್ತೇಸರರು ಸೋಮನಾಥೇಶ್ವರ ದೇವಸ್ಥಾನ
ಗೌರವ ಸಲಹೆಗಾರರಾಗಿ – ಭುಜಂಗ ಶೆಟ್ಟಿ ಜಪ್ಪುಗುಡ್ಡೆಗುತ್ತು ಅಧ್ಯಕ್ಷರಾಗಿ -ಸುಂದರ್ ಆಚಾರ್ಯ ಮಂಗಳೂರು ಕಾಳಿಕಾಂಬಾ ದೇವಸ್ಥಾನದ ಪ್ರಮುಖರು ಪ್ರಧಾನ ಕಾರ್ಯದರ್ಶಿಯಾಗಿ – ವಿಜಯ ಕಿರಣ್ ಕೊಟ್ಟಾರಿ ಉಪಾಧ್ಯಕ್ಷರಾಗಿ – ರವೀಂದ್ರ ಮಣಿಪಾಡಿ, ಸದಾಶಿವ ಶೆಟ್ಟಿ ಕಾವೂರು, ಬಾಬು ಮಾಡೂರು, ವಸಂತ್ ಕಿಣಿ ಉಳ್ಳಾಲ, ಜಯರಾಮ್ ಶೆಟ್ಟಿ ಇರಾ ಆಯ್ಕೆಗೊಂಡರು.

ವಿಶ್ವ ಹಿಂದು ಪರಿಷದ್ ಪ್ರಾಂತ ಅಧ್ಯಕ್ಷರಾದ ಪ್ರೊ ಎಂಬಿ ಪುರಾಣಿಕ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಮಹಾನಗರ ಸಂಘ ಚಾಲಕರಾದ ಸುನೀಲ್ ಆಚಾರ್, ವಿಶ್ವ ಹಿಂದು ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಕೃಷ್ಣ ಮೂರ್ತಿ, ವಿಶ್ವ ಹಿಂದು ಪರಿಷದ್ ಪ್ರಾಂತ ಮಠಮಂದಿರ ಸಂಪರ್ಕ ಪ್ರಮುಖ್ ಪ್ರೇಮಾನಂದ್ ಶೆಟ್ಟಿ , ವಿಶ್ವ ಹಿಂದು ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷರಾದ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಬಜರಂಗದಳ ವಿಭಾಗ ಸಂಯೋಜಕ್ ಭುಜಂಗ ಕುಲಾಲ್ ಉಪಸ್ಥಿತಿ ಇದ್ದರು.

Comments are closed.