
ಮುಂಬಯಿ : ಕುಲಾಲ ಸಂಘ ಮುಂಬಯಿಯ ಸದಸ್ಯೆ ಸಂದ್ಯಾ ಚಂದ್ರಕಾಂತ್ ಮೂಲ್ಯ ಇವರ ಸುಪುತ್ರ ಶ್ರೇಯಾಸ್ ಮೂಲ್ಯ ಕ್ಯಾನ್ಸರ್ ಕಾಯಿಲೆಗೆ ಒಳಗಾಗಿದ್ದು ಇದೀಗ ಪುನಾದ ಸಯ್ಯಾದ್ರಿ ಆಷ್ಪ್ರತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗಾಗಲೇ ಸುಮಾರು ಲಕ್ಷ ರೂಪಾಯಿ ಖರ್ಚಾಗಿದ್ದು ಇನ್ನೂ ಹೆಚ್ಚಿನ ಮೊತ್ತವು ಬೇಕಾಗಿದ್ದು ಈ ಬಗ್ಗೆ ಕುಟುಂಬವು ಕುಲಾಲ ಸಂಘ ಮುಂಬಯಿ ಯನ್ನು ಮನವಿ ಮಾಡಿದ್ದು ಅದಕ್ಕೆ ಸಂಘ ಸ್ಪಂದಿಸಿ ವಾಟ್ಸಾಪ್ ಮೂಲಕ ಸದಸ್ಯರು ಎಲ್ಲರನ್ನು ಸಂಪರ್ಕ 115000 ರೂಪಾಯಿ ದೇಣಿಗೆಯನ್ನೂ ಸಂಗ್ರಹಿಸಿ ಕೊಂಡಿದೆ.
ಸಂಗ್ರಹದ ದೇಣಿಗೆಯನ್ನು ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೇಯಾಸ್ ಮೂಲ್ಯ ಆಸ್ಪತ್ರೆಗೆ ಭೇಟಿ ನೀಡಿ ಆತನ ತಂದೆ ಚಂದ್ರಕಾಂತ್ ಅಮೂಲ್ಯರಿಗೆ ಸಂಗ್ರಹವಾದ ಹಣವನ್ನು ಕುಲಾಲ ಸಂಘದ ಅಧ್ಯಕ್ಷರಾದ ದೇವದಾಸ್ ಎಲ್ ಕುಲಾಲ್, ಮಾಜಿ ಅಧ್ಯಕ್ಷ ಗಿರೀಶ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್, ಕೋಶಾಧಿಕಾರಿ ಜಯ ಅಂಚನ್. ಉದ್ಯಮಿ, ಸುನಿಲ್ ಸಾಲ್ಯಾನ್, ಬಿನೀತ್ ಜಿ ಸಾಲ್ಯಾನ್ ಮತ್ತು ಪುಣೆಯ ಅಪ್ಪು ಮೂಲ್ಯ, ಮತ್ತಿತರರು ಸೇರಿ ಹಸ್ತಾಂತರಿಸಿದರು.
ಶ್ರೇಯಾಸ್ ಮೂಲ್ಯ ನಿಗೆ ವೈದ್ಯಕೀಯ ನೆರವುು ನೀಡುವ ದಾನಿಗಳು ಕುಲಾಲ ಸಂಘದ ಈ ಕೆಳಗೆ ನೀಡಿದ ಬ್ಯಾಂಕ್ ಅಕೌಂಟಿಗೆ ನಿಮಗೆ ಸಾದ್ಯವಾದ ಮೊತ್ತವನ್ನು ನೀಡಿ ಶ್ರೇಯಾಸ್ ಮೂಲ್ಯ ರ ರಕ್ಷಣೆಗೆ ಮುಂದಾಗಬೇಕಾಗಿ ಕುಲಾಲ ಸಂಘ ವಿನಂತಿಸಿಕೊಂಡಿದೆ.
Donate with open heart.
Sangha’s Bank details are given below-
Kulala Sangha Mumbai
A/c no: 001710100032017
IFSC:BKID0000017
Bank of India
DN Road Fort Branch,
Comments are closed.