ಕುಂದಾಪುರ: ಕಳೆದ ಒಂದು ದಶಕದಿಂದ ಕುಂಟುತ್ತಾ ಸಾಗುತ್ತಿರುವ ಪ್ಲೇ ಓವರ್ ಕಾಮಗಾರಿ ಮುಗಿದು ಸಂಚಾರ ಆರಂಭವಾಗಲಿದೆ ಎಂಬ ಭರವಸೆ ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸಿಕ್ಕಿದೆ. ಮಾ.31ರೊಳಗೆ ಕಾಮಗಾರಿ ಮುಗಿಸಿ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಡದಿದ್ದರೆ ಕಾನೂನು ಕ್ರಮದ ಎಚ್ಚರಿಕೆ ಕೂಡಾ ನೀಡಲಾಗಿದೆ.


ಆಡಳಿತ ಪಕ್ಷದ ಸದಸ್ಯ ವಿ.ಪ್ರಭಾಕರ ಅವರು, ಕುಂದೇಶ್ವರ ವಾರ್ಡ್ನಲ್ಲಿ ಜನರು ಉಪ್ಪುನೀರು ಕುಡಿಯುತ್ತಿದ್ದಾರೆ. ಎರಡು ತಿಂಗಳಿಂದ ನೀರಿನ ಸಂಪರ್ಕ ನೀಡುವ ಕುರಿತು ಪೊಳ್ಳು ಭರವಸೆ ನೀಡುತ್ತಿದ್ದೀರಿ. ಕುಡಿಯುವ ನೀರಿನ ವಿಷಯದಲ್ಲಿ ಸುಳ್ಳು ಹೇಳುವುದು ತರವಲ್ಲ ಎಂದು ಜಲಸಿರಿ ಯೋಜನೆ ಇಂಜಿನಿಯರ್ ಹಾಗೂ ಸಹಾಯಕರ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪೂರಕವಾಗಿ ಮಾತನಾಡಿದ ಮೋಹನದಾಸ್ ಶೆಣೈ, ನೀರು ಪೂರೈಕೆ ಟ್ಯಾಂಕ್ ಈಗಾಗಲೇ ಸೋರುತ್ತಿದ್ದು, ಮುಂದೆ ಕತೆಯೆನು? ಕಾಮಗಾರಿ ಕೂಡಾ ಆಮೆಗತಿಯಲ್ಲಿದ್ದು, ನಿಮ್ಮಲ್ಲಿ ಕೆಲಸಕ್ಕೆ ಲೇಬರ್ ಇಲ್ಲಾ ಎಂದು ಹೇಳಿದರು. ಪ್ರತಿಪಕ್ಷದ ಸದಸ್ಯರಾದ ಆಸಿಫ್ ಕೋಡಿ, ಕಮಲ, ಹಾಗೂ ಲಕ್ಷ್ಮೀ ಕೋಡಿ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಜನರ ಸಮಸ್ಯೆಗೆ ಸ್ಪಂದಿಸುವಂತೆ ಆಗ್ರಹಿಸಿದರು.
ರಸ್ತೆ ಕಟ್ಟಿಂಗ್, ಇಂಟರ್ಲಾಕ್ ಅಳವಡಿಕೆ, ಬೀದಿದೀಪ, ಯುಜಿಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು. ಸಭೆಗೂ ಮುನ್ನಾ ಸ್ಥಾಯಿ ಸಮಿತಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಶೇಖರ ಪೂಜಾರಿ ಅಧ್ಯಕ್ಷರಾಗಿ ಆಯ್ಕೆ ಆದರು. ಗಿರೀಶ್ ದೇವಾಡಿಗ, ಸಂತೋಷ್ ಶೆಟ್ಟಿ, ದೇವಕಿ ಸಣ್ಣಯ್ಯ ಮಾತನಾಡಿದರು.
ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.
ಪ್ರತಿಪಕ್ಷ ಸಭಾ ತ್ಯಾಗ..
ಕುಂದಾಪುರ ಪುರಸಭೆ ತೆರಿಗೆ ಏರಿಕೆ ವಿರೋಧಸಿ ಪ್ರತಿಪಕ್ಷದ ನಾಯಕರು ಸಭಾತ್ಯಾಗ ಮಾಡುವ ಮೂಲಕ ತಮ್ಮ ವಿರೋಧ ವ್ಯಕ್ತ ಪಡಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ಜನ ಸಂಕಷ್ಟದಲ್ಲಿರುವಾಗ ಪುರಸಭೆ ತೆರಿಗೆ ಏರಿಕೆ ಬರ ಹಾಕುತ್ತಿದ್ದು, ಜನವಿರೋಧಿಯಾಗಿದೆ. ರಾಜ್ಯ ಸರ್ಕಾರ ತೆರಿಗೆ ಏರಿಸುವ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತದೆ. ಯಾವುದೇ ಕಾರಣಕ್ಕೂ ತೆರಿಗೆ ಏರಿಕೆ ಕೂಡದರು. ಪುರಸಭೆ ತೆರಿಗೆ ಏರಿಸಿದರೆ ಜನರೊಟ್ಟಿಗೆ ಸೇರಿ ಪ್ರತಿಭಟನೆ ನಡೆಸಲಾಗುತ್ತದೆ. ಪುರಸಭೆ ಆಡಳಿತದಲ್ಲಿ ಅಸಹಾಕರ ತೋರುವ ಮೂಲಕ ತೆರಿಗೆ ಏರಿಕೆ ವಿರುದ್ಧದ ಹೋರಾಟ ನಡೆಸಲಾಗುತ್ತದೆ ಎಂದು ಪ್ರತಿಕ್ಷದ ಸದಸ್ಯರು ಎಚ್ಚರಿಸಿದ್ದಾರೆ.
ಶಾಲೆಯಲ್ಲಿ ಶೌಚಾಲಯ ಸ್ವಚ್ಚತೆಗೆ ಒತ್ತು…..
ಕುಂದಾಪುರ ಪುರಸಭೆಯಲ್ಲಿ ಒಟ್ಟು 24 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿದ್ದು, ಖಾಸಗಿ ಶಾಲೆ ಹೊರತು ಪಡಿಸಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶೌಚಾಲಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೇ ಸ್ವಚ್ಛ ಮಾಡಿಕೊಳ್ಳುತ್ತಾರೆ. ಎಲ್ಲಾ ಶಾಲೆಗಳಲ್ಲೂ ಶೌಚಾಲಯ, ಕುಡಿಯುವ ನೀರು ಸೌಲಭ್ಯವಿದ್ದು, ಕೋವಿಡ್ ನಿಯಮ ಪಾಲಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದು, ಪ್ರತಿಪಕ್ಷದ ನಾಯಕ ಚಂದ್ರಶೇಖರ ಖಾರ್ವಿ ಶಾಲೆಗಳ ಬಗ್ಗೆ ಮಾಹಿತಿ ಕೇಳಿದ್ದರು. ಶಿಕ್ಷಣ ಇಲಾಖೆ ಅಧಿಕಾರಿಗಳ ಉತ್ತರದಿಂದ ಸಮಾಧಾನವಾಗದ ಅವರು ಸರ್ಕಾರಿ ಶಾಲೆಯಲ್ಲಿ ಮಕ್ಕಳು ವಿದ್ಯಾಭ್ಯಾಸಕ್ಕೆ ಹೋಗುತ್ತಾರಾ? ಶೌಚಾಲಯ ಕ್ಲೀನ್ ಮಾಡಲು ಹೋಗುತ್ತಾರಾ? ಇದು ಸರಿಯಲ್ಲಿ. ಸರ್ಕಾರವೇ ಶಾಲೆಗಳ ಶೌಚಾಲಯ ಸ್ವಚ್ಛಮಾಡಲು ವ್ಯವಸ್ಥೆ ಮಾಡುವಂತೆ ನಿರ್ಣಯ ಮಂಡಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿಕೊಡುವಂತೆ ಸಲಹೆ ಮಾಡಿದರು.
ಕುಂದಾಪುರ ಪುರಸಭೆಯಲ್ಲಿ ಆರಂಭಿಸಿದ 23 ಕೋಟಿ ವೆಚ್ಚದ ಜಲಸಿರಿ ಯೋಜನೆ ಹಾಗೂ ಶಾಸ್ತ್ರಿ ವೃತ್ತದ ಪ್ಲೇ ಓವರ್ ಕಾಮಗಾರಿ ಮಾ.31ಕ್ಕೆ ಪೂರ್ಣವಾಗಲಿದ್ದು, ಪ್ಲೇ ಓವರ್ ಕಾಮಗಾರಿ ನಂತರ ಸರ್ವೀಸ್,ರಸ್ತೆ ಚರಂಡಿ ಹಾಗೂ ಮಳೆನೀರು ಹರಿಯುವ ವ್ಯವಸ್ಥೆ ಸರಿಮಾಡುಲಾಗುತ್ತದೆ ಎಂಬ ಭರವಸೆ ಗುತ್ತಿಗೆದಾರರು ಕೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ಕಾಮಗಾರಿ ಮುಗಿಸದಿದ್ದರೆ ಕ್ರಿಮಿನಲ್ ಕೇಸ್ ಹಾಕುವ ಜೊತೆ ಕ್ರಮ ತೆಗೆದುಕೊಳ್ಳಲು ಮೇಲಧಿಕಾರಿಗಳಿಗೆ ದೂರು ಸಲ್ಲಿಸಲಾಗುತ್ತದೆ.
– ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ ಕುಂದಾಪುರ.
Comments are closed.