ಕರಾವಳಿ

ತ್ರಾಸಿ ಗ್ರಾಮಪಂಚಾಯತಿಗೆ ಕನ್ನ ಹಾಕಿದವರನ್ನು ಬಂಧಿಸಿದ ಗಂಗೊಳ್ಳಿ ಪೊಲೀಸರು..!

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಮರವಂತೆ ಹಾಗೂ ಗಂಗೊಳ್ಳಿ ಸಮೀಪವಿರುವ ತ್ರಾಸಿ ಗ್ರಾಮಪಂಚಾಯತಿ ಕಚೇರಿಗೆ ರಾತ್ರೋರಾತ್ರಿ ನುಗ್ಗಿ ಹಣ ಕಳವು‌ ಮಾಡಿದ್ದ ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಒಂದೇ ದಿನದ ಅಂತರದಲ್ಲಿ ಪತ್ತೆ ಹಚ್ಚಿ‌ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಾಳ ಅಲಿಯಾಸ್ ಸೇತು‌ಕುಮಾರ್ ಹಾಗೂ ಕಿರಣ್ ಎನ್ನಲಾಗಿದೆ. ಮುರ್ಡೇಶ್ವರ ರೈಲು ನಿಲ್ದಾಣ ಸಮೀಪ ಇಂದು ಬಂಧಿಸಿದ ಪೊಲೀಸರ ತಂಡ 30,100 ರೂ ಹಣವನ್ನು ಆರೋಪಿಗಳಿಂದ ವಶಕ್ಕೆ ಪಡೆದಿದೆ.ಬಂಧಿತ ಆರೋಪಿಗಳನ್ನು ಕಾಳ ಅಲಿಯಾಸ್ ಸೇತು‌ಕುಮಾರ್ ಹಾಗೂ ಕಿರಣ್ ಎನ್ನಲಾಗಿದೆ. ಮುರ್ಡೇಶ್ವರ ರೈಲು ನಿಲ್ದಾಣ ಸಮೀಪ ಇಂದು ಬಂಧಿಸಿದ ಪೊಲೀಸರ ತಂಡ 30,100 ರೂ ಹಣವನ್ನು ಆರೋಪಿಗಳಿಂದ ವಶಕ್ಕೆ ಪಡೆದಿದೆ.

ಉಡುಪಿ ಜಿಲ್ಲಾ ಪೊಲೀಸ್‌‌ ಅಧೀಕ್ಷಕ ವಿಷ್ಣುವರ್ಧನ್‌ ಎನ್‌ ಅವರ ನಿರ್ದೇಶನದಲ್ಲಿಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ ಹಾಗೂ ಕುಂದಾಪುರ ಉಪವಿಭಾಗ ಪೊಲೀಸ್‌ ಅಧೀಕ್ಷಕ ಶ್ರೀಕಾಂತ. ಕೆ., ಬೈಂದೂರು ವೃತ್ತ ನೀರೀಕ್ಷಕ ಸಂತೋಷ್‌ ಕಾಯ್ಕಿಣಿ ಇವರ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಭೀಮಾಶಂಕರ ಸಿನ್ನೂರ ಸಂಗಣ್ಣ ಇವರ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳಾದ ಮೋಹನ ಪೂಜಾರಿ, ಯೋಗೀಶ್‌, ಸೂರ ನಾಯ್ಕ್‌‌, ಚಂದ್ರಶೇಖರ ಅರೆಶಿರೂರು, ಶ್ರೀಧರ ಸೆಳ್ಳೆಕುಳ್ಳಿ, ಪ್ರಿನ್ಸ್‌‌‌‌, ಜೀಪ್‌ ಚಾಲಕ ದಿನೇಶ್‌‌, ಆರ್‌.ಡಿ. ಸೆಲ್‌‌‌‌ ಶಿವಾನಂದ  ಕಾರ್ಯಾಚರಣೆಯಲ್ಲಿದ್ದರು.

ಘಟನೆ ಹಿನ್ನೆಲೆ…
ತ್ರಾಸಿ ಗ್ರಾಮ ಪಂಚಾಯತ್‌‌ನಲ್ಲಿ ಪ್ರತಿದಿನ ತೆರಿಗೆಯಿಂದ ಸಂಗ್ರಹವಾಗುವ ಹಣವನ್ನು ಸಂಜೆ ಕ್ರೋಡೀಕರಿಸಿ ಮರು ದಿವಸ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಿದ್ದು ಅದರಂತೆ ದಿನಾಂಕ ಮಾ.2 ರಂದು ಸಂಗ್ರಹಿಸಿದ ವಿವಿಧ ರೀತಿಯ ತೆರಿಗೆ 35,833/- ರೂ. ನಗದನ್ನು ತೆರಿಗೆ ಸಂಗ್ರಹಿಸಿದ ಸಿಬ್ಬಂದಿಯವರು ಗ್ರಾ.ಪಂ ಕಛೇರಿಯ ಅಲ್ಮೇರಾ ಮತ್ತು ಕಪಾಟಿನಲ್ಲಿ ಇರಿಸಿ ಗ್ರಾಮ ಪಂಚಾಯಗಿದ್ದು ಮಾ.3ರಂದು ಬೆಳಿಗ್ಗೆ ಕಛೇರಿಯ ಸಿಬ್ಬಂದಿ ಬಾಗಿಲು ತೆರೆಯಲು ಬಂದಾಗ ಕಚೇರಿಯ ಒಳಗಡೆ ಕಡತಗಳು ಹರಡಿ ಬಿದ್ದಿರುವುದನ್ನು ನೋಡಿದ ಸಿಬ್ಬಂದಿ ಪಿಡಿಒ ಅವರಿಗೆ ಫೋನ್‌ ಕರೆ ಮಾಡಿದ್ದು ಅವರು ಹಾಗೂ ಸಿಬ್ಬಂದಿಗಳು ಬಂದು ಪರಿಶೀಲಿಸಿದಾಗ ಅಧ್ಯಕ್ಷರ ಕೊಠಡಿಯ ಮೀಟಿಂಗ್‌ ಹಾಲ್‌ನಲ್ಲಿರುವ ಕಿಟಕಿಯ ಕಬ್ಬಿಣದ ಸರಳನ್ನು ಬಗ್ಗಿಸಿ ಯಾರೋ ಕಳ್ಳರು ಒಳ ಪ್ರವೇಶಿಸಿ ಕಛೇರಿಯ ಕಿಟಕಿ, ಅಲ್ಮೇರಾ, ಕಪಾಟು, ಡ್ರಾವರ್‌ಗಳನ್ನು ಜಖಂಗೊಳಿಸಿ ಕಚೇರಿಯ ಅಲ್ಮೇರಾ ಹಾಗೂ ಕಪಾಟಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ವಿವಿಧ ರೀತಿಯ ತೆರಿಗೆ 35,833 ರೂಪಾಯಿ ನಗದನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ತ್ರಾಸಿ ಗ್ರಾ.ಪಂ‌ ಪಿಡಿಒ ಶೋಭಾ ಎಸ್‌ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Comments are closed.