ಕರಾವಳಿ

ಜಿಲ್ಲೆಯ ಮತ್ತು ರಾಜ್ಯದ ದೇವಸ್ಥಾನಗಳಿಗೆ ಉಚಿತವಾಗಿ ಬಸವ ಬೇಕೆ? ಕೂಡಲೇ ಇವರನ್ನು ಸಂಪರ್ಕಿಸಿ..

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು/ಉಡುಪಿ: ಕಾರ್ಕಳದ ಸಂಜೀವಿನಿ ಫಾರ್ಮ್ಸ್ ಆಂಡ್ ಡೈರಿಯಲ್ಲಿ ಇರುವ ಗೋಧಾಮ ದಲ್ಲಿ ಭಾರತೀಯ ದೇಶೀಯ ತಳಿಗಳನ್ನು ಸಾಕಿ ಅಭಿವೃದ್ಧಿ ಪಡಿಸಲಾಗುತ್ತಿದೆ.ಜೊತೆಗೆ ಸಾರ್ವಜನಿಕರಿಗೆ ಪ್ರಸಕ್ತ ಸನ್ನಿವೇಶದಲ್ಲಿ ಉಪಯುಕ್ತವಾಗುವ ಸಾವಯವ ರೀತಿಯ ಆಯುರ್ವೇದ ಅಂಶಗಳನ್ನು ಒಳಗೊಂಡ ಪರಿಶುದ್ಧ ಹಾಲನ್ನು ಮನೆ ಮನೆಗೆ ತಲುಪಿಸಲಾಗುತ್ತದೆ.

ಮೂಡಬಿದ್ರೆಯ ಎಸ್ ಕೆ ಎಫ್ ಸಮೂಹ ಸಂಸ್ಥೆಯ ಮಾಲಕರಾದ ರಾಮಕೃಷ್ಣ ಆಚಾರ್ ದಂಪತಿಗಳ ಕನಸಿನ ಕೂಸಾಗಿರುವ ಸಂಜೀವಿನಿ ಫಾರ್ಮ್ಸ್ ಡೈರಿಯಲ್ಲಿ ಭಾರತೀಯ ದೇಶೀಯ ತಳಿಗಳಾದ ಗುಜರಾತ ನ ಕಥಿಯವಾಡ್, ಗಿರ್ ಕಾಡುಗಳಲ್ಲಿ ಇರುವ ಗಿರ್ ದನಗಳು,ಪಂಜಾಬ್ ಮೂಲದ ಸಾಹಿವಾಲ,ರಾಜಸ್ಥಾನದ ರಾಥಿ, ಥಾಪಾರ್ಕರ್, ಮೂಲ ಪಾಕಿಸ್ತಾನದ ಸಿಂಧ್ ಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಕಂಡು ಬರುವ ಕಾಂಕ್ರೆಜ,ಜಾತಿಯ ದನಗಳನ್ನು ಸಾಕುತ್ತಿದ್ದಾರೆ.

ಈ ಮದ್ಯೆ ರಾಮಕೃಷ್ಣ ಆಚಾರವರು ತಮ್ಮ ಸಂಜೀವಿನಿ ಫಾರ್ಮ್ಸ್ ನಲ್ಲಿ ಸಾಕುತ್ತಿರುವ ವಿವಿಧ ಜಾತಿಯ ಭಾರತೀಯ ತಳಿಯ ಗಂಡು ದನಗಳನ್ನು (ಬಸವ) ದೇವಸ್ಥಾನಕ್ಕೆ ನೀಡುವ ಬಗ್ಗೆ ಸಂಕಲ್ಪಿಸಿ ಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ರಾಮಕೃಷ್ಣ ಆಚಾರ್ ರವರು ಜಿಲ್ಲೆಯ ಮತ್ತು ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಗಂಡು ದನಗಳನ್ನು,( ಬಸವ) ದಿನ ನಿತ್ಯದ ದೇವರ ಸೇವೆಯ ಕಾರ್ಯಕ್ರಮಗಳಲ್ಲಿ ಉಪಯೋಗಿಸುತ್ತಾರೆ.

ಜಿಲ್ಲೆಯ ಮತ್ತು ರಾಜ್ಯದ ಯಾವುದೇ ದೇವಸ್ಥಾನಗಳಿಗೆ ಗಂಡು ದನದ (ಬಸವ ) ಅವಶ್ಯಕತೆ ಇದ್ದರೆ ಅಂತಹ ದೇವಸ್ಥಾನದವರು ತಮ್ಮನ್ನು ಕಾರ್ಕಳದ ಸಂಜೀವಿನಿ ಫಾರ್ಮ್ಸ್ ನಲ್ಲಿರುವ *ಗೋಧಾಮ* ವನ್ನೂ ಸಂಪರ್ಕಿಸಿ ಗಂಡು ದನಗಳನ್ನು (ಬಸವ)ಉಚಿತವಾಗಿ ಪಡೆಯಬಹುದು ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.