ಅಂತರಾಷ್ಟ್ರೀಯ

ಮೆರಿಟೈಮ್ ವಲಯದಲ್ಲಿ ಬಂಡವಾಳ ಹೂಡಿಕೆ ಸಲುವಾಗಿ ರೂ. 6 ಲಕ್ಷ ಕೋಟಿ ಮೊತ್ತದ 400 ಯೋಜನೆ: ವರ್ಚುವಲ್ ಮೆರಿಟೈಮ್ ಇಂಡಿಯಾ ಶೃಂಗಸಭೆ ಉದ್ಘಾಟಿಸಿ ಪ್ರಧಾನಿ ಮೋದಿ

Pinterest LinkedIn Tumblr

ಮಂಗಳೂರು, ಮಾರ್ಚ್ 04 : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬುಧವಾರ ಉದ್ಘಾಟಿಸಿದ ವರ್ಚುವಲ್ ಮೆರಿಟೈಮ್ ಇಂಡಿಯಾ ಶೃಂಗಸಭೆಯಲ್ಲಿ ಕರ್ನಾಟಕ ರಾಜ್ಯವೂ ಭಾಗವಹಿಸಿತ್ತು.

ಶೃಂಗಸಭೆಯೂ ಮಾರ್ಚ್ 2 ರಿಂದ 4 ರವರೆಗೆ ಜರುಗಲಿದ್ದು, ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ 26 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಉದ್ಘಾಟನಾ ಭಾಷಣದಲ್ಲಿ ಪ್ರಧಾನ ಮಂತ್ರಿಗಳು ಮಾತನಾಡಿ, ದೇಶದ ಬಂದರುಗಳ ಕಾರ್ಯಕ್ಷಮತೆಯನ್ನು ವರ್ಧಿಸುವ ಮತ್ತು ಬಂದರುಗಳಿಗೆ ಸುಗಮ ಹಾಗೂ ಸುರಕ್ಷಿತ ಸಂಪರ್ಕ ಕಲ್ಪಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮೆರಿಟೈಮ್ ವಲಯದಲ್ಲಿ ಬಂಡವಾಳ ಹೂಡಿಕೆ ಸಲುವಾಗಿ ರೂ. 6 ಲಕ್ಷ ಕೋಟಿ ಮೊತ್ತದ 400 ಯೋಜನೆಗಳನ್ನು ಗುರುತಿಸಲಾಗಿದ್ದು, 2035ನೇ ಸಾಲಿನೊಳಗೆ ಅನುಷ್ಠಾನಗೊಳಿಸಲಾಗುವುದೆಂದು ತಿಳಿಸಿದರು.

ಉದ್ಘಾಟನಾ ಸಮಾರಂಭದ ಬಳಿಕ ಮಧ್ಯಾಹ್ನ 12.30 ಗಂಟೆಯಿಂದ 02.00 ಗಂಟೆಯವರಿಗೆ ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಕುರಿತು ವಿಶೇಷ ಅಧಿವೇಶನ ಜರುಗಿತು.

ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ರವರು ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿ, ಕರ್ನಾಟಕ ಮೆರಿಟೈಮ್ ವಲಯದಲ್ಲಿ ಇರುವ ವಿಫುಲ ಅವಕಾಶಗಳನ್ನು ಪ್ರಸ್ತಾಪಿಸುತ್ತಾ ಬಂಡವಾಳ ಹೂಡುವಂತೆ ಕೋರಿದರು.

ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಮೀನುಗಾರಿಕೆ ಸಚಿವ ಎಸ್. ಅಂಗಾರ ಮಾತನಾಡಿ, ಕರ್ನಾಟಕ ರಾಜ್ಯದ ಮೆರಿಟೈಮ್ ವಲಯದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ರೂ. 4,500 ಕೋಟಿ ಮೊತ್ತದ ಯೋಜನೆಗಳಿಂದ 10,000-15,000 ಉದ್ಯೋಗಾವಕಾಶಗಳನ್ನು ಸೃಷ್ಠಿಸಲಾಗುವುದೆಂದು ತಿಳಿಸಿದರು.

ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಮಾತನಾಡಿ, ರಾಜ್ಯದ ಮೆರಿಟೈಮ್ ವಲಯದಲ್ಲಿ ಕೈಗೊಳ್ಳಲಾಗುತ್ತಿರುವ ಯೋಜನೆಗಳ ಮಾಹಿತಿಯನ್ನು ನೀಡುತ್ತಿದ್ದು, ಪ್ರವಾಸೋದ್ಯಮ, ಮೀನುಗಾರಿಕೆ ಹಾಗೂ ಮೆರಿಟೈಮ್ ವ್ಯಾಪಾರ ಕ್ಷೇತ್ರದಲ್ಲಿ ಅವಕಾಶಗಳಿರುವುದಾಗಿ ತಿಳಿಸಿದರು.

ಐಡೆಕ್ ಸಂಸ್ಥೆಯ ವ್ಯವಹಾರ ಅಭಿವೃದ್ಧಿ ಮುಖ್ಯಸ್ಥ ಟಿ. ಪೌಲ್ ಕೋಶಿ, ರಾಜ್ಯದ ವಿಶೇಷ ಅಧಿವೇಶನದ ಕಾರ್ಯಕಲಾಪಗಳನ್ನು ನಿರ್ವಹಿಸಿದರು.

ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ನಿರ್ದೇಶಕ ಕ್ಯಾಪ್ಟನ್ ಸಿ. ಸ್ವಾಮಿ ಮಾತನಾಡಿ, ಕೇಂದ್ರದ ಸಾಗರಮಾಲಾ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿರುವ ಕಾರವಾರ ಹಾಗೂ ಹಳೇ ಮಂಗಳೂರು ಬಂದರು ಮತ್ತು ಬೇಲಿಕೇರಿ ಹಾಗು ಪಾವಿನಕುರ್ವೆ ಪ್ರದೇಶದಲ್ಲಿ ನೂತನವಾಗಿ ಬಂದರು ನಿರ್ಮಿಸಲಾಗು ತ್ತಿರುವ ಹಿನ್ನೆಲೆಯಲ್ಲಿ ಬಂಡವಾಳ ಹೂಡಿಕೆದಾರರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿರುವುದಾಗಿ ತಿಳಿಸಿದರು. ಈ ಯೋಜನೆಗಳಿಂದ ಸಾಗಣಿಕೆ ವೆಚ್ಚದಲ್ಲಿ ವಾರ್ಷಿಕ ರೂ. 660 ಕೋಟಿ ಉಳಿತಾಯವಾಗುವುದರ ಜೊತೆಗೆ ರಾಜ್ಯದ ಆರ್ಥಿಕ ವಲಯಕ್ಕೆ ರೂ. 15 ಸಾವಿರ ಕೋಟಿ ಸೇರ್ಪಡೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಬಳಿಕ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರತಿನಿಧಿಯವರು ಬಂದರುಗಳ ಮೂಲಕ ಕೈಗಾರಿಕೆಗಳ ಅಭಿವೃದ್ಧಿ ಕುರಿತು ಪ್ರಸಾಪಿಸುತ್ತಾ ರಾಜ್ಯವು ಹಲವಾರು ವಲಯಗಳಲ್ಲಿ ಮುಂಚೂಣಿಯಲ್ಲಿದ್ದು, ಆಗಸ್ಟ್ 2020ರಲ್ಲಿ ಬಿಡುಗಡೆಯಾದ ನೂತನ ಕೈಗಾರಿಕಾ ನೀತಿಯಲ್ಲಿ ಸಹಾ ವಿಶೇಷ ಪ್ರೋತ್ಸಾಹಕ ಪ್ರಾವಧಾನಗಳನ್ನು ಕಲ್ಪಿಸಿರುವುದಾಗಿ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಮಾತನಾಡಿ, ಮೆರಿಟೈಮ್ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗಾಗಿ 770 ಕ್ಕೂ ಅಧಿಕ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು, ರೂ. 5 ಸಾವಿರ ಕೋಟಿ ಮೊತ್ತ ಹೂಡಿಕೆಯನ್ನು ನಿರೀಕ್ಷಿಸುತ್ತಾ 10 ಲಕ್ಷ ಉದ್ಯೋಗ ಅವಕಾಶಗಳಿರುವುದಾಗಿ ತಿಳಿಸಿದರು.

ರಾಜ್ಯದ ಮೆರಿಟೈಮ್ ವಲಯದಲ್ಲಿ ಬಂಡವಾಳ ಹೂಡಿಕೆಗಾಗಿ ಇರುವ ಅವಕಾಶಗಳ ಕುರಿತು ವಿಶೇಷ ವಿಡಿಯೋ ಪ್ರದರ್ಶಿಸಲಾಯಿತು. ಈ ಕುರಿತು ವಿವರವಾದ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಜೆ.ಎಸ್.ಡಬ್ಲ್ಯೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ ಮಹೇಶ್ವರಿ ಮಾತನಾಡಿ, ರಾಜ್ಯದಲ್ಲಿ ನೂತನ ಬಂದರು ನಿರ್ಮಾಣದ ಪ್ರಸ್ತಾವನೆಗೆ ಇಲಾಖೆಯ ಸಕಾರಾತ್ಮಕ ಸ್ಪಂದನೆಯನ್ನು ಸ್ಮರಿಸಿದರು. ಹೊನ್ನಾವರ ಪೆÇೀರ್ಟ್ ಪ್ರೈ.ಲಿ. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾಪ್ಟನ್ ಸೂರ್ಯಪ್ರಕಾಶ ಗುಟ್ಟಾ, ಕಾರ್ಯನಿರ್ವಾಹಕ ನಿರ್ದೇಶಕ ಮಸಿಹ ಖಾನ್ ರವರು ನೂತನ ಬಂದರು ನಿರ್ಮಾಣದಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರೋತ್ಸಾಹವನ್ನು ಸಭೆಗೆ ತಿಳಿಸಿದರು.

ನಂತರ, “ಬಂದರುಗಳ ಮೂಲಕ ಸುಸ್ಥಿರ ಅಭಿವೃದ್ಧಿ” ವಿಷಯದ ಕುರಿತು ಮೆರಿಟೈಮ್ ವಲಯದ ಪರಿಣಿತರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಪಿಡಬ್ಲ್ಯೂಸಿ ಸಂಸ್ಥೆಯ ಧ್ರುವ ಗಡ್ ನಿರ್ವಹಿಸಿ ಸುಸ್ಥಿರ ಅಭಿವೃದ್ಧಿಯ ಅವಶ್ಯಕತೆ ಕುರಿತು ಒತ್ತಾಯಿಸಿದರು.

ನವಮಂಗಳೂರು ಬಂದರು ಇದರ ಚೇರ್‍ಮೆನ್ ಡಾ. ಎ.ವಿ. ರಮಣ ಪ್ರಾಸ್ತಾವಿಕವಾಗಿ ಮಾತನಾಡಿ, ಹಿನ್ನೆಡೆಗೆ ಸುಗಮ ಹಾಗೂ ಸುರಕ್ಷಿತ ಸಂಪರ್ಕದ ಕೊರತೆಯ ನಡುವೆ ನವಮಂಗಳೂರು ಬಂದರಿನ ಸರಕು ಸಾಗಣಿಕೆ ಸಾಮಥ್ರ್ಯವನ್ನು ಒಂದು ವರ್ಷದಲ್ಲಿ ದ್ವಿಗುಣಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಮೀನುಗಾರಿಕೆ ಇಲಾಖೆಯ ರೇಖಾ ಎಂ. ರವರು ಮಾತನಾಡಿ, ರಾಜ್ಯದಲ್ಲಿರುವ 8 ಮೀನುಗಾರಿಕೆ ಬಂದರುಗಳು ಹಾಗೂ 26 ಮೀನುಗಾರಿಕೆ ಇಳಿದಾಣ ಕೇಂದ್ರಗಳನ್ನು ನೈರ್ಮಲ್ಯೀಕರಣದ ಜೊತೆಗೆ ಅಭಿವೃದ್ಧಿಪಡಿಸಲು ಉದ್ಧೇಶಿಲಾಗಿದೆ ಎಂದು ತಿಳಿಸಿದರು.

ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ನಿರ್ದೇಶಕ ಕ್ಯಾಪ್ಟನ್ ಸಿ. ಸ್ವಾಮಿ ಮಾತನಾಡಿ, ಹಂಗಾರಕಟ್ಟಾ ಹಾಗೂ ತದಡಿ ಬಂದರುಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಅವಕಾಶಗಳಿರುವುದಾಗಿ ತಿಳಿಸಿದರು.

ಐಡೆಕ್ ಸಂಸ್ಥೆಯ ಉಪಾಧ್ಯಕ್ಷ ವಿಜಯಕುಮಾರ ಸಿ. ರವರು ಮಾತನಾಡಿ, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳುವ ಯೋಜನೆಗಳ ರೂಪುರೇಷೆಗಳನ್ನು ಸರಳ ಹಾಗೂ ಆಕರ್ಷಕ ಮಾಡುವ ಅವಶ್ಯಕತೆ ಇರುವುದಾಗಿ ತಿಳಿಸಿದರು.

ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಮೀನುಗಾರಿಕೆ ಸಚಿವ ಎಸ್. ಅಂಗಾರ ಮಾತನಾಡಿ, ಬಂಡವಾಳ ಹೂಡಿಕೆದಾರರಿಗೆ ಸ್ವಾಗತವನ್ನು ಬಯಸುತ್ತಾ ಕರ್ನಾಟಕ ರಾಜ್ಯವನ್ನು ಜಾಗತಿಕ ಮೆರಿಟೈಮ್ ಹಬ್ ಮಾಡುವ ಕನಸನ್ನು ನನಸಾಗಿಸಲು ಕೋರಿದರು.

ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ನಿರ್ದೇಶಕ ಕ್ಯಾಪ್ಟನ್ ಸಿ. ಸ್ವಾಮಿ ಶೃಂಗಸಭೆಯನ್ನು ಯಶಸ್ವಿಗೊಳಿಸಿದ ಎಲ್ಲ ಅತಿಥಿಗಳಿಗೆ ವಂದಿಸಿದರು. ಮೆರಿಟೈಮ್ ವಲಯದ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸುವುದಾಗಿ ತಿಳಿಸಿದರು.

Comments are closed.