ಕರಾವಳಿ

ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಾವಧಿ ಮಹಾಪೂಜೆ ಸಂಭ್ರಮ : ಲಕ್ಷಾಂತರ ಭಕ್ತರಿಂದ ಅಮ್ಮನ ದರ್ಶನ

Pinterest LinkedIn Tumblr

ಮಂಗಳೂರು, ಮಾರ್ಚ್.03 : ನಗರದ ಬೋಳೂರು, ಶ್ರೀ ಮಾರಿಯಮ್ಮ ದೇವಸ್ಥಾನ ಉರ್ವದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಹಿತಾ ವರ್ಷಾವಧಿ ಮಹಾಪೂಜೆಯು ಮಾರ್ಚ್ 1 ಸೋಮವಾರ ಹಾಗೂ ಮಾರ್ಚ್ 2 ಮಂಗಳವಾರದಂದು ರಾತ್ರಿ ಬಹಳ ವಿಜೃಂಭಣೆಯಿಂದ್ ನೆರವೇರಿತು. ಇದೇ ಸಂದರ್ಭದಲ್ಲಿ ಶ್ರೀ ದೇವಿಗೆ ಮಹಾರಂಗ ಪೂಜೆ ನಡೆಯಿತು.

ವರ್ಧಂತಿ ಮಹೋತ್ಸವದ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ನಿತ್ಯ ಪೂಜೆ, ಅಪರಾಹ್ನ 12.30ಕ್ಕೆ ಶ್ರೀ ಮಾರಿಯಮ್ಮ ದೇವಿಗೆ ಸರ್ವಾಲಂಕರಾರ ಪೂಜೆ, ಮಹಾಪೂಜೆ, ಸಂಜೆ 6ಕ್ಕೆ ಮಹಾಪೂಜೆ, ಹೊರಗಿನ ದರ್ಶನ ಬಲಿ, ಕಟ್ಟೆಬಲಿ, ಮಡಸ್ನಾನ, ಕಂಚಿಲ್ ಸೇವೆ ಹರಕೆ ಕಾಣಿಕೆ, ಶ್ರೀ ದೇವಿಯ ಗರ್ಭಗುಡಿ ಪ್ರವೇಶ, ರಾತ್ರಿ 8ಕ್ಕೆ ಸುಡುಮದ್ದು ಪ್ರದರ್ಶನ, ರಾತ್ರಿ 11ರಿಂದ ಒಂದು ಗಂಟೆಯವರೆಗೆ ನೈವೇದ್ಯ ಬಲಿ, ಮಹಾರಾಶಿ ಪೂಜೆ ಜರಗಿತ್ತು.

ಬುಧವಾರ ಬೆಳಗ್ಗೆ 2.30ರಿಂದ 3.30ರತನಕ ಮಾರಿ ಉಚ್ಛಿಷ್ಠ್, ಮುಂಜಾನೆ 4.30ಕ್ಕೆ ಮಹಾಪೂಜೆ, ಹೊರಗಿನ ದರ್ಶನ ಬಲಿ, ಕಟ್ಟೆ ಬಲಿ, ಮಡಸ್ನಾನ, ಕಂಚಿಲ್ ಸೇವೆ, ಶ್ರೀ ದೇವಿಯ ಗರ್ಭಗುಡಿ ಪ್ರವೇಶ, ರಥೋತ್ಸವ, ತುಲಾಭಾರ, ಪ್ರಸಾದ ವಿತರಣೆ ನಡೆಯಿತು. ಲಕ್ಷಂತಾರ ಭಕ್ತರು ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸಿ, ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಮಾರ್ಚ್ 6ರಂದು ಶ್ರೀ ಮಲರಾಯ ಧೂಮಾವತಿ ದೈವಗಳ ನೇಮೋತ್ಸವ:

ಮಾರ್ಚ್ 6ರಂದು ಸಂಜೆ 7 ಗಂಟೆಯಿಂದ ಶ್ರೀ ಮಲರಾಯ ಧೂಮಾವತಿ ದೈವಗಳ ನೇಮೋತ್ಸವ ಜರಗಲಿದೆ ಎಂದು ಉರ್ವಾ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

_ Sathish Kapikad /  Mob : 9035089084

Comments are closed.