ಮಂಗಳೂರು, ಮಾರ್ಚ್.03 : ಕಳೆದ ಕೆಲವು ತಿಂಗಳುಗಳಿಂದ ನಮ್ಮ ಭಾಗದ ಧಾರ್ಮಿಕ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳನ್ನು ಗುರಿಯಾಗಿಟ್ಟುಕೂಂಡು ದುಷ್ಕೃತ್ಯಗಳು ನಡೆಯುತ್ತಿದ್ದು, ಕಾಣಿಕೆ ಹುಂಡಿಗೆ ಧರ್ಮ ನಿಂದನೆಯ ಬರಹಗಳನ್ನು ಮತ್ತು ಬೇಡದ ವಸ್ತುಗಳನ್ನು ಹಾಕಿ ಅಪವಿತ್ರ ಗೊಳಿಸುವುದು ಅಲ್ಲದೆ ಕಳ್ಳತನಗಳು ನಿರಂತರವಾಗಿ ನಡೆಯುತ್ತಿದೆ.
ಈ ಕೃತ್ಯವನ್ನು ಖಂಡಿಸಿ ಇದಕ್ಕೆ ಕಡಿವಾಣ ಹಾಕಲು ತಾರೀಖು 09-03-2021 ನೇ ಮಂಗಳವಾರ ಸಂಜೆ 3:00 ಗಂಟೆಗೆ ವಿಶ್ವ ಹಿಂದು ಪರಿಷತ್ ಕಾರ್ಯಾಲಯ ವಿಶ್ವಶ್ರೀಯಲ್ಲಿ ಸಭೆ ಕರೆಯಲಾಗಿದ್ದು ಈ ಸಭೆಗೆ ಎಲ್ಲಾ ದೇವಸ್ಥಾನ, ದೈವಸ್ಥಾನ, ಭಜನಾಮಂದಿರದ ಆಡಳಿತ ಮಂಡಳಿಯವರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಪವಿತ್ರ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಸಮಾಲೋಚನಾ ಸಭೆಯಲ್ಲಿ ಭಾಗವಹಿಸುವಂತೆ ವಿನಂತಿಸುವುದಾಗಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆ ನಡೆಯುವ ಸ್ಥಳ: ವಿಶ್ವಶ್ರೀ ವಿಶ್ವ ಹಿಂದು ಪರಿಷತ್ ಕಾರ್ಯಾಲಯ ಹಿಂದೂ ರುದ್ರಭೂಮಿ ರಸ್ತೆ- ಕದ್ರಿ ದೇವಸ್ಥಾನದ ಹತ್ತಿರ ಮಂಗಳೂರು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ: ಪ್ರದೀಪ್ ಸರಿಪಲ್ಲ. ಮೊಬೈಲ್ ಸಂಖ್ಯೆ: 9606707283