ಕರಾವಳಿ

ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದವರು ಹಿಂತಿರುಗಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ :ಮಾ.15 ರವರೆಗೆ ಕಾಲಾವಕಾಶ

Pinterest LinkedIn Tumblr

ಮಂಗಳೂರು, ಫೆಬ್ರವರಿ 27 : ಪಡಿತರ ಚೀಟಿ ಪಡೆದಿರುವ ಸಂದರ್ಭದಲ್ಲಿ ಬಡತನ ರೇಖೆಗಿಂತ ಕೆಳಗಿದ್ದು, ಪ್ರಸ್ತುತ ಆರ್ಥಿಕವಾಗಿ ಮುಂದುವರಿದಿರುವವರು ಹಾಗೂ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡಿರುವವರು ತಮ್ಮ ಪಡಿತರ ಚೀಟಿಯನ್ನು ಇಲಾಖೆಗೆ ಹಿಂದಿರುಗಿಸಿ ಎಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡಿರುವುದಿಲ್ಲ ಅಂತವರ ವಿರುದ್ಧ ದಂಡ ವಸೂಲಿ ಮಾಡಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.

ಅನರ್ಹ ಬಿಪಿಎಲ್ ಪಡಿತರ ಚೀಟಿದಾರರು ಎಂದರೆ, ಕುಟುಂಬದ ವಾರ್ಷಿಕ ಆದಾಯ ರೂ. 1 ಲಕ್ಷ ಇಪ್ಪತ್ತು ಸಾವಿರ ಮೇಲ್ಪಟ್ಟವರು, ನಾಲ್ಕು ಚಕ್ರದ ವಾಹನ ಸ್ವಂತಕ್ಕಾಗಿ ಬಳಸುವವರು, ಸರಕಾರಿ/ಅರೆ ಸರಕಾರಿ/ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಹೊಂದಿರುವವರು, ನಗರ ಪ್ರದೇಶದಲ್ಲಿ 1000 ಚದರ ಅಡಿ ವಿಸ್ತೀರ್ಣ ಅಥವಾ ಹೆಚ್ಚಿನ ವಿಸ್ತೀರ್ಣದ ವಾಸದ ಮನೆ ಹೊಂದಿರುವ ಕುಟುಂಬಗಳು ಕೂಡಲೇ ತಮ್ಮ ಬಿಪಿಎಲ್/ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗಳನ್ನು ಆಹಾರ ಇಲಾಖೆಗೆ ಹಾಜರುಪಡಿಸಿ ಎಪಿಎಲ್ ಪಡಿತರ ಚೀಟಿಗಳನ್ನು ಪಡೆದುಕೊಳ್ಳಬೇಕು.

ಅದಲ್ಲದೇ ಮರಣ ಹೊಂದಿದ ಪಡಿತರ ಚೀಟಿ ಸದಸ್ಯರ ಹೆಸರನ್ನು ಸಹ ಚೀಟಿಯಿಂದ ಕೂಡಲೇ ತೆಗೆಸಿ ದಾಖಲೆಯನ್ನು ಇಲಾಖೆಗೆ ಹಾಜರುಪಡಿಸಲು ಮಾರ್ಚ್ 15 ರವರೆಗೆ ಕೊನೆಯ ಅವಕಾಶ ನೀಡಲಾಗಿದೆ ಎಂದು ತಾಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.