ಕರಾವಳಿ

ಭಾರತೀಯ ಜನತಾ ಪಕ್ಷ ಯಾವುದೇ ವಂಶದ ಹೆಸರಿನಿಂದ ಬೆಳೆದಿರುವ ಪಕ್ಷವಲ್ಲ : ಶಾಸಕ ಕಾಮಾತ್

Pinterest LinkedIn Tumblr

ಮಂಗಳೂರು: ಭಾರತೀಯ ಜನತಾ ಪಕ್ಷ ಯಾವುದೇ ವಂಶದ ಹೆಸರಿನಿಂದ ಬೆಳೆದಿರುವ ಪಕ್ಷವಲ್ಲ. ಕಾರ್ಯಕರ್ತರ ಬಲಿದಾನ,ತ್ಯಾಗ, ಸಮರ್ಪಿತ ಮನೋಭಾವನೆಯಿಂದ ಈ ಮಟ್ಟಕ್ಕೆ ಬೆಳೆದಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದರು.

ಬೋಳೂರು ಅಕ್ಷಯ ಸಭಾ ಭವನದಲ್ಲಿ ನಡೆದ ಬೋಳೂರು ವಾರ್ಡ್ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ಶಾಸಕ ಕಾಮತ್, ಭಾರತೀಯ ಜನತಾ ಪಾರ್ಟಿ 3 ಸೀಟಿನಿಂದ ನಿರಂತರವಾಗಿ ಅಪಮಾನ ಅಪಹಾಸ್ಯಗಳನ್ನು ಎದುರಿಸಿ ಇಂದು 303 ಲೋಕಸಭಾ ಸದಸ್ಯರನ್ನು ಹೊಂದಿದೆ.

ಈ ಅವಧಿಯಲ್ಲಿ ಅನೇಕ ಕಾರ್ಯಕರ್ತರು ತಮ್ಮ ರಕ್ತವನ್ನು ಬೆವರಿನಂತೆ ಸುರಿಸಿದ್ದಾರೆ. ಅದೆಷ್ಟೋ ಕಾರ್ಯಕರ್ತರ ಬಲಿದಾನ, ಅನೇಕ ಜನರ ತ್ಯಾಗದ ಪ್ರತೀಕವಾಗಿ ಇಂದು ಪಕ್ಷ ಈ ಮಟ್ಟದ ಯಶಸ್ಸು ಗಳಿಸಿದೆ ಎಂದರು.

ಮಂಗಳೂರು ನಗರ ಪ್ರದೇಶದಲ್ಲೂ ಕೂಡ ಪಕ್ಷ ಸಂಘಟನೆಗಾಗಿ ಕೆಲಸ ಮಾಡಿರುವ ಅನೇಕ ಜನರು ನಮ್ಮ ನಡುವೆ ಇಂದಿಗೂ ಅಧಿಕಾರದ ಮೋಹವಿಲ್ಲದೆ ದುಡಿಯುತಿದ್ದಾರೆ. ಅವರ ಶ್ರಮ ವ್ಯರ್ಥವಾಗದಂತೆ ನಾವು ನಮ್ಮತನವನ್ನು ಕಾಯ್ದುಕೊಳ್ಳಬೇಕು. ಅಭಿವೃದ್ಧಿಯ ಜೊತೆ ಜೊತೆಗೆ ಪಕ್ಷವನ್ನು ಬಲಪಡಿಸುವ ಕಾರ್ಯ ಆಗಬೇಕು ಎಂದು ಶಾಸಕ ಕಾಮತ್ ಹೇಳಿದರು.

ಸಂಘಟನಾತ್ಮಕ ಕಾರ್ಯದ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದೆಂದೂ ಕಂಡರಿಯದ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಅನುದಾನಗಳ ಸಮರ್ಪಕ ಬಳಕೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಬಹಳಷ್ಟು ಮೆಚ್ಚುಗೆ ಪಡೆದಿದ್ದಾರೆ.

ಶಾಸಕರು,ಸಂಸದರು, ರಾಜ್ಯ ಸರಕಾರ ಹಾಗೂ ಕೇಂದ್ರದ ಸಾಧನೆಗಳನ್ನು ಮನೆ ಮನೆಗೂ ತಲುಪಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕು. ಮುಂಬರುವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಪುನರ್ ಆಯ್ಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅಂತರ ಹೆಚ್ಚಿಸಿಕೊಂಡು ದಾಖಲೆಯ ಗೆಲುವಿನತ್ತ ಕಾರ್ಯಕರ್ತರು ಗಮನ ಹರಿಸಬೇಕು ಎಂದರು.

ಸಭಾಧ್ಯಕ್ಷರಾದ ಬಿಜೆಪಿ ಮಂಗಳೂರು ನಗರ ದಕ್ಷಿಣ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ ಮಾತನಾಡಿ ಮಂಗಳೂರು ನಗರ ದಕ್ಷಿಣ ವಿಧಾನ ವ್ಯಾಪ್ತಿಯ 38 ವಾರ್ಡ್ ಗಳಲ್ಲೂ ಕೂಡ ಕಾರ್ಯಕರ್ತರ ಸಮಾವೇಶ ಮಾಡಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರಾದ ತುಕಾರಾಮ ಎ ಬಂಗೇರ, ಶಿವರಾಯ ನಾಯಕ್ ಬೋಳೂರು, ಬಿ ಕೃಷ್ಣ ನಾಯಕ್ ಮಠದಕಣಿ, ಪ್ರಕಾಶ್ ಎನ್ ಕರ್ಕೇರ ಬೊಕ್ಕಪಟ್ಣ, ಪದ್ಮನಾಭ ಪುತ್ರನ್ ಬೋಳೂರು, ಎಂ ಕೆ ಎ ಕುಂದರ್ ಬೋಳೂರು, ವಿವೇಕಾನಂದ್ ಬೋಳೂರು, ಬಿ ಗೋಪಾಲ್ ಬಂಗೇರ, ಎಮ್ ರಾಧಾಕೃಷ್ಣ ಶೇಟ್, ತಿಲಕ್ ನಗರ, ರಘುರಾಮ ಕಾಂಚನ್ ಬೋಳೂರು ಸುಲ್ತಾನ್ ಬತ್ತೇರಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಮಂಡಲದ ಪ್ರಧಾನ ಕಾರ್ಯದರ್ಶಿ ರೂಪ ಡಿ ಬಂಗೇರ, ಮಹಾನಗರ ಪಾಲಿಕೆಯ ಮುಖ್ಯ ಸಚೇತಕರು ಹಾಗೂ ಪಂಚಾಯತರಾಜ್ ಪ್ರಕೋಷ್ಠದ ರಾಜ್ಯ ಸಹಸಂಚಾಲಕರಾದ ಪ್ರೇಮಾನಂದ ಶೆಟ್ಟಿ, , ಮೈಸೂರು ಇಲೆಕ್ಟ್ರಿಕಲ್ ಕಂಪನಿ ಅಧ್ಯಕ್ಷರಾದ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಸಂತೋಷ್ ರೈ ಬೋಳಿಯಾರ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಂಡಲದ ಪ್ರಭಾರಿ ಕಸ್ತೂರಿ ಪಂಜ, ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಪೂರ್ಣಿಮಾ ಎಂ, ಮಂಗಳೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಬೋಳೂರು ವಾರ್ಡ್ ಕಾರ್ಪೂರೇಟರ್ ಶ್ರೀ ಜಗದೀಶ್ ಶೆಟ್ಟಿ, ಮಂಡಲದ ಉಪಾಧ್ಯಕ್ಷ ರಾದ ರಮೇಶ್ ಕಂಡೆಟ್ಟು, ಉತ್ತರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ರಮೇಶ್ ಹೆಗ್ಡೆ, ಪೂರ್ವ ಮಹಾಶಕ್ತಿ ಕೇಂದ್ರ ದ ಅಧ್ಯಕ್ಷರು ಅದ ಅಜೇಯ್ ಕುಲಶೇಖರ , ಪಶ್ಚಿಮ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ದೀಪಕ್ ಪೈ , ದಕ್ಷಿಣ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಅದ ಕಿರಣ್ ರೈ ಉತ್ತರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ರಾಹುಲ್ ಶೆಟ್ಟಿ ಹಾಗೂ ಬೋಳೂರ್ ವಾರ್ಡಿನ ಶಕ್ತಿ ಕೇಂದ್ರದ ಸಂಚಾಲಕರು ಕಾರ್ತಿ ಕೇಯ ಬಂಗೇರ ಹಾಗೂ ದಿನೇಶ್ ಕರ್ಕೇರ ಉಪಸ್ಥಿತರಿದ್ದರು.

ಕಾರ್ಪೋರೇಟರ್ಜ ಗದೀಶ್ ಶೆಟ್ಟಿ ಪ್ರಸ್ತಾವನೆಯ ನುಡಿಗಳೊಂದಿಗೆ ಸ್ವಾಗತಿಸಿದರು, ಕಾರ್ತಿಕೇಯ ಬಂಗೇರ ವಂದಿಸಿದರು. ತ್ರಿಪ್ತಿ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.

Comments are closed.