ಮಂಗಳೂರು, ಫೆಬ್ರವರಿ 23 : ಖಾಸಗಿ ಬಸ್‌ಗಳು ಕೊನೆಯ ಟ್ರಿಪ್‌ಗಳನ್ನು ರದ್ದುಗೊಳಿಸುವಂತಿಲ್ಲ. ಇಂತಹ ಪ್ರಕರಣ ಕಂಡುಬಂದಲ್ಲಿ ಕೇಸು ದಾಖಲಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಸೂಚಿಸಿದ್ದಾರೆ.
ಫೆಬ್ರವರಿ 16ರಂದು ಮಹಾನಗರ ಪಾಲಿಕೆ ಮತ್ತು ಫೆಬ್ರವರಿ 17ರಂದು ರಸ್ತೆ ಸುರಕ್ಷತಾ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ಮಜಲು ವಾಹನಗಳು ಸರಿಯಾಗಿ ಟ್ರಿಪ್‍ಗಳನ್ನು ಮಾಡದೆ ಹಾಗೂ ಕೊನೆಯ ಟ್ರಿಪ್‍ಗಳನ್ನು ರದ್ದುಗೊಳಿಸಿ ಅನಾನುಕೂಲವಾಗುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿರುತ್ತದೆ.
ಈ ರೀತಿಯ ಉಲ್ಲಂಘನೆಗಳು ಕಂಡುಬಂದಲ್ಲಿ ಯಾವುದೇ ಮರು ನೋಟೀಸ್ ನೀಡದೆ ಮೋಟಾರು ವಾಹನ ಕಾಯ್ದೆಯ ಪ್ರಕಾರ ಕಾನೂನು ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಯವರ ಪರವಾಗಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ತಿಳಿಸಿದ್ದಾರೆ.