ಕರಾವಳಿ

ಮಂಗಳೂರಿನಲ್ಲಿ ನಮ್ಮ ಕುಡ್ಲ ಟಾಕೀಸ್ ಶುಭಾರಂಭ: ಮನೆಯಲ್ಲೇ ಕುಳಿತು ಸಿನಿಮಾ ನೋಡುವ ಅವಕಾಶ

Pinterest LinkedIn Tumblr

ಮಂಗಳೂರು: ನಗರದ ಟಿವಿ ವಾಹಿನಿ ‘ನಮ್ಮ ಕುಡ್ಲ’ ಸಂಸ್ಥೆಯ ಹೊಸ ಪರಿಕಲ್ಪನೆ ‘ನಮ್ಮ ಕುಡ್ಲ ಟಾಕೀಸ್’ ಶುಭಾರಂಭ, ಲೋಗೊ ಬಿಡುಗಡೆ, ಪ್ರಥಮ ಚಿತ್ರದ ಘೋಷಣೆ, ತುಳು ಚಿತ್ರರಂಗದ 50ನೇ ವರ್ಷದ ಸಂಭ್ರಮ ಕಾರ್ಯಕ್ರಮ ನಗರದ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ನಡೆಯಿತು.

ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ, ನಮ್ಮ ಕುಡ್ಲ ಟಾಕೀಸ್ ಒಂದು ವಿಶೇಷ ಪ್ರಯೋಗ. ತುಳು ಚಿತ್ರರಂಗ ಬೆಳೆಯಲು ಇದು ಸಹಕಾರಿ. ಇದೊಂದು ಒಳ್ಳೆಯ ಪರಿಕಲ್ಪನೆಯಾಗಿದ್ದು, ಚಿತ್ರ ಬೆಳೆದರೆ ಮಾತ್ರ ನಿರ್ಮಾಪಕ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಕುಡ್ಲ ಸಂಸ್ಥೆ ಉತ್ತಮ ಹೆಜ್ಜೆ ಇಡುತ್ತಿದೆ. ತುಳು ಚಿತ್ರಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಶುಭ ಹಾರೈಸಿದರು.

ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ತುಳುನಾಡಿನಲ್ಲಿ ಚಿತ್ರಮಂದಿರದ ಸಮಸ್ಯೆ ಇದ್ದು, ನಮ್ಮ ಕುಡ್ಲ ಹೊಸ ದಿಕ್ಕು ತೋರಿಸಿದೆ. ನಮ್ಮ ಕುಡ್ಲ ಟಾಕೀಸ್ ಶುಭಾರಂಭ ಗೊಂಡಿದ್ದು, ಅನೇಕ ನಿರ್ಮಾಪಕರಿಗೆ ಸಹಕಾರಿ ಯಾಗಲಿದೆ ಎಂದರು.

ಕಾರ್ಯಕ್ರಮ ಉದ್ಘಾಟನೆ ಸಮಾ ರಂಭದಲ್ಲಿ ಪ್ರಮುಖರಾದ ಪ್ರದೀಪ್ ಕುಮಾರ್ ಕಲ್ಕೂರ, ಧರ್ಮಪಾಲ ದೇವಾಡಿಗ, ಶ್ರೀನಿವಾಸ ಚಂದ್ರಶೇಖರ್ ಕಿಣಿ, ರಿಚರ್ಡ್ ಕ್ಯಾಸ್ಟಲಿನೊ, ಆರ್. ಪದ್ಮರಾಜ್ ಕುದ್ರೋಳಿ, ಸಂಜೀವ ದಂಡಕೇರಿ, ಚಂದ್ರಶೇಖರ ಶೆಟ್ಟಿ, ಮಲೆನಾಡು ಇನ್‌ಫೋಟೆಕ್ ಸಿಇಒ ಹರೀಶ್ ಬಿ. ಕರ್ಕೇರ ನಿರ್ಮಾಪಕ ಬಾಲಕೃಷ್ಣ ಶೆಟ್ಟಿ ಮೇಗಿನ ಮಾಲಾಡಿ ಉಪಸ್ಥಿತರಿದ್ದು, ಉದ್ಘಾಟನೆಯ ಬಳಿಕ ಲೋಗೊ ಬಿಡುಗಡೆಗೊಳಿಸಿದರು.

ಪ್ರಮುಖರಾದ ಕಿಶೋರ್ ಡಿ ಶೆಟ್ಟಿ, ಪ್ರಕಾಶ್ ಪಾಂಡೇಶ್ವರ, ರವಿ ರೈ ಕಳಸ, ಮೋಹನ್ ಕೊಪ್ಪಳ, ಉದಯ ಪೂಜಾರಿ, ಆರ್. ಧನರಾಜ್, ಅಡ್ಯಾರ್ ಮಾಧವ ನಾಯಕ್, ವಿಶ್ವಾಸ್ ಕುಮಾರ್ ದಾಸ್ ಉಪಸ್ಥಿತರಿದ್ದರು.

ತುಳು ಚಲನಚಿತ್ರ 50ನೇ ವರ್ಷಕ್ಕೆ ಪಾದಾರ್ಪಣೆಗೈಯುವ ಹಿನ್ಕೆಲೆಯಲ್ಲಿ ನಡೆದ ಪುತ್ಥೊಳಿ ಪರ್ಬ ಕಾರ್ಯ ಕ್ರಮದಲ್ಲಿ ಪ್ರಮುಖರಾದ ವಿ.ಜಿ.ಪಾಲ್, ತಮ್ಮ ಲಕ್ಷ್ಮಣ, ಸರೋಜಿನಿ ಶೆಟ್ಟಿ, ಶರ್ಮಿಳಾ ಕಾಪಿಕಾಡ್, ಜಗನ್ನಾಥ ಶೆಟ್ಟಿ ಬಾಳ, ಯಜ್ಞೇಶ್ವರ ಬರ್ಕೆ, ಬಿ.ಆರ್. ಬಾಳಿಗ, ಮಣಿಕಾಂತ್ ಕದ್ರಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ಗಂಗಾಧರ ಶೆಟ್ಟಿ, ಇಸ್ಮಾಯಿಲ್ ಮೂಡುಶೆಡ್ಡೆ, ಪಮ್ಮಿ ಕೊಡಿಯಾಲ್ ಬೈಲ್, ರಣದೀಪ ಕಾಂಚನ್, ಮಂಗೇಶ್ ಭಟ್, ಸಂತೋಷ್, ಹರೀಶ್ ಬಿ. ಕರ್ಕೇರ, ಲೀಲಾಕ್ಷ ಕರ್ಕೇರ, ಮೋಹನ್ ಕರ್ಕೇರ, ಸುರೇಶ್ ಕರ್ಕೇರ ಸೇರಿದಂತೆ ಗಣ್ಯರು ಉಪಸ್ಥಿ ತರಿದ್ದರು.

ಧರ್ಮಸ್ಥಳ ಧರ್ಮಾಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಹಿರಿಯ ಚಿತ್ರವಿತರಕ ಟಿ.ಎ. ಶ್ರೀನಿವಾಸ್ ವೀಡಿಯೊ ಮುಖೇನ ನಮ್ಮ ಕುಡ್ಲ ಟಾಕೀಸ್‌ಗೆ ಶುಭಹಾರೈಸಿದರು. ನಮ್ಮ ಕುಡ್ಲ ಚೀಫ್ ಆಪರೇಟಿಂಗ್ ಆಫೀಸರ್ ಕದ್ರಿ ನವನೀತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ನಿತಿನ್ ಬಿ. ಸಾಲ್ಯಾನ್ ಕಾರ್ಯಕ್ರಮ ನಿರೂಪಿ ಸಿದರು.

ನಮ್ಮ ಕುಡ್ಲ ಟಾಕೀಸ್‌ನಲ್ಲಿ ಮಾ.7ರಂದು ಪೆಪ್ಪೆರೆರೆ ಪೆರೆರೆರೆ ತುಳು ಚಿತ್ರ ಮೊದಲ ಬಾರಿಗೆ ಬಿಡುಗಡೆ ಗೊಳ್ಳಲಿದೆ. ನಮ್ಮ ಕುಡ್ಲ ಟಾಕೀಸ್‌ನಲ್ಲಿ ಈ ಚಿತ್ರ ಒಂದು ತಿಂಗಳ ಕಾಲ ಪ್ರಸಾರ ಮಾಡಲಾಗುತ್ತದೆ. ಭಾನುವಾರ ದಿನಕ್ಕೆ 3 ಬಾರಿ ಪ್ರಸಾರವಾಗಲಿದೆ.

Comments are closed.