ಕರಾವಳಿ

ಹೆದ್ದಾರಿ ಬದಿ ಕಸ ಎಸೆಯುವವರಿಂದ ದಂಡ ವಸೂಲಿ

Pinterest LinkedIn Tumblr

ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಎರಡೂ ಬದಿಯ ಕಸವನ್ನು ಫೆಬ್ರವರಿ 13 ರಂದು ನಗರ ಸಭೆಯ ಅಧ್ಯಕ್ಷರು, ಅಪರ ಜಿಲ್ಲಾಧಿಕಾರಿ ಹಾಗೂ ನಗರಸಭೆಯ ಪೌರಾಯುಕ್ತರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛಗೊಳಿಸಿದ್ದರು.

ಆದರೆ ಜನರು ಕಸ ಬಿಸಾಡುವುದನ್ನು ಪುನಃ ಮುಂದುವರೆಸಿದ್ದು, ಬೆಳಗ್ಗೆ ನಗರಸಭೆಯ ಆರೋಗ್ಯ ನಿರೀಕ್ಷಕಿ ಶಶಿರೇಖಾ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಕೆಎಸ್‌ಆರ್‌ಟಿಸಿ ನಿಗಮದ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ ಎಸೆಯುವವರನ್ನು ಹಿಡಿದು ದಂಡ ವಸೂಲಿ ಮಾಡಿದರು.

ರಸ್ತೆ ಬದಿ ಕಸ ಎಸೆಯುವವರ ವಿರುದ್ಧ ದಂಡ ವಸೂಲಿ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Comments are closed.