ಕರಾವಳಿ

ಸಿದ್ಧರಾಮಯ್ಯ, ಕುಮಾರಸ್ವಾಮಿಯವರಿಗೆ ಶ್ರೀ ರಾಮ ಬುದ್ದಿ ಕೊಡಬೇಕು: ಸಚಿವ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಉಡುಪಿ: ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿಯವರು ವಿರೋಧ ಪಕ್ಷದ ಸ್ಥಾನದಲ್ಲಿದ್ದು ಅವರು ಆಗ್ಗಾಗೆ ಇಂತಹ ಆರೋಪ ಮಾಡುತ್ತಾರೆ. ಅವರಿಗೆ ಶ್ರೀ ರಾಮ ಬುದ್ದಿ ಕೊಡಬೇಕು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ (ಮುಜರಾಯಿ) ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ವಿಚಾರದಲ್ಲಿ ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿ ನೀಡಿದ ಹೇಳಿಕೆ ವಿಚಾರದಲ್ಲಿ ಉಡುಪಿ ಜಿಲ್ಲೆಯ ಕೋಟದಲ್ಲಿ ಸಚಿವ ಕೋಟ ಪ್ರತಿಕ್ರಿಯೆ ನೀಡಿದರು‌.

ಭಾರತದ ಸರ್ವೋಚ್ಚ ನ್ಯಾಯಾಲಯ ರಾಮಮಂದಿರ ನಿರ್ಮಾಣಕ್ಕೆ ಅಸ್ತು ಎಂದಿದ್ದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಶಿಲಾನ್ಯಾಸ ಮಾಡುವ ಕೆಲಸ ಮಾಡಿದ್ದಾರೆ. ಭಾರತದಲ್ಲಿನ ಶತ ಕೋಟಿ ಭಾರತಿಯರು ಇದಕ್ಕೆ ದೇಣಿಗೆ ನೀಡುವ ಮೂಲಕ ಕೈಜೋಡಿಸಿದ್ದಾರೆ. ಇತಿಹಾಸದಲ್ಲೇ ಪ್ರಥಮ ಬಾರಿಗೆ ದೇಶದ ಜನರ ಮೂಲಕ ನಿರ್ಮಾಣಗೊಳ್ಳುವ ದೇವಸ್ಥಾನ ಶ್ರೀರಾಮ ಮಂದಿರ ಆಗಲಿದೆ. ಉಳ್ಳವರು, ಇಲ್ಲದವರು, ಜಾತಿ, ವರ್ಗ, ಧರ್ಮ ಮೀರಿದಂತೆ ಭವ್ಯವಾದ ಶ್ರೀ ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದಾಗಿದೆ. ಸುಪ್ರೀಂ ಕೋರ್ಟ್ ಆದೇಶವೂ ಇದೇ ಆಗಿದ್ದು ಮತ್ತೆ ಮತ್ತೆ ಟೀಕಿಸುವ ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿಯವರಿಗೆ ಶ್ರೀರಾಮ ಬುದ್ದಿ ಕೊಡಬೇಕು ಎಂದರು.

ಟೋಲ್ ಫ್ಲಾಜಾದಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಆದೇಶದ ಹಿನ್ನೆಲೆ ಸ್ಥಳೀಯ ವಾಹನ ಸವಾರರಿಗೆ ಟೋಲ್ ವ್ಯವಸ್ಥೆಯಲ್ಲಿ ಸಮಸ್ಯೆಯಾಗುವ ಬಗ್ಗೆ ದೂರು ಬಂದಿದೆ, ಮಾತ್ರವಲ್ಲ ಪ್ರತಿಭಟನೆ ಕೂಡ ನಡೆದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಈಗಾಗಲೇ ಮಾತನಾಡಿದ್ದು ಮುಂದಿನ ವಾರ ಸಂಸದದ ನೇತ್ರತ್ವ ನಡೆಯುವ ದಿಶಾ ಸಭೆಯಲ್ಲೂ ಈ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಫಾಸ್ಟ್ ಟ್ಯಾಗ್ ನಿಯಮ ಕೇಂದ್ರ ಸರಕಾರದ್ದಾಗಿದ್ದು ಟೋಲ್ ಉಚಿತ ನೀಡುವ ಬಗ್ಗೆ ಪ್ರಸ್ತಾವನೆಗಳಿದೆ. ಪಾಸ್ ಖಡಿತದ ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ ಎಂದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.