ಮಂಗಳೂರು : ಹಿಂದೂಗಳ ಬಹಳ ವರ್ಷಗಳ ಒತ್ತಾಯಗಳನ್ನು ಮಾನ್ಯ ಮಾಡಿ ಗೋವಂಶಗಳ ಸಂಪೂರ್ಣ ರಕ್ಷಣೆ ಮಾಡಲು ಪ್ರಬಲವಾದ ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಕಾಯಿದೆ 2020 ನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದಕ್ಕಾಗಿ ಸಮಸ್ತ ಹಿಂದೂ ಬಾಂಧವರ ಪರವಾಗಿ ಕರ್ನಾಟಕದ ಮಾನ್ಯ ಮುಖ್ಯಮಂತ್ರಿ, ರೈತ ನಾಯಕ ಶ್ರೀ ಯೆಡಿಯೂರಪ್ಪನವರಿಗೆ ಹಾಗು ಪಶುಸಂಗೋಪನಾ ಸಚಿವರಾದ ಶ್ರೀ ಪ್ರಭು ಚೌಹಾಣ್ ರವರಿಗೂ ಕರ್ನಾಟಕ ವಿಶ್ವ ಹಿಂದೂ ಪರಿಷತ್ತಿನ ದಕ್ಷಿಣ ಪ್ರಾಂತ ಅಧ್ಯಕ್ಷರಾದ ಪ್ರೊ ಎಂ ಬಿ ಪುರಾಣಿಕ್ ರವರು ಅಭಿನಂದಿಸಿ ಧನ್ಯವಾದ ಸಲ್ಲಿಸಿದ್ದಾರೆ.
ಎಲ್ಲಾ ವಯಸ್ಸಿನ ಆಕಳು, ಹೋರಿ, ಎತ್ತು, ಕರುಗಳು ಹಾಗು 13 ವರ್ಷದ ಕೆಳಗಿನ ಎಮ್ಮೆ ಕೋಣಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಭಾರತೀಯ ಪರಂಪರೆ ಮುಂದುವರಿಸುವಂತೆ ಆಗಿರುವುದಕ್ಕೆ ಹರ್ಷವನ್ನು ವ್ಯಕ್ತಪಡಿಸುತ್ತಾ ಈ ಕಾನೂನನ್ನು ಜಾರಿಗೊಳಿಸಲು ಸಂಪೂರ್ಣ ಸಹಕಾರವನ್ನು ಕೊಡುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.