ಕರಾವಳಿ

ಕೋಟ ಶ್ರೀ ಅಮೃತೇಶ್ವರಿ ದೇವಳದಲ್ಲಿ ‘ಸಪ್ತಪದಿ’ ತುಳಿದ 10 ಜೋಡಿಗಳು..!

Pinterest LinkedIn Tumblr

ಉಡುಪಿ: ಆ ದೇವಳದಲ್ಲಿಂದು ವಾದ್ಯ ಮೇಳಗಳ ಸದ್ಧು.. ಹಸೆಮಣೆಯಲ್ಲಿ ಹತ್ತು ನವ ಜೋಡಿಗಳ ವಿವಾಹ ಕಾರ್ಯ…ನೆರೆದ ಸಾವಿರಾರು ಮಂದಿ. ಪುರಾಣ ಪ್ರಸಿದ್ಧ ಉಡುಪಿ ಜಿಲ್ಲೆಯ ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇಂದು ಅಕ್ಷರಶ: ಕಳೆಗಟ್ಟಿತ್ತು.

ರಾಜ್ಯ ಸರಕಾರದ ಹಿಂದೂ ಧಾರ್ಮಿಕ ದತ್ತಿ ಸಚಿವಾಲಯದ ಮಹಾತ್ವಕಾಂಕ್ಷೆಯ ಯೋಜನೆಯಾದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರ‌ಮ ಬುಧವಾರ ನಡೆಯಿತು. ಖುದ್ದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ನವಜೋಡಿಗಳನ್ನು ಹರಸಿದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಸಹಿತ ವಿವಿಧ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

ಶ್ರೀ ದೇವಳದಲ್ಲಿ ನಡೆದ ಸಪ್ತಪದಿ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಸಾವಿರಾರು ಜನರು ಸಾಕ್ಷಿಯಾಗಿದ್ದು ವೇದಮೂರ್ತಿ ಮಧುಸೂದನ್ ಬಾಯಿರಿ,ರಾಜೇಂದ್ರ ಅಡಿಗ ನೇತ್ರತ್ವದಲ್ಲಿ ಹತ್ತು ಜೋಡಿಗಳು ಈ ವಿವಾಹದಲ್ಲಿ ಸಪ್ತಪದಿ ತುಳಿದರು.

ವಿಪ್ರ ಮಹಿಳೆಯರು ಸೋಭಾನಿ ಹಾಡುವುದರ ಮೂಲಕ ವಿವಾಹಮಹೋತ್ಸವದ ಉದ್ದಕ್ಕೂ ಗಮನ ಸೆಳೆದರು. ಸ್ಥಳೀಯ ಬ್ರಹ್ಮಾವರ ತಾಲೂಕು ಪಂಚಾಯತ್ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ, ತಾ.ಪಂ.ಸದಸ್ಯೆ ಲಲಿತಾ, ದೇವಳದ ಟ್ರಸ್ಟಿ ಸುಶೀಲಾ ಸೋಮಶೇಖರ್,ಜ್ಯೋತಿ.ಬಿ.ಶೆಟ್ಟಿ, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಧರ್ಮಪತ್ನಿ ಶಾರದ ಆರತಿ ಬೆಳಗಿ ಮದುಮಕ್ಕಳಿಗೆ ಶುಭಹಾರೈಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.