ಕರ್ನಾಟಕ

Aero India 2021: ಬೆಂಗಳೂರಿನ ಬಾನಲ್ಲಿ ‘ಲೋಹದ ಹಕ್ಕಿ’ಗಳ ಕಲರವ..!

Pinterest LinkedIn Tumblr

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ-2021ಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಚಾಲನೆ ನೀಡಿದ್ದಾರೆ.

ಏರೋ‌ ಇಂಡಿಯಾ 2021 ಚಾಲನೆ ವೇಳೆ ರಾಷ್ಟ್ರಧ್ವಜ, ಭಾರತೀಯ ವಾಯು ಸೇನೆ ಹಾಗೂ ಏರೋ ಇಂಡಿಯಾ 2021 ರ ಧ್ವಜ ಹೊತ್ತ ಎಲ್’ಯುಹೆಚ್ ಹೆಲಿಕಾಪ್ಟರ್ ಗಳು ಮೊದಲು ಪ್ರದರ್ಶನ ನೀಡಿದವು.

ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ, ಕರ್ನಾಟಕ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಉಪಸ್ಥಿತರಿದ್ದರು.

ಮೈನವಿರೇಳಿಸುವ ಪ್ರದರ್ಶನ….
ವೈಮಾನಿಕ ಪ್ರದರ್ಶನದಲ್ಲಿ ಈ ಬಾರಿ ಒಟ್ಟು 63 ವಿಮಾನಗಳಿಂದ ಪ್ರದರ್ಶನ ನಡೆಯಲಿದ್ದು, ದಿನಕ್ಕೆ ಎರಡು ಬಾರಿ 42 ವಿಮಾನಗಳು ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಲಿವೆ. ರಫೇಲ್, ಡಕೋಟಾ, ಸುಖೋಯ್, ಎಲ್​ಸಿಹೆಚ್, ಎಲ್​ಯುಎಚ್, ಜಾಗ್ವಾರ್, ಹಾಕ್ ಸೇರಿ ಇನ್ನಿತರ ಫೈಟರ್ ಜೆಟ್ ಏರ್ ಕ್ರಾಫ್ಟ್, ಹೆಲಿಕಾಫ್ಟರ್​ಗಳಿಂದ ಪ್ರದರ್ಶನ ನಡೆಯಲಿದೆ.

ಒಂದಷ್ಟು ಬದಲಾವಣೆಗಳು….
ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಈ ಬಾರಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಕೇವಲ ಬ್ಯುಸಿನೆಸ್ ವಿಸಿಟರ್ ಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಏರ್ ಶೋ ಹಿನ್ನೆಲೆಯಲ್ಲಿ ಹುಣಸಮಾರನಹಳ್ಳಿಯಿಂದ ಯಲಹಂಕವರೆಗೂ ಸರಕಿ ಸೇರಿದಂತೆ ಭಾರಾ ವಾಹನಗಳ ಪ್ರವೇಶಗಳನ್ನು ನಿಷೇಧಿಸಲಾಗಿದೆ. ಏರ್ ಶೋ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಹಿಂದೆ ರಸ್ತೆಯ ಇಕ್ಕಲುಗಳಲ್ಲಿ ನಿಂತು ಜನ ಏರ್ ಶೋ ನೋಡುತ್ತಿದ್ದು ಈ ಬಾರಿ ರಸ್ತೆಯಲ್ಲಿ ನಿಂತು ಏರ್ ಶೋ ನೋಡುವವರಿಗೂ ಬ್ರೇಕ್ ಹಾಕಲಾಗಿದೆ.

Comments are closed.