ಕರಾವಳಿ

ಬೆಳಗಾವಿ ಬಿಟ್ಟು ಕೊಡುವ ಮಾತೇ ಇಲ್ಲ : ಮಹಾರಾಷ್ಟ್ರ ಮುಖ್ಯಮಂತ್ರಿಗೆ ಕರ್ನಾಟಕ ಉಪಮುಖ್ಯ ಮಂತ್ರಿ ತಿರುಗೇಟು

Pinterest LinkedIn Tumblr

ಮಂಗಳೂರು, ಜನವರಿ. 30: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಬವ್ ಠಾಕ್ರೆ ಅಧಿಕಾರ ಉಳಿಸಿ ಕೊಳ್ಳುವ ಸಲುವಾಗಿ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕರ್ನಾಟಕ ಉಪಮುಖ್ಯ ಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಶನಿವಾರ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ನಿಮಿತ್ತ ಮಂಗಳೂರಿಗೆ ಆಗಮಿಸಿದ ಅವರು ಸುದ್ಧಿಗಾರರ ಜೊತೆ ಮಾತನಾಡಿದರು. “ಮಹಾರಾಷ್ಟ್ರ ಸರಕಾರ ಮನೆಯೊಂದು ಮೂರು ಬಾಗಲಿನಂತಿದೆ ಹಾಗಾಗಿ ಜನರ ದೃಷ್ಟಿ ಬೇರೆಡೆ ಸೆಳೆಯಲು ಕರ್ನಾಟಕದ ಭಾಗಗಳ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಉದ್ಬವ್ ಠಾಕ್ರೆ ಮಾತನ್ನಾಡುತ್ತಿದ್ದಾರೆ” ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಇಂತಹ ಉದ್ಧಟತನದ ಹೇಳಿಕೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ನೀಡಿದ್ದಾರೆ ಎಂದು ಹೇಳಿದರು.

ಕಾರವಾರ, ಅಥಣಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಖಂಡನೀಯ. ಕಾರವಾರ, ಅಥಣಿ, ಬೆಳಗಾವಿ ಭಾಗದಲ್ಲಿ ಮರಾಠಿಗರು ಹೆಚ್ಚಾಗಿದ್ದಾರೆ ಎಂಬ ಮಾತ್ರಕ್ಕೆ “ಮಹಾರಾಷ್ಟ್ರಕ್ಕೆ ಕಾರವಾರ, ಅಥಣಿ, ಬೆಳಗಾವಿ ಸೇರ್ಪಡೆ ಮಾಡಬೇಕು ಎಂಬ ಹೇಳಿಕೆ ಉದ್ದಟತನದ್ಸು, ಅಲ್ಲಿ ಮರಾಠಿಗರು ಹೆಚ್ಚಾಗಿದ್ದಾರೆ ಎಂಬ ಮಾತ್ರಕ್ಕೆ ಮಹಾರಾಷ್ಟ್ರಕ್ಕೆ ಸೇರಿಸುವುದಕ್ಕೆ ಆಗುವುದಿಲ್ಲ.

ಮುಂಬೈಯಲ್ಲಿ ಕೂಡ ಹೆಚ್ಚು ಕನ್ನಡಿಗರಿದ್ದಾರೆ, ಅದನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಿ ಎಂದು ಒತ್ತಾಯಿಸುತ್ತೆನೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಮಾತೇ ಇಲ್ಲ. ಅವರು ಇಂತಹ ಹೇಳಿಕೆ ಕೊಡುವ ಮೊದಲು ಸರಿಯಾಗಿ ಯೋಚನೆ ಮಾಡಬೇಕು ಎಂದು ಡಿಸಿಎಂ ಸವದಿ ಹೇಳಿದರು.

Comments are closed.