ಕರಾವಳಿ

ಮಂಗಳೂರಿನಲ್ಲಿ ನಾಳೆ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಪದಗ್ರಹಣ ಸಮಾರಂಭ – “ಕುಲಾಲ ಸಮ್ಮಿಲನ”

Pinterest LinkedIn Tumblr

ಮಂಗಳೂರು, ಜನವರಿ.30 : ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘಕ್ಕೆ 94 ವರ್ಷಗಳು ತುಂಬುತ್ತಿದ್ದು ಮುಂದಿನ ಆರು ವರ್ಷಗಳಲ್ಲಿ ಶತಮಾನೋತ್ಸವದ ಸಂಭ್ರಮ ಕಾಣಲಿದ್ದು, ಸಂಘದ ಈ ಸಾಲಿನ ಪದಗ್ರಹಣ ಸಮಾರಂಭ ಜ.31 ರಂದು ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಪದಗ್ರಹಣ ಸಮಾರಂಭದ ಜೊತೆಗೆ ದ.ಕ., ಉಡುಪಿ, ಕಾಸರಗೋಡು ಜಿಲ್ಲೆ ಹಾಗೂ ಹೊರನಾಡ ಕುಲಾಲ ಬಾಂಧವರು `ಕುಲಾಲ ಸಮ್ಮಿಲನ’ ಎಂಬ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಡಿಯಲ್ಲಿ ಒಟ್ಟು ಸೇರಲಿದ್ದಾರೆ ಎಂದು ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಈ ಬಾರಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಯೂರ್ ಉಳ್ಳಾಲ್ ತಿಳಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.31 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ವೀರನಾರಾಯಣ ದೇವರ ಪ್ರಾರ್ಥನೆಯ ಬಳಿಕ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷರೂ ಸಂಸದರೂ ಆಗಿರುವ ಶ್ರೀ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಮಾಣಿಲ ಶ್ರೀ ಧಾಮದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ನಡುಬೊಟ್ಟು ಶ್ರೀ ರೌದ್ರನಾಥೇಶ್ವರ ಕ್ಷೇತ್ರದ ಧರ್ಮದರ್ಶಿ ರವಿ.ಎನ್ ರವರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಹಲವು ಸಾಧಕರನ್ನು ಮುಜುರಾಯಿ, ಹಿಂದುಳಿದ ವರ್ಗ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಸನ್ಮಾನಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಶ್ರೀ ಬಿ. ರಮಾನಾಥ ರೈ, ಸಚಿವರಾದ ಶ್ರೀ ಎಸ್ ಅಂಗಾರ, ಮ.ನ.ಪಾ ಮೇಯರ್ ದಿವಾಕರ ಪಾಂಡೇಶ್ವರ, ಶಾಸಕರುಗಳಾದ ಶ್ರೀ ಡಿ. ವೇದವ್ಯಾಸ ಕಾಮತ್, ಡಾ| ವೈ ಭರತ್ ಶೆಟ್ಟಿ, ಶ್ರೀ ಯು.ಟಿ ಖಾದರ್, ಶ್ರೀ ಉಮಾನಾಥ ಕೋಟ್ಯಾನ್, ಶ್ರೀ ರಾಜೇಶ್ ನಾಯ್ಕ್ ಉಳೇಪಾಡಿ ಗುತ್ತು, ಸಂಜೀವ ಮಠಂದೂರು, ಶ್ರೀ ಹರೀಶ್ ಪೂಂಜಾ ಮುಂತಾದವರು ಭಾಗವಹಿಸಲಿದ್ದಾರೆ.

ವೇದಿಕೆಯಲ್ಲಿ ಶ್ರೀಮತಿ ಕಸ್ತೂರಿ ಪಂಜ, ಶ್ರೀ ಕಿಶೋರ್ ಕೊಟ್ಟಾರಿ, ಶ್ರೀ ಪುರುಷೋತ್ತಮ ಕಲ್ಬಾವಿ, ಶ್ರೀ ಶ್ರೀನಿವಾಸ ಸಾಲ್ಯಾನ್ ಪಡೀಲ್, ಶ್ರೀ ತೇಜಸ್ವಿ ರಾಜ್, ಶ್ರೀ ನಿತಿನ್ ಕುಮಾರ್, ಶ್ರೀ ರವಿಶಂಕರ್ ಮಿಜಾರ್, ಶ್ರೀ ಸಂತೋಷ್ ಕುಮಾರ್ ರೈ ಬೋಳ್ಯಾರು, ಶ್ರೀ ಪೃಥ್ವಿರಾಜ್ ಎಡಪದವು, ಕುಲಾಲ ಸಮಾಜದ ಗಣ್ಯರಾದ ಶ್ರೀ ಸಂತೋಷ್ ಕುಲಾಲ್ ಪಕ್ಕಾಲು, ಶ್ರೀ ಭಾಸ್ಕರ್ ಎಮ್. ಪೆರುವಾಯಿ, ಶ್ರೀ ಸುಂದರ ಬಿ.ಬಂಗೇರ, ಶ್ರೀ ನಾಗೇಶ್ ಬಜಾಲು, ಶ್ರೀ ರವೀಂದ್ರ ಮುನ್ನಿಪ್ಪಾಡಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದವರು ವಿವರ ನೀಡಿದರು.

ಕುಲಾಲ ಸಮಾಜದ ಸಾಧಕರಾದ ಸಹಕಾರಿ ಧುರೀಣ ಶ್ರೀ ಬಿ.ಎಸ್ ಕುಲಾಲ್ ಪುತ್ತೂರು, ಸಾಮಾಜಿಕ ಧಾರ್ಮಿಕ ಮುಂದಾಳು, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಸೀತಾರಾಮ ಬಂಗೇರ, ಹಿರಿಯ ಸೇವಕಿ ಶ್ರೀಮತಿ ಮಾಲತಿ, ಹಿರಿಯ ಪತ್ರಕರ್ತರಾದ ಚಿದಂಬರ ಬೈಕಂಪಾಡಿ, ಜಿಲ್ಲಾ ಧಾಮೀಕ ಪರಿಷತ್ ಸದಸ್ಯರಾದ ಗೋಪಾಲ ಕುತ್ತಾರ್ ಮಾತ್ರವಲ್ಲದೆ ಜನಪ್ರತಿನಿಧಿಗಳಾಗಿ ಚುನಾಯಿತರಾದ ಹಲವರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ. ಸಭಾ ಕಾರ್ಯಕ್ರಮದ ಬಳಿಕ ಸಮಾಜದ ವಿವಿಧ ಪ್ರತಿಭೆಗಳ ಸಾಂಸ್ಕೃತಿಕ ವೈವಿಧ್ಯವೂ ನಡೆಯಲಿದೆ ಎಂದು ಮಯೂರ್ ಉಳ್ಳಾಲ್ ಮಾಹಿತಿ ನೀಡಿದರು.

ದ.ಕ ಜಿಲ್ಲೆಯಲ್ಲಿ 32 ಕುಲಾಲ ಸಂಘಗಳನ್ನು ಪ್ರತಿನಿಧಿಸುವ ಮಾತೃಸಂಘದಲ್ಲಿ ಎರಡೂವರೆ ಲಕ್ಷಕ್ಕಿಂತಲೂ ಮಿಕ್ಕಿ ಸಮುದಾಯದ ಸದಸ್ಯರಿದ್ದು ಪೋಲೀಸ್ ಲೇನ್‍ನ ಶ್ರೀ ದೇವಿ ದೇವಸ್ಥಾನ ಹಾಗೂ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ನಿರ್ವಹಣೆಯ ಜವಾಬ್ದಾರಿಯು ಸಂಘಕ್ಕಿದೆ.

ಪತ್ರಿಕಾಗೋಷ್ಠಿಯಲ್ಲಿ ಪುರುಷೋತ್ತಮ ಕುಲಾಲ್ ಕಲ್ಬಾವಿ (ಆಡಳಿತ ಮೊಕ್ತೇಸರರು ಶ್ರೀ ವೀರನಾರಾಯಣ ದೇವಸ್ಥಾನ, ಕುಲಶೇಖರ ಮಂಗಳೂರು), ಲ| ಅನಿಲ್ ದಾಸ್ (ಗೌರವ ಸಂಚಾಲಕರು, ಕುಲಾಲ ಸಮ್ಮಿಲನ ಸ್ವಾಗತ ಸಮಿತಿ), ಗಿರೀಶ್ ಕೆ.ಎಚ್ (ಸಂಚಾಲಕರು, ಕುಲಾಲ ಸಮ್ಮಿಲನ ಸ್ವಾಗತ ಸಮಿತಿ), ದಯಾನಂದ ಅಡ್ಯಾರ್ (ಉಪಾಧ್ಯಕ್ಷರು, ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ), ಜೈರಾಜ್ ಪ್ರಕಾಶ್ (ಉಪಾಧ್ಯಕ್ಷರು ಯಾನೆ ಕುಲಾಲರ ಮಾತೃ ಸಂಘ), ಚಂದ್ರಕಾಂತ್ (ಪ್ರಧಾನ ಕಾರ್ಯದರ್ಶಿ ದ.ಕ ಜಿಲ್ಲಾ ಯಾನೆ ಕುಲಾಲರ ಮಾತೃ ಸಂಘ), ಚಿದಂಬರ ಬೈಕಂಪಾಡಿ (ಹಿರಿಯ ಪತ್ರಕರ್ತರು) ಉಪಸ್ಥಿತರಿದ್ದರು.

__Sathish Kapikad

Comments are closed.