
ಮುಂಬಾಯಿ: ತಾಂಡವ್ ವೆಬ್ ಸರಣಿಯ ವಿಚಾರವಾಗಿ ವಿವಾದಗಳು ಹೆಚ್ಚಾಗುತ್ತಲೇ ಇದ್ದು, ಇದೀಗ ಬಾಲಿವುಡ್ ವೆಬ್ ಸಿರೀಸ್ ʼತಾಂಡವ್ʼ ತಂಡಕ್ಕೆ ಬಂಧನ ಭೀತಿ ಎದುರಾಗಿದೆ.
ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪವನ್ನ ಎದುರಿಸುತ್ತಿರುವ ಬಾಲಿವುಡ್ ವೆಬ್ ಸಿರೀಸ್ ʼತಾಂಡವ್ʼವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನಿರ್ದೇಶಕ ಅಲಿ ಅಬ್ಬಾಸ್ ಹಾಗೂ ಇತರರ ಈ ಸಂಬಂಧ ಮುಂದಿನ ವಿಚಾರಣೆಯನ್ನ ನಾಲ್ಕು ವಾರಗಳ ಬಳಿಕ ನಡೆಸೋದಾಗಿ ಹೇಳಿದೆ. ಇದರಿಂದ ʼತಾಂಡವ್ʼ ತಂಡಕ್ಕೆ ಬಂಧನ ಭೀತಿ ಎದುರಾಗಿದೆ. ತಾಂಡವ್ ವೆಬ್ ಸರಣಿ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್, ನಿರ್ಮಾಪಕ ಫರಾನ್ ಅಖ್ತರ್, ನಟ ಜೀಶಾನ್ ಅಯುಬ್, ಸೈಫ್ ಅಲಿ ಖಾನ್ ಹಾಗೂ ಅಮೆಜಾನ್ ಪ್ರೈಂ ವಿಡಿಯೋದ ಅಪರ್ಣಾ ಪುರೋಹಿತ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸಿನಿಮಾದಲ್ಲಿ ಹಿಂದೂ ಭಾವನೆಗೆ ಧಕ್ಕೆ ತರಲಾಗಿದೆ ಹಾಗೂ ಹಿಂದೂ ದೇವರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಾಕಷ್ಟು ವಿರೋಧದ ಬಳಿಕ ಸಿನಿಮಾ ತಂಡ ಕೂಡ ಕ್ಷಮೆಯಾಚಿಸಿತ್ತು.
ಆದರೆ ಈ ವೆಬ್ ಸಿರೀಸ್ನ ವಿರುದ್ಧ ಅನೇಕ ರಾಜ್ಯಗಳಿಂದ ವಿರೋಧ ವ್ಯಕ್ತವಾಗ್ತಿದೆ. ತಾಂಡವ್ ವೆಬ್ ಸರಣಿಯ ವಿರುದ್ಧ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ಪ್ರಕರಣ ದಾಖಲಾಗಿದೆ.
ಈಗಾಗಲೇ ದೇಶದ ವಿವಿಧ ಕೋರ್ಟ್ಗಳಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾ. ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಹಾಗೂ ಎಂಆರ್ ಶಾ ನೇತೃತ್ವದ ನ್ಯಾಯಪೀಠ ಎಫ್ಐಆರ್ ರದ್ದು ಕೋರಿ ಮೊದಲು ಹೈರ್ಕೋಟ್ ಅರ್ಜಿ ಸಲ್ಲಿಸಿ ಎಂದು ಚಿತ್ರತಂಡಕ್ಕೆ ಸೂಚನೆ ನೀಡಿದೆ.
Comments are closed.