ಕರಾವಳಿ

ಶರಣ್ ಪಂಪವೆಲ್ ವಿರುದ್ಧ ಅಪಪ್ರಚಾರ : ಆರೋಪಿಗಳ ವಿರುದ್ಧ ದೂರು ದಾಖಲಿಸಿ ಕ್ರಮಕೈಗೊಳ್ಳುವಂತೆ ಕಮಿಷನರ್ ಆದೇಶ

Pinterest LinkedIn Tumblr

ಮಂಗಳೂರು : ವಿಶ್ವ ಹಿಂದೂ ಪರಿಷದ್ ಮುಖಂಡರಾದ ಶರಣ್ ಪಂಪವೆಲ್ ಮೇಲೆ ಸುಳ್ಳು ಆರೋಪಗಳ ಅಪಪ್ರಚಾರ ಮಾಡುವವರ ವಿರುದ್ಧ ಪೊಲೀಸ್ ಕಮಿಷನರ್ ದೂರು ದಾಖಲಿಸಲು ಕದ್ರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ಗೆ ಆದೇಶ ನೀಡಿದ್ದು, ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್ಯಾಧ್ಯಕ್ಷರಾದ ಪ್ರೊ ಎಂಬಿ ಪುರಾಣಿಕ್ ತಿಳಿಸಿದ್ದಾರೆ.

ವಾಟ್ಸಪ್ಪ್ ಮತ್ತು ಇತರ ಸಾಮಾಜಿಕ ಜಾಲ ತಾಣಗಳಲ್ಲಿ ಶರಣ್ ಪಂಪವೆಲ್ ರವರ ಮೇಲೆ ಮಾನಹಾನಿಕಾರಕ ಮತ್ತು ಅವಹೇಳನಕಾರಿ ಪ್ರಕಟಣೆಗಳು ಹರಿದಾಡುತ್ತಿದ್ದು, ಮಾರಿಪಳ್ಳ ಫ್ರೆಂಡ್ಸ್, ಸೋಡಾ ಉಮೇಶ್ ನಾಯ್ಕ್, ಶಿವ ಪ್ರಸಾದ್ ಅನ್ನಿ, ಕರಾವಳಿ ಮಿಡಿಯಾ ಫೇಸ್ ಬುಕ್ ಪೇಜ್, ಮಸೂಕ್ ಬೊಳ್ಳಾಯಿ, ಬೆಳ್ತಂಗಡಿಯ ರಝಿಕ್ ಟಿ ಕೆ,ನ್ಯೂ ಸಿಟಿ ಹಲಾಲ್ ಚಿಕೆನ್ ಪಾಣೆಮಂಗಳೂರು ವಾಟ್ಸಾಪ್ ಪೇಜ್ ಗಳ ಮೇಲೆ ಶರಣ್ ಪಂಪವೆಲ್ ದೂರು ದಾಖಲಿಸಿದ್ದು ತಕ್ಷಣ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್ಯಾಧ್ಯಕ್ಷರಾದ ಪ್ರೊ ಎಂಬಿ ಪುರಾಣಿಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Comments are closed.