ಕುಂದಾಪುರ: ಮಂಗಳವಾರ ತಡರಾತ್ರಿ ನಗರದ ಬಹದ್ದೂರ್ ಷಾ ರಸ್ತೆಯಲ್ಲಿ ಕಿರಣ್ ಕುಮಾರ್ ಅವರಿಗೆ ಸೇರಿದ ಆಲ್ಟೋ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಮನೆಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಹೊತ್ತಿಕೊಂಡದ್ದಕ್ಕೆ ಸ್ಪಷ್ಟ ಕಾರಣ ಇನ್ನು ತಿಳಿದು ಬಂದಿಲ್ಲ.
ಕುಂದಾಪುರ ಅಗ್ನಿಶಾಮದ ದಳದ ಸಿಬ್ಬಂದಿಗಳಾದ ಪ್ರದೀಪ್, ಮುಸ್ತಾಫ್, ಕೃಷ್ಣ ನಾಯಕ್, ಮಹೇಶ್ ಶೆಟ್ಟಿ, ಹೋಮ್ ಗಾರ್ಡ್ ಮಂಜುನಾಥ್ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ.
Comments are closed.